ನಿವೇದಿತಾ

Author : ಪ್ರಭುಶಂಕರ

Pages 120

₹ 15.00




Year of Publication: 1975
Published by: ರಾಷ್ಟ್ರೋತ್ಥಾನ ಸಾಹಿತ್ಯ
Address: ಕೇಶವ ಶಿಲ್ಪ, ಕೆಂಪೇಗೌಡ ನಗರ, ಬೆಂಗಳೂರು-560019.
Phone: 9945036300

Synopsys

ನಿವೇದಿತಾ ಜೀವನಚರಿತ್ರೆ ಪುಸ್ತಕವನ್ನು ಲೇಖಕ ಪ್ರಭುಶಂಕರ ಅವರು ರಚಿಸಿದ್ದಾರೆ. ದೂರದ ಐರ್ಲೆಂಡಿನ ತರುಣಿ ಮಾರ್ಗರೇಟ್ ನೋಬ್ಲ್ ವೀರ ಸನ್ಯಾಸಿ ವಿವೇಕಾನಂದರ ಪ್ರಭಾವದಿಂದ ಭಾರತೀಯರ ಸೇವೆಗಾಗಿ ಭಾರತಕ್ಕೆ ಬಂದಳು, ಭಗವಂತನಿಗೆ ಸಮರ್ಪಿತಳಾಗಿ ನಿವೇದಿತಾ ಎಂಬ ಹೆಸರು ಪಡೆದಳು. ಎಳೆಯರಿಗೆ, ಅವರ ತಾಯಿಯರಿಗೆ ವಿದ್ಯೆ ಕಲಿಸಿದಳು. ಪ್ಲೇಗ್ ಬಂದಾಗ, ಕ್ಷಾಮ ಬಂದಾಗ, ಪ್ರವಾಹ ಬಂದಾಗ ಕಾರುಣ್ಯದ ಮೂರ್ತಿಯಾಗಿ ಉದ್ಧರಿಸಿದಳು. ತ್ಯಾಗ-ಸೇವೆಗಳ ಜೀವಂತ ಮೂರ್ತಿ, ಅಮರ ಸಂಕೇತ ನಿವೇದಿತಾ ಎಂದು ಅವರ ಕುರಿತಾಗಿ ಇಲ್ಲಿ ವಿವರಿಸಲಾಗಿದೆ. ಇಲ್ಲಿ ಅವರ ಜೀವನದ ಪ್ರಮುಖ ಘಟ್ಟಗಳನ್ನು ಲೇಖಕರು ನವಿರಾಗಿ ಚಿತ್ರಿಸಿದ್ದಾರೆ.

About the Author

ಪ್ರಭುಶಂಕರ
(15 February 1929)

ಬರಹಗಾರರಾದ ಪ್ರಭುಶಂಕರ ಅವರು ಜನಿಸಿದ್ದು 1929  ಫೆಬ್ರುವರಿ 15ರಂದು. ಮೈಸೂರು ವಿಶ್ವವಿದ್ಯಾಲಯದಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿರುವ ಇವರು ಕುವೆಂಪು ಅವರ ಮಾರ್ಗದರ್ಶನದಲ್ಲಿ ‘ಕನ್ನಡದಲ್ಲಿ ಭಾವಗೀತೆ’ ಪ್ರಬಂಧ ಮಂಡಿಸಿ ಪಿಎಚ್‌ಡಿ ಪದವಿ ಪಡೆದರು.  ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಂಡಿದ್ದ ಇವರು  ಅಮೆರಿಕ ಭೇಟಿಯ ಕುರಿತು ’ಅಮೆರಿಕಾದಲ್ಲಿ ನಾನು ಮತ್ತು ಶಾಂತಿ’ ಎಂಬ ಪ್ರವಾಸ ಕಥನ ರಚಿಸಿದ್ದಾರೆ. ಅವರ ಕೆಲವು ಕೃತಿಗಳು- ಕನ್ನಡದಲ್ಲಿ ಭಾವಗೀತೆ, ಅಂಗುಲೀಮಾಲ, ಆಮ್ರಪಾಲಿ, ಖಲೀಲ್ ಗಿಬ್ರಾನ್, ಕಾವ್ಯಯೋಗ, ಅಮೆರಿಕದಲ್ಲಿ ನಾನು ಶಾಂತಿ, ನಿವೇದಿತಾ, ಜನ-ಮನ, ಚಿಂತೆ-ಚಿಂತನೆ, ಮಂದಹಾಸ ಮೀಮಾಂಸೆ ಇತ್ಯಾದಿ.  ...

READ MORE

Related Books