ಅಣ್ಣ ಮಹಾಬಲ

Author : ರಾಜಶೇಖರ ಜೋಗಿನ್ಮನೆ

Pages 160

₹ 150.00




Year of Publication: 2022
Published by: ತೇಜು ಪಬ್ಲಿಕೇಷನ್ಸ್‌
Address: ನಂ. 1014, 24ನೇ ಮುಖ್ಯರಸ್ತೆ, 16ನೇ ಕ್ರಾಸ್‌, ಬಿ.ಎಸ್.‌ಕೆ. 2ನೇ ಹಂತ ಬೆಂಗಳೂರು- 560 070
Phone: 9900195626

Synopsys

ಲೇಖಕ ರಾಜಶೇಖರ ಜೋಗಿನ್ಮನೆಯವರ ಹೊಸ ಕೃತಿ ‘ಅಣ್ಣ ಮಹಾಬಲ’, ಎಂ.ಎ. ಹೆಗಡೆ ಜೀವನ ಭಾವನ ಸಾಧನ. ಪುಸ್ತಕದ ತಲೆಬರಹವೇ ಸೂಚಿಸುವಂತೆ ಇದು ವಿದ್ವಾಂಸರಾದ ದಿ. ಪ್ರೊ.ಎಂ ಎ ಹೆಗಡೆ ಅವರ ಬದುಕಿನ ಪ್ರಮುಖ ಘಟ್ಟಗಳನ್ನು ದಾಖಲಿಸುವ ಬರಹವಾಗಿದೆ. ಕಳೆದ ವರ್ಷ ನಿಧನರಾದ ಇವರ ವಾರ್ಷಿಕದ ಸಂದರ್ಭದಲ್ಲಿ ನೆನಪಿನ ಕಾಣಿಕೆಯಾಗಿ ಬಿಡುಗಡೆಗೊಂಡ ಈ ಪುಸ್ತಕದಲ್ಲಿ ಹೆಗಡೆಯವರ ಸಾಧನೆ ಹಾಗೂ ಬರಹಗಳನ್ನೂ ಪರಿಚಯಿಸಲಾಗಿದೆ. ವಿದ್ವಾಂಸರ ವಲಯದಲ್ಲಿ, ಯಕ್ಷಗಾನದ ಮನಸ್ಸುಗಳಲ್ಲಿ ಪ್ರೊ. ಎಂ. ಎ. ಹೆಗಡೆ ಎಂದು ಚಿರಪರಿಚಿತವಾದ ಇವರ ಪೂರ್ಣ ಹೆಸರು ಮಹಾಬಲೇಶ್ವರ ಅಣ್ಣಪ್ಪ ಹೆಗಡೆ. ತಮ್ಮ ಕಿರು ಪ್ರಾಯದಲ್ಲೇ ಯಕ್ಷಗಾನ- ಚೆಂಡೆ ಮದ್ದಳೆಗಳಿಗೆ ಮಾರು ಹೋದ ಇವರು ಓದು ಬರಹದ ಮೇಲೂ ಹೆಚ್ಚಿನ ಆಸಕ್ತಿ ನೆಟ್ಟಿದ್ದರು. ಅಪಾರ ಪುಸ್ತಕಗಳ ಸಂಗ್ರಹದ ಜೊತೆಗೆ ಪ್ರಸಿದ್ದ ಭಾಗವತರಾದ ಕಡತೋಕಾ ಮಂಜುನಾಥ ಅವರ ʼಯಕ್ಷಗಾನʼ ಹೆಸರಿನ ಪತ್ರಿಕೆಯನ್ನೂ ನಿಯತವಾಗಿ ಓದಿ ಅದು ಮುಂದೆ ಅವರಲ್ಲಿ ಚಿಂತಿಸುವ ಒಲವು ಮೂಡಲು ಕಾರಣವಾಯಿತು. ತಮ್ಮ 14ನೇ ವಯಸ್ಸಿನಲ್ಲಿ ಬಸವನಕೊಡ್ಲಿನಲ್ಲಿ ಸ್ತ್ರೀ ವೇಶದೊಂದಿಗೆ ಯಕ್ಷಗಾನದ ರಂಗಪ್ರವೇಶ ಮಾಡಿದ ಹೆಗಡೆಯವರು ಬಳಿಕ ಲೆಕ್ಕ ಸಿಗದಷ್ಟು ಯಕ್ಷಗಾನ ಮೇಳಗಳಲ್ಲಿ ಬಣ್ದ ಹಚ್ಚಿ ಕಲಾ ಪ್ರೇಮಿಗಳಿಂದ ಭೇಷ್‌ ಎನಿಸಿಕೊಂಡ ಹೆಮ್ಮೆ ಇವರದು. ʼಆದಿಪರ್ವʼ ಕೃತಿʼಯ ಮೂಲಕ ಯಕ್ಷಗಾನದಲ್ಲೊಂದು ವಿಶೇಷ ಸ್ಥಾನವನ್ನು ಪಡೆದುಕೊಂಡಿದ್ದ ಎಂ ಎ ಹೆಗಡೆಯವ ಅಕಾಡೆಮಿ ಅಧ್ಯಕ್ಷರಾಗಿಯೂ ಬಹಳಷ್ಟು ಕೆಲಸಮಾಡಿದ್ದಾರೆ. ಇನ್ನು, ಈ ಪುಸ್ತಕಕ್ಕೆ ಮುನ್ನುಡಿಯನ್ನು ಬರೆದ ಕೆ.ವಿ. ಅಕ್ಷರ ಅವರು, ಶ್ರೀ ಹೆಗಡೆಯವರು ನಮ್ಮ ಕಾಲದ ಅಪರೂಪದ ವ್ಯಕ್ತಿಗಳಲ್ಲೊಬ್ಬರು ಮಾತ್ರವಲ್ಲ, ಅಷ್ಟಾಗಿ ಪ್ರಸಿದ್ದರಾಗದೆ ಉಳಿದ ಅಸಾಮಾನ್ಯರು. ಈ ಬರಹವು ತೆರೆಮರೆಯ ಇಂಥ ಅಸಮಾನ್ಯ ವ್ಯಕ್ತಿಗಳನ್ನು ನೆನಪಿಸಿಕೊಳ್ಳುವ ಇನ್ನೂ ಹಲವು ಪ್ರಯತ್ನಗಳಿಗೆ ಸ್ಪೂರ್ತಿಯಾಗಲಿ ಎಂದು ಹರಸಿದ್ದಾರೆ.

