ರಣಧೀರ ಕಂಠೀರವ

Author : ಆರ್‍ಯಾಂಬ ಪಟ್ಟಾಭಿ

Pages 120

₹ 15.00




Year of Publication: 1974
Published by: ರಾಷ್ಟ್ರೋತ್ಥಾನ ಸಾಹಿತ್ಯ
Address: ಕೇಶವ ಶಿಲ್ಪ, ಕೆಂಪೇಗೌಡ ನಗರ, ಬೆಂಗಳೂರು-560019.

Synopsys

`ರಣಧೀರ ಕಂಠೀರವ'  ಜೀವನಚರಿತ್ರೆಯ ಪುಸ್ತಕವಿದು. ಲೇಖಕ ಆರ್ಯಾಂಬ ಪಟ್ಟಾಭಿ ರಚಿಸಿದ್ದಾರೆ.  ಅಸಾಧಾರಣ ಶಕ್ತಿಯನ್ನು ಹೇಗೆ ಬಳಸಬೇಕು ಎಂಬುದಕ್ಕೆ ಮಾದರಿ ಮೈಸೂರಿನ ಈ ಅರಸು. ಏಕಾಂಗಿಯಾಗಿ ಇಪ್ಪತ್ತೈದು ಮಂದಿ ಕೊಲೆಗಡುಕರನ್ನು ಸೋಲಿಸಿ ಓಡಿಸಿದ ಧೀರ. ಆದರೆ, ಅವರ ಶಕ್ತಿ ಎಲ್ಲ ದುರಹಂಕಾರಿಗಳ ಮತ್ತು ದುಷ್ಟರ ಶಿಕ್ಷೆಗೆ, ಪ್ರಜೆಗಳ ಪರಿಪಾಲನೆಗೆ ಮುಡಿಪು. ದೇಹಬಲದಲ್ಲಿ ಅವರಿಗೆ ಸರಿಸಮನಾದವರಿರಲಿಲ್ಲ; ಆಡಳಿತದ ದಕ್ಷತೆಯಲ್ಲಿ,ಪ್ರಜಾವಾತ್ಸಲ್ಯದಲ್ಲಿ ಅವರಿಗೆ ಸರಿಸಮರಾದ ಅರಸರೇ ವಿರಳ ಎಂದು ಪುಸ್ತಕದ ಕುರಿತಾಗಿ ಇಲ್ಲಿ ವಿವರಿಸಲಾಗಿದೆ.

About the Author

ಆರ್‍ಯಾಂಬ ಪಟ್ಟಾಭಿ
(12 March 1936)

ಕಾದಂಬರಿಗಾರ್ತಿ ಆರ್‍ಯಾಂಬ ಪಟ್ಟಾಭಿ ಸಮಾಜಶಾಸ್ತ್ರದಲ್ಲಿ ಸ್ನಾತಕೋತ್ತರ ಪದವೀಧರೆ. 1936 ಮಾರ್ಚ್‌ 12 ರಂದು ಮಂಡ್ಯದಲ್ಲಿ ಜನಿಸಿದರು. ತಂದೆ ಬಿ. ಎಂ. ಕೃಷ್ಣಸ್ವಾಮಿ, ತಾಯಿ ತಂಗಮ್ಮ. ’ಹೊಂಗನಸು, ಆರಾಧನೆ, ಸವತಿಯ ನೆರಳು, ಕಪ್ಪು-ಬಿಳುಪು, ನನ್ನವಳು’ ಅವರ ಕಥಾಸಂಕಲನಗಳು. ’ಅನುರಾಗ’, ನರಭಿಕ್ಷುಕ ಕಾದಂಬರಿಗಳನ್ನುಹಾಗೂ ಮಕ್ಕಳ ಮತ್ತು ಕ್ರೀಡೆಗೆ ಸಂಬಂಧಿಸಿದ ಕೃತಿಗಳನ್ನು ರಚಿಸಿದ್ದಾರೆ. 'ಟೆನ್ನಿಸ್'’ ಕೃತಿಗೆ ಮಲ್ಲಿಕಾ ಪ್ರಶಸ್ತಿ, ಬಿ. ಸರೋಜದೇವಿ ಶ್ರೀಹರ್ಷ ಪ್ರಶಸ್ತಿ ಸಂದಿವೆ. ...

READ MORE

Related Books