ದಾದಾಭಾಯಿ ನವರೋಜಿ

Author : ಹ.ವೆಂ. ನಾಗರಾಜರಾವ್

Pages 102

₹ 15.00




Year of Publication: 1975
Published by: ರಾಷ್ಟ್ರೋತ್ಥಾನ ಸಾಹಿತ್ಯ
Address: ಕೇಶವ ಶಿಲ್ಪ, ಕೆಂಪೇಗೌಡ ನಗರ, ಬೆಂಗಳೂರು-560019
Phone: 9945036300

Synopsys

ದಾದಾಭಾಯಿ ನವರೋಜಿ ಅವರ ಜೀವನಚರಿತ್ರೆಯನ್ನು ಕಟ್ಟಿಕೊಡುವ ಕೃತಿ ಇದು. ಲೇಖಕ ಹ.ವೆಂ. ನಾಗರಾಜರಾವ್‌ ಅವರು ರಚಿಸಿದ್ದಾರೆ. ಈ ಕೃತಿಯಲ್ಲಿ ದಾದಾಬಾಯಿ ನವರೋಜಿ ಅವರು ಬ್ರಿಟಿಷ್ ಪಾರ್ಲಿಮೆಂಟ್ ಗೆ ಆಯ್ಕೆಯಾದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಯ ಇತಿಹಾಸ, "ಸ್ವರಾಜ್ಯ" ಎಂಬ ಪದವನ್ನು ಮೊದಲ ಬಾರಿಗೆ ಬಳಸಿದ ಬಗೆ, ಭಾರತದಲ್ಲಿ ಪ್ರಥಮ ಬಾರಿಗೆ "ತಲಾ ಆದಾಯವನ್ನು" ಅಳಿದ ದಿನಗಳು, "ಸಂಪತ್ತಿನ ಸೋರಿಕೆ ಸಿದ್ಧಾಂತವನ್ನು" ಪ್ರತಿಪಾದಿಸಿದ ಪರಿ, ಈಸ್ಟ್ ಇಂಡಿಯಾ ಅಸೋಸಿಯೇಷನ್ ಸಂಸ್ಥೆಯ ಹುಟ್ಟು ಹೀಗೆ ಹಲವು ಅಯಾಮಗಳನ್ನು ಲೇಖಕರು ಈ ಪುಸ್ತಕದಲ್ಲಿ ಸರಳ ಕನ್ನಡದಲ್ಲಿ ವಿವರಿಸಿದ್ದಾರೆ.

About the Author

ಹ.ವೆಂ. ನಾಗರಾಜರಾವ್
(08 May 1926 - 09 February 1992)

ಚಾಮರಾಜನಗರ ಜಿಲ್ಲೆಯ ಚಾಮರಾಜನಗರ ತಾಲ್ಲೂಕಿನ ಹರುವೆ ಗ್ರಾಮದವರು. (ಜನನ: 08-05-1926) ತಂದೆ ವೆಂಕಟರಾವ್‌, ತಾಯಿ ರಾಜಮ್ಮ. ಓದಿದ್ದು ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಇಂಟರ್ ಮೀಡಿಯೇಟವರೆಗೆ. ಜನವಾಣಿ ಪತ್ರಿಕೆಯಲ್ಲಿ ಉದ್ಯೋಗ. ಜಾಮತ ವಾರಪತ್ರಿಕೆಯ (1973) ಮುಖ್ಯಸಂಪಾದಕರಾದರು. ರಷ್ಯಕ್ಕೆ ಭೇಟಿ ನೀಡಿ ಬಂದನಂತರ ಪ್ರವಾಸ ಕಥನ  ‘ನವರಷ್ಯದ ನೋಟ’ ಬರೆದರು. ಕರ್ನಾಟಕ ಸಾಹಿತ್ಯ ಅಕಾಡಮಿಯ ದ್ವಿತೀಯ ಬಹುಮಾನ ಪಡೆಯಿತು. ಹಿಂದಿಗೂ ಅನುವಾದಗೊಂಡಿತು. ಮೊದಲ ಕಥಾ ಸಂಕಲನ ‘ಕತ್ತಲೆಬೆಳಕು’. ಇಲ್ಲಿಯ ರಂಗಾಶಾಮಿ ಕಥೆಯು, ಕೆ.ನರಸಿಂಹಮೂರ್ತಿ ಅವರು ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಕಟಣೆಗಾಗಿ ಸಂಪಾದಿಸಿದ ‘ಅತ್ಯುತ್ತಮ ಸಣ್ಣ ಕಥೆಗಳು’ ಸಂಕಲನದಲ್ಲಿದೆ. ಇದೇ ಕಥೆಯು ಇಂಗ್ಲಿಷ್‌ಗೂ ಅನುವಾದಗೊಂಡಿದೆ.  ...

READ MORE

Related Books