ಕಮಲಾದೇವಿ ಚಟ್ಟೋಪಾಧ್ಯಾಯ

Author : ಜ್ಯೋತ್ಸ್ನಾ ಕಾಮತ್

Pages 120

₹ 80.00




Year of Publication: 2016
Published by: ನವಕರ್ನಾಟಕ ಪ್ರಕಾಶನ
Address: # ಎಂಬೆಸಿ ಸೆಂಟರ್, ಕ್ರೆಸೆಂಟ್ ರಸ್ತೆ, ಶಿವಾನಂದ ವೃತ್ತ ಬಳಿ, ಕುಮಾರಪಾರ್ಕ್ ಪೂರ್ವ, ಬೆಂಗಳೂರು-560001
Phone: 08030578020

Synopsys

ಹಿರಿಯ ಲೇಖಕಿ ಜ್ಯೋತ್ಸ್ನಾ ಕಾಮತ ಅವರು ‘ಕಮಲಾದೇವಿ ಚಟ್ಟೋಪಾಧ್ಯಾಯ’ ಜೀವನ ಚಿತ್ಕೃರಣ ನೀಡುವ ಕೃತಿ. ಕೃತಿಯು 15 ಅಧ್ಯಾಯಗಳನ್ನು ಒಳಗೊಂಡಿದೆ. ಚಿಗುರಿದ ಸೌಂದರ್ಯ ಬಾಲ್ಯ, ಅರಳತೊಡಗಿತು ಕಮಲ, ಪ್ರಾಯ, ಲಗ್ನ, ಶಿಕ್ಷಣ, ಸೇವಾಕ್ಷೇತ್ರದಲ್ಲಿ ಪ್ರವೇಶ, ಸಕ್ರಿಯ ರಾಜಕಾರಣ : ಅಸಹಕಾರ ಚಳವಳಿ, ಉಪ್ಪಿನ ಸತ್ಯಾಗ್ರಹ : ಸೇವೆಯಿಂದ ಮುಖಂಡತ್ವಕ್ಕೆ, ಕಾರಾಗೃಹದ ಬದುಕು : ಅಪೂರ್ವ ತ್ಯಾಗಿ, ಮಹಿಳೆಯರಿಗಾಗಿ : ವೈಯುಕ್ತಿಕ ಮತ್ತು ಪರಿಷತ್ತಿನ ಸೇವೆ, ವಿಶ್ವ ಸಂಚಾರ : ಅಸೀಮ ಸಾಹಸ, ಪಶ್ಚಿಮರಂಗ-1, ಪೂರ್ವರಂಗ-2, ನಿರಾಶ್ರಿತರಾಗಿ ಸಹಕಾರಿ ಸಂಘಟನೆ, ಹಸ್ತಕಲೆಯ ಮಾತೆ : ಅಭಯದಾನ, ಕಲಾರಂಗ: ಅಭಿನಯ, ನಾಟಕ, ಸಿನೆಮಾ, ಕರ್ನಾಟಕಕ್ಕೆ ದೇಣಿಗೆ, ಕೆಲಸ ಬೇಕು, ಪ್ರತಿಷ್ಠೆ ಬೇಡ, ಹೇಗಿದ್ದರು, ನಮ್ಮ ಕಮಲಮ್ಮ?, ಕಮಲ ಬಾಡಿತು; ಪರಂಪರೆ ಉಳಿಯಿತು, ಕಮಲಾದೇವಿಯವರ ಬದುಕಿನ ಪ್ರಮುಖ ಘಟ್ಟಗಳು, ಆಧಾರ ಗ್ರಂಥಗಳು ಇವೆಲ್ಲವನ್ನೂ ಒಳಗೊಂಡಿದೆ. 

About the Author

ಜ್ಯೋತ್ಸ್ನಾ ಕಾಮತ್
(24 January 1937 - 24 August 2022)

ಸಂಶೋಧಕಿ, ಸ್ತ್ರೀ ಚಿಂತನೆಯ ಕನ್ನಡದ ಬರಹಗಾರ್ತಿ ಜ್ಯೋತ್ಸ್ನಾ ಕಾಮತ್ ಅವರು 1937 ಜನವರಿ 24 ರಂದು ಮಹಾರಾಷ್ಟ್ರದ ಸಾತಾರ ಜಿಲ್ಲೆಯ ವಾಯಿಯಲ್ಲಿ ಜನಿಸಿದರು. ‘ಸಂಸಾರದಲ್ಲಿ ಸ್ವಾರಸ್ಯ, ಹೀಗಿದ್ದೇವೆ ನಾವು, ನಗೆಕೇದಿಗೆ’ ಅವರ ಪ್ರಬಂಧ ಸಂಕಲನಗಳು. ‘ಕರ್ನಾಟಕದಲ್ಲಿ ಶಿಕ್ಷಣ ಪರಂಪರೆ, ಕರುನಾಡಿನ ಜನಜೀವನ, ಕೈಗನ್ನಡಿಯಲ್ಲಿ ಕನ್ನಡತಿ’ ಅವರ ಸಂಶೋಧನಾ ಕೃತಿಗಳು. ‘ಮಹಿಳೆ ಒಂದು ಅಧ್ಯಯನ, ನೆನಪಿನಲ್ಲಿ ನಿಂತವರು, ಮಹಿಳೆ ಅಂದು-ಇಂದು’ ಅವರ ಮಹಿಳಾ ಅಧ್ಯಯನ ಕೃತಿಗಳು. ಇದಲ್ಲದೆ ಶಾಂತಲೆ-ವಿಷ್ಣುವರ್ಧನ, ಕಮಲಾದೇವಿ ಚಟ್ಟೋಪಾಧ್ಯಾಯರ ಜೀವನ ಕೃತಿಗಳನ್ನು ರಚಿಸಿದ್ದು ಅವರ ಈ ಸಾಹಿತ್ಯ ಸೇವೆಗೆ ‘ಕರ್ನಾಟಕ ಸಾಹಿತ್ಯ ಅಕಾಡೆಮಿ ಬಹುಮಾನ, ಕರ್ನಾಟಕ ಸರ್ಕಾರದ ರಾಜ್ಯೋತ್ಸವ ಪ್ರಶಸ್ತಿ, ಕೆ.ಶಾಮರಾವ್ ದತ್ತಿನಿಧಿ ಪುರಸ್ಕಾರ, ...

READ MORE

Related Books