ಸ್ಟೈಲಿಂಗ್ ಅಟ್ ದಿ ಟಾಪ್

Author : ಶಿವಾನಂದ ಬೇಕಲ್

Pages 244

₹ 499.00




Year of Publication: 2019
Published by: ಮಂಜುಳ ಪಬ್ಲಿಷಿಂಗ್ ಹೌಸ್
Address: ಕಾರ್ಪೊರೇಟ್ ಮತ್ತು ಎಡಿಟೋರಿಯಲ್ ಆಫೀಸ್, 2ನೇ ಹಂತ, ಉಷಾ ಪ್ರೀತ್ ಸಂಕೀರ್ಣ, 42 ಮಾಲ್ವೀಯ ನಗರ್, ಭೂಪಾಲ್-462003, ಇಂಡಿಯಾ

Synopsys

ಬಾಲಿವುಡ್ ನ ಖ್ಯಾತ ಕೇಶವಿನ್ಯಾಸಕ ಶಿವರಾಮ ಭಂಡಾರಿಯ ಜೀವನ ಪಯಣ ‘ಸ್ಟೈಲಿಂಗ್ ಅಟ್ ದಿ ಟಾಪ್’. ಮೂಲ ಇಂಗ್ಲಿಷ್ ಕೃತಿಯನ್ನು ಜಯಶ್ರೀ ಶೆಟ್ಟಿ ಬರೆದಿದ್ದು, ಅದನ್ನು ಡಾ. ಶಿವಾನಂದ ಬೇಕಲ್ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ.

ಶಿವರಾಮ ಕೆ. ಭಂಡಾರಿ, ಮುಂಬಯಿಯಲ್ಲಿ ನೆಲೆಸಿರುವ, ಕೇಶ ವಿನ್ಯಾಸದಲ್ಲಿ ’ಶಿವಾಸ್ ಅಥವಾ ಶಿವ’ ಎಂದೇ ಪ್ರಸಿದ್ಧರು. ಬಾಲಿವುಡ್ ಸೆಲೆಬ್ರೆಟಿಗಳು ರಾಜಕೀಯ ವ್ಯಕ್ತಿಗಳು, ಕಾರ್ಪೊರೇಟ್ ಸಾಧಕರು ಇವರ ಗ್ರಾಹಕರು. ಈ ಥಳುಕಿನ ನಗರದ ಕನಸಿನ ಲೋಕದ ಬದುಕಿಗಾಗಿ ಹಾತೊರೆದು ಬರುವ ಅಸಂಖ್ಯಾತ ಯುವಕರಿಗೆ ಕೇಶಕೌಶಲ್ಯದಲ್ಲಿ ತರಬೇತಿ ನೀಡುತ್ತಾ ಬಂದಿದ್ದಾರೆ.

ಪ್ರತಿಷ್ಠಿತ ಅಂತಾರಾಷ್ಟ್ರೀಯ ಅಕಾಡೆಮಿಗಳಾದ - ವಿದಾಲ್ ಸಸ್ಸೂನ್ ಮಚ್ಚು ಟೋನಿ & ಗೈಯ ಹಳೆ ವಿದ್ಯಾರ್ಥಿ. ಕರ್ನಾಟಕದ ಒಂದು ಪುಟ್ಟ ಹಳ್ಳಿಯಲ್ಲಿ ಕ್ಷೌರಿಕ ಸಮುದಾಯದಲ್ಲಿ ಜನಿಸಿದ್ದು,ಅಂಬೆಗಾಲಿನ ಶಿಶಿವಾಗಿದ್ದಾಗ ತಮ್ಮ ತಂದೆಯನ್ನು ಕಳೆದುಕೊಂಡರು. ಅವರ ಬದುಕಿನ ಬಹುಭಾಗ ಬಡತನ ಮತ್ತು ವೈಯಕ್ತಿಕ ದುರಂತಗಳಿಂದ ಕಳೆದು ಹೋಯಿತು. ಜೀವನ ನಿರ್ವಹಣೆಗೆ ತಮ್ಮ ತಾಯಿಗೆ ಸಹಾಯ ನೀಡಲು 5ನೇ ತರಗತಿಯಲ್ಲೇ ಶಾಲೆ ಬಿಟ್ಟರು. ಕಾಯಿಲೆಗೆ ತುತ್ತಾಗಿದ್ದ ಪುಟ್ಟ ತಂಗಿಯೂ ತೀರಿಕೊಂಡಳು. ಕ್ಯಾನ್ಸರ್ ಗೆ ತುತ್ತಾಗಿ ಮೊದಲ ಮಡದಿಯೂ ಮಡಿದಳು. 

