ಹೈದರ್ ಅಲಿ

Author : ಶಶಿಕಲಾಗೌಡ ಎಂ. ಎಸ್.

Pages 48

₹ 30.00




Year of Publication: 2015
Published by: ನವಕರ್ನಾಟಕ ಪ್ರಕಾಶನ
Address: 101, ಎಂಬಸಿ ಸೆಂಟರ್, ಕ್ರೂಸೆಂಟ್ ರಸ್ತೆ, ಕುಮಾರ್ ಪಾರ್ಕ್ ಈಸ್ಟ್, ಬೆಂಗಳೂರು - 560 001

Synopsys

ಎಂ.ಎಸ್. ಶಶಿಕಲಾಗೌಡ ಅವರ ಕೃತಿ-ಹೈದರ್ ಅಲಿ ಹೈದರ್ ಅಲಿ. ಓರ್ವ ಸಾಮಾನ್ಯ ಯೋಧ. ಪಾರಸಿ ಭಾಷೆಯಲ್ಲಿ ಹೈದರ್ ಎಂದರೆ ಹುಲಿ ಎಂದರ್ಥ. ಎತ್ತರವಾದ ನಿಲುವು. ದಷ್ಟಪುಷ್ಟ ಮೈ. ತೀಕ್ಷ್ಣ ದೃಷ್ಟಿ. ನೀಳ ಮೂಗು. ಮಹಾನ್ ಶಕ್ತಿಶಾಲಿ. ಧೈರ್ಯಶಾಲಿ. ತಂತ್ರ ನಿಪುಣ. ರಾಜಕೀಯ ಚಾಣಾಕ್ಷ. ಸ್ವಂತವಾಗಿ ಆಲೋಚಿಸಬಲ್ಲವ. ಉತ್ಸಾಹ ಅವನಲ್ಲಿ ತುಂಬಿ ತುಳುಕುತ್ತಿತ್ತು. ಎಂತಹ ಸೋಲಾದರೂ ಎದೆಗುಂದುತ್ತಿರಲಿಲ್ಲ. ಇತರರ ದೌರ್ಬಲ್ಯಗಳನ್ನು ಅರಿತು ಆಕ್ರಮಣವನ್ನು ಮಾಡುತ್ತಿದ್ದ. ಹೈದರ್ ಅಲಿ ಅನಕ್ಷರಸ್ಥ. ಆದರೆ ಕನ್ನಡ, ತೆಲುಗು, ತಮಿಳು, ಮರಾಠಿ, ಪರ್ಷಿಯನ್, ಹಿಂದುಸ್ತಾನಿ ಭಾಷೆಗಳಲ್ಲಿ ಸುಲಲಿತವಾಗಿ ಮಾತನಾಡುತ್ತಿದ್ದನು. ಹೈದರ್ ಅಲಿ ನೆರೆಹೊರೆಯವರೊಡನೆ ನಿರಂತರ ಯುದ್ಧ ಮಾಡುತ್ತಲೇ ತನ್ನ ಬದುಕನ್ನು ಕಳೆದ. ಕೊನೆಗೆ ಬೆನ್ನುನೋವು ಕಾರಣ ಮರಣಿಸಿದ. ತಾನೆಂದು ಮೈಸೂರು ಸಿಂಹಾಸನವನ್ನು ಏರುವ ಕನಸನ್ನು ಕಾಣಲಿಲ್ಲ. 

About the Author

ಶಶಿಕಲಾಗೌಡ ಎಂ. ಎಸ್.
(12 October 1969)

ಶಶಿಕಲಾಗೌಡ ಎಂ.ಎಸ್., ಎಂ.ಎ., ರಾಷ್ಟಭಾಷಾ ಪ್ರವೀಣ್, ಡಿ.ಫಾರ್ಮಾ ಪದವಿ ಪಡೆದಿದ್ದಾರೆ. ಬೆಂಗಳೂರಿನಲ್ಲಿ 12-10-1969ರಂದು ಜನಿಸಿದರು. ಇವರ ಕೃತಿಗಳು: ಎ.ಕೆ. ಸುಬ್ಬಯ್ಯ (ಜೀವನ ಚರಿತ್ರೆ-ಪ್ರತಿಭಾವಂತ ಸಂಸದೀಯ ಪಟುಗಳ ಮಾಲಿಕೆ) ಗಾಂಧಾರಿ (ಕೋಮಲ್ ಗಾಂಧಾರ್‌ ನಾಟಕದ ಅನುವಾದ ಹಿಂದಿಯಿಂದ) ಕೃತಿ ಪ್ರಕಟವಾಗಿದೆ. ಕನ್ನಡದಿಂದ ಹಿಂದಿಗೆ, ಹಿಂದಿಯಿಂದ ಕನ್ನಡಕ್ಕೆ ಕನ್ನಡದಿಂದ ಇಂಗ್ಲಿಷಿಗೆ ಕೃತಿಗಳ ಅನುವಾದ ಕೆಲಸವನ್ನು ಮಾಡಿದ್ದಾರೆ.  ವಸಂತ ಬಿರುಗಾಳಿ ಎಂಬ ಅಸ್ಸಾಮಿ ಮೂಲದ ಕನ್ನಡ ಅನುವಾದ ನಾಟಕ ರಾಷ್ಟ್ರೀಯ ನಾಟಕ ಮಾಲಿಕೆಯಲ್ಲಿ ಪ್ರಸಾರವಾಗಿದೆ. ನಾಟಕ ರಚನೆ, ಅಭಿನಯ, ವಸ್ತ್ರವಿನ್ಯಾಸ ಇತ್ಯಾದಿಯಲ್ಲಿ ಸಕ್ರಿಯರು. ಚಂದನವಾಹಿನಿಯ ಹಲವಾರು ಧಾರಾವಾಹಿಗಳಲ್ಲಿ ಅಭಿನಯಿಸಿದ್ದಾರೆ. 1998ರಿಂದಲೂ ರಾಷ್ಟ್ರ ...

READ MORE

Related Books