ನಮ್ಮ ಜೆಪಿ (ವ್ಯಕ್ತಿಚಿತ್ರ)

Author : ಲಕ್ಷ್ಮಣ ಕೊಡಸೆ

Pages 148

₹ 120.00




Year of Publication: 2017
Published by: ಸಿರಿವರ ಪ್ರಕಾಶನ
Address: ಸಿರಿವರ ಪ್ರಕಾಶನ, ಮಾಗಡಿ ರಸ್ತೆ, ಬೆಂಗಳೂರು-560 023

Synopsys

ನಮ್ಮ ಜೆಪಿ-ಲೇಖಕ ಲಕ್ಷ್ಮಣ ಕೊಡಸೆ ಅವರ ಕೃತಿ. 6ನೇ ತರಗತಿಯವರೆಗೆ ಮಾತ್ರ ಶಾಲೆಗೆ ಹೋಗಿ ಕಲಿತಿದ್ದ ಜೆ.ಪಿ.ನಾರಾಯಣಸ್ವಾಮಿ ಅವರು ಕುಲಕಸುಬು ಮತ್ತು ವ್ಯಾಪಾರ ವ್ಯವಹಾರದಿಂದ ಹಲವಾರು ಡಿಸ್ಟಿಲರಿಗಳು ಮತ್ತು ತಾರಾದರ್ಜೆಯ ಹೋಟಲುಗಳನ್ನು ಕಟ್ಟಿ ಅಭಿವೃದ್ಧಿಪಡಿಸಿ ಯಶಸ್ವಿ ಉದ್ಯಮಿಯಾಗಿದ್ದವರು. ಬಡತನ ಅನುಭವಿಸಿದ್ದ ಅವರು ಹಲವು ಉಚಿತ ವಿದ್ಯಾರ್ಥಿನಿಲಯಗಳನ್ನು ಆರಂಭಿಸಿ ಬಡ ವಿದ್ಯಾರ್ಥಿಗಳಿಗೆ ಆಸರೆ ಆದವರು.

ತಳ ಸಮುದಾಯದ ಏಳಿಗೆಗಾಗಿ ತಮ್ಮ ಗಳಿಕೆಯಲ್ಲಿ ಮೀಸಲಿಟ್ಟ ಅವರು ಹಿಂದುಳಿದ ಗ್ರಾಮೀಣ ಯುವಜನತೆಯ ಸಬಲೀಕರಣಕ್ಕಾಗಿ ಶ್ರಮಿಸುವ ಅನೇಕ ಸಂಘಟನೆಗಳನ್ನು ಆರಂಭಿಸಿದವರು. ಸಂಪರ್ಕಕ್ಕೆ ಬಂದವರ ಜೊತೆ ನಮ್ಮವರು ಎಂಬ ಆಪ್ತ ಭಾವವನ್ನು ಮೂಡಿಸುತ್ತಿದ್ದ ಜೆಪಿ ಅಕಾಲದಲ್ಲಿ ನೇಪಥ್ಯಕ್ಕೆ ಸರಿದಿದ್ದು ಸಮಾಜಕ್ಕೆ ಆಗಿರುವ ನಷ್ಟ. `ಜೆಪಿ ನನ್ನ ನೆನಪಿನ ಅಂಗಳದಲ್ಲಿ ಬಾಡದ ಹೂವು' ಎಂದು ಸ್ಮರಿಸಿಕೊಂಡಿದ್ದಾರೆ ನಾಡೋಜ ಹಂಪನಾ.

About the Author

ಲಕ್ಷ್ಮಣ ಕೊಡಸೆ
(12 April 1953)

ಕತೆಗಾರ, ಪತ್ರಕರ್ತ ಲಕ್ಷ್ಮಣ ಕೊಡಸೆ ಅವರು 1953 ಏಪ್ರಿಲ್ 12ರಂದು ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕಿನ ಕೊಡಸೆ ಗ್ರಾಮದಲ್ಲಿ ಜನಿಸಿದರು. ತಾಯಿ ಭರ್ಮಮ್ಮ, ತಂದೆ ಕರಿಯನಾಯ್ಕ. ಹುಟ್ಟೂರು ಹಾಗೂ ಹೊಸನಗರದಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಇವರು ಬೆಂಗಳೂರು ವಿಶ್ವವಿದ್ಯಾಲಯದಿಂದ ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಪ್ರಜಾವಾಣಿಯಲ್ಲಿ ಉಪಸಂಪಾದಕರಾಗಿ, ಮುಖ್ಯವರದಿಗಾರರಾಗಿ ಸುದ್ದಿ ವಿಭಾಗದ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸಿ ನಿವೃತ್ತಿ ಹೊಂದಿದ್ದಾರೆ.  ‘ಅಪ್ಪನ ಪರಪಂಚ, ಕೊಡಚಾದ್ರಿ, ಸಹಪಥಿಕ, ಅವ್ವ, ಬಿ. ವೆಂಕಟಾಚಾರ್ಯ, ಕುವೆಂಪು ಮತ್ತು, ಕನ್ನಡ ವಿಮರ್ಶಾ ವಿವೇಕ, ಹಾಯಿದೋಣಿ’ ಅವರ ಪ್ರಮುಖ ಕೃತಿಗಳು.    ...

READ MORE

Related Books