ಶಿವ ಕ್ಷೌರ ವೃತ್ತಿಯ ಪ್ರಾರಂಭಿಕ ಕೌಶಲ್ಯಗಳನ್ನು ಕಲಿತದ್ದು ಚಿಕ್ಕಪ್ಪನೊಂದಿಗೆ ವೇತನವಿಲ್ಲದೇ ಕೆಲಸ ಮಾಡುತ್ತಿದ್ದು, ಯಾತನೆಯನ್ನು ಅನುಭವಿಸಿದರು. ಆದರೆ  ಅದೇ ಶಿವ, ತಮ್ಮದೇ ಹೆಸರಿನ ಪ್ರಖ್ಯಾತ ಬ್ರ್ಯಾಂಡ್ ಆರಂಭಿಸಿ ಯಶಸ್ವಿಯಾಗಿದ್ದು, ಬಾಲಿವುಡ್ ನ ಖ್ಯಾತ ಕೇಶವಿನ್ಯಾಸಕರಾಗಿ ಗುರುತಿಸಿಕೊಂಡಿದ್ದಾರೆ. ಮುಂಬೈನಲ್ಲಿ ನೆಲೆಸಿರುವ ಶಿವ ಅವರ ಬದುಕಿನ ಪಯಣವೇ ಈ ಕೃತಿ.

About the Author

ಶಿವಾನಂದ ಬೇಕಲ್
(21 February 1951)

ಡಾ. ಶಿವಾನಂದ ಬೇಕಲ್ ಅವರು ಹುಟ್ಟಿದ್ದು ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ಹೊಸದುರ್ಗ ತಾಲ್ಲೂಕಿನ ಐತಿಹಾಸಿಕ ಸ್ಥಳ ಬೇಕಲ್ ನಲ್ಲಿ. ತಂದೆ- ಬೇಕಲ್  ಸಾಂತನಾಯಕರು, ತಾಯಿ- ಲಲಿತಾಬಾಯಿ. ಪ್ರಾಥಮಿಕದಿಂದ ಹೈಸ್ಕೂಲುವರೆಗೆ ವಿದ್ಯಾಭ್ಯಾಸ ನಡೆದದ್ದು ಬೇಕಲ್‌ನಲ್ಲಿ . ಕಾಸರಗೋಡಿನಲ್ಲಿ ಬಿ.ಎಸ್ಸಿ, ಮೈಸೂರು ವಿಶ್ವವಿದ್ಯಾಲಯದಿಂದ ಬಿ.ಎಡ್, ಕರ್ನಾಟಕ ವಿಶ್ವ ವಿದ್ಯಾಲಯದಿಂದ ಎಂ.ಎ. ಮತ್ತು ಗುಲಬರ್ಗಾ ವಿಶ್ವ ವಿದ್ಯಾಲಯದಿಂದ ಡಾಕ್ಟರೇಟ್ ಪಡೆದರು. 16ನೇ ವಯಸ್ಸಿನಲ್ಲಿ ಬರೆದ ‘ಕೇದಗೆಯ ಹಾವು’ ಮೊದಲ ಕಥೆಗೆ 1968ರಲ್ಲಿ ಪ್ರಜಾವಾಣಿ ದೀಪಾವಳಿ ಕಥಾಸ್ಪರ್ಧೆಯಲ್ಲಿ ಬಹುಮಾನ ಗಳಿಸಿತು. ಇವರ ಲೇಖನ ಕೃಷಿ ಮಂಗಳೂರಿನ ನವಭಾರತ, ಕಿನ್ನಗೋಳಿಯ ಯುಗಪುರುಷ ನಂತರ  ಸುಧಾ, ತರಂಗ, ಪ್ರಜಾವಾಣಿ, ...

READ MORE

Related Books