ಇಮ್ಮಡಿ ಪುಲಕೇಶಿ

Author : ಪ್ರಕಾಶ್‌ ಹೇಮಾವತಿ

Pages 184

₹ 200.00




Year of Publication: 2021
Published by: ದಿವ್ಯ ಪ್ರಕಾಶನ
Address: ಪೂರ್ಣಿಮ ಚತ್ರಮ್‌ ರೋಡ್‌, ಬಲ್‌ಪೇಟ್‌ ಬೆಂಗಳೂರು 560053
Phone: 09448259595

Synopsys

ಚಾಲುಕ್ಯ ವಂಶದ ಪ್ರಸಿದ್ಧ ದೊರೆ. (ಕ್ರಿ.ಶ ೬೧೦-೬೪೨) ಇಮ್ಮಡಿ ಪುಲಕೇಶಿ. ಈತನ ಕಾಲದಲ್ಲಿ ಬಾದಾಮಿ ಚಾಲುಕ್ಯರ ಸಾಮ್ರಾಜ್ಯವು ದಖನ್ ಪ್ರಸ್ಥಭೂಮಿಯ ಹೆಚ್ಚಿನ ಪ್ರದೇಶವನ್ನು ಆವರಿಸಿತು. ಬಾದಾಮಿಯ ಚಾಳುಕ್ಯರೆಂದು ಪ್ರಸಿದ್ಧರಾದ ಈ ವಂಶಜರು ಸುಮಾರು ೨೦೦ ವರ್ಷಗಳ ಕಾಲ ತಮ್ಮ ರಾಜ್ಯಭಾರವನ್ನು ಸ್ಥಾಪಿಸಿದ್ದರು. ಕ್ರಿ.ಶ.ಸು. ೫೦೦ರಲ್ಲಿ ಜಯಸಿಂಹನಿಂದ ಪ್ರಾರಂಭವಾದ ಚಾಲುಕ್ಯ ಮನೆತನದ ಆಡಳಿತವು ಕ್ರಿ.ಶ. ೭೫೭ರಲ್ಲಿ ಎರಡನೆಯ ಕೀರ್ತಿವರ್ಮನ ಕಾಲದಲ್ಲಿ ಮುಕ್ತಾಯವಾಯಿತು. ಇಮ್ಮಡಿ ಪುಲಕೇಶಿ ಕುರಿತ ಐತಿಹಾಸಿಕ ಕಾದಂಬರಿ ಇದಾಗಿದೆ.

About the Author

ಪ್ರಕಾಶ್‌ ಹೇಮಾವತಿ

ಮೂಲತಃ ಬೆಂಗಳೂರಿನವರಾಗಿದ್ದು ಚಿಕ್ಕಂದಿನಿಂದಲೂ ಕನ್ನಡ ಸಾಹಿತ್ಯ ಹಾಗೂ ಕರ್ನಾಟಕ ಚರಿತ್ರೆಗಳ ಬಗೆಗೆ ಅಪಾರ ಅಸಕ್ತಿ ಬೆಳೆಸಿಕೊಂಡಿರುವ ಪ್ರಕಾಶ ಹೇಮಾವತಿಯವರು ಬೆಂಗಳೂರಿನ ವಿಶ್ವೇಶ್ವರ ಇಂಜಿನಿಯರಿಂಗ್ ಕಾಲೇಜಿನ ವಾಸ್ತುಶಿಲ್ಪ ಶಾಸ್ತದ ಪದವೀಧರರು. ಕಳೆದ ನಲವತ್ತು ವರುಷಗಳಿಂದಲೂ ಅಮೇರಿಕಾದಲ್ಲಿ ನೆಲೆಸಿರುವ ಇವರು ಇದುವರೆಗೆ ಕರ್ನಾಟಕ ಚರಿತ್ರೆಯ ಬಗೆಗೆ ಹಲವಾರು ಲೇಖನಗಳನ್ನು ಬರೆದಿದ್ದಾರೆ. ಇದರೊಂದಿಗೆ ಕಾದಂಬರಿ, ಕಥೆ, ಕವನ, ನಾಟಕಗಳನ್ನು ಸಹ ರಚಿಸಿದ್ದಾರೆ. ಹಲವು ನಾಟಕಗಳನ್ನು ಬರೆದು ಶಿಕಾಗೋ ಹಾಗೂ ಇನ್ನಿತರೆಡೆಗಳಲ್ಲಿ ಪ್ರಸ್ತುತಪಡಿಸಿದ್ದಾರೆ. ಕೃತಿಗಳು "ಅಮೋಘವರ್ಷ" , "ಒಬಾಮ", "ಇಮ್ಮಡಿ ಪುಲಿಕೇಶಿ". ...

READ MORE

Related Books