About the Author

ರಾಜಶೇಖರ ಜೋಗಿನ್ಮನೆ

ರಾಜಶೇಖರ ಜೋಗಿನ್ಮನೆ ಅವರ ಮೂಲ ಉತ್ತರ ಕನ್ನಡ ಜಿಲ್ಲೆಯ ಸಿದ್ಧಾಪುರ ತಾಲೂಕಿನ ಜೋಗಿನ್ಮನೆ ಗ್ರಾಮ. ತಂದೆ ಅಣ್ಣಪ್ಪ ಹೆಗಡೆ, ತಾಯಿ ಕಾಮಾಕ್ಷಿ ಹೆಗಡೆ. ವೃತ್ತಿಯಿಂದ ವಿಜಯವಾಣಿ ದಿನಪತ್ರಿಕೆಯಲ್ಲಿ ಸುದ್ದಿ ಸಂಪಾದಕರು. ಪ್ರವೃತ್ತಿಯಿಂದ ಕಥೆಗಾರರು. ನೀರಿನ ಕುರಿತ ಬರೆಹವೊಂದಕ್ಕೆ ’ಚರಕ ಅಭಿವೃದ್ಧಿ ಪತ್ರಿಕೋದ್ಯಮ ಪ್ರಶಸ್ತಿ ಸಂದಿದೆ. ಸಂಗೀತ, ಸಿನಿಮಾ, ನಾಟಕ, ಯಕ್ಷಗಾನ, ಸಾಹಿತ್ಯ- ಇವರ ಆಸಕ್ತಿ ಕ್ಷೇತ್ರಗಳು. ...

READ MORE

Related Books