ಕೆ. ಅಮೀನ ಪೇಂಟರ್‌

Author : ಮಲ್ಲಿಕಾರ್ಜುನ ಮೇತ್ರಿ

Pages 56

₹ 30.00




Year of Publication: 2001
Published by: ಕರ್ನಾಟಕ ನಾಟಕ ಅಕಾಡೆಮಿ
Address: ಕನ್ನಡ ಭವನ, ಜೆ.ಸಿ. ರಸ್ತೆ, ಬೆಂಗಳೂರು
Phone: 08022237484

Synopsys

ರಂಗಭೂಮಿಯಲ್ಲಿ ನಟ, ಸಂಗೀತಕಾರ, ನಾಟಕಕಾರ ಮುಂತಾದವರು ಸಾಮಾನ್ಯವಾಗಿ ಕಣ್ಣಿಗೆ ಕಾಣುತ್ತಾರೆ. ಆದರೆ ಅವರೆಲ್ಲರ ಪರೋಕ್ಷ ವ್ಯಕ್ತಿತ್ವಗಳ ಮೇಲೆ ಬಣ್ಣಬಣ್ಣದ ದೃಶ್ಯಾವಳಿಗಳ ಪರದೆ-ಸೀನರಿಗಳ ಮೂಲಕ ಪ್ರಭಾವಚಿತ್ರಗಳನ್ನು ಬಿಡಿಸುವ ವೃತ್ತಿ ರಂಗದ ಜೀವಾಳವೇ ಆಗಿರುವ ಸೀನರಿ ಚಿತ್ರಕಾರರ ಬಗ್ಗೆ ನಮ್ಮ ಕಲಾಲೇಖನಿ ಬರೆದದ್ದು ಕಡಿಮೆ. ಈ ಪುಸ್ತಕದಲ್ಲಿ ಕೂಡುಗುಳಿಯ ಅಮೀನ ಪೇಂಟರ್‌ ಅವರ ಬಗ್ಗೆ ಅನೇಕ ಮಹತ್ವದ ವಿವರಗಳಿವೆ. ಡಾ. ಮಲ್ಲಿಕಾರ್ಜುನ ಮೇತ್ರಿ ಅವರು ಈ ಕೃತಿಯನ್ನು ಸಂಪಾದಿಸಿದ್ದಾರೆ.

About the Author

ಮಲ್ಲಿಕಾರ್ಜುನ ಮೇತ್ರಿ
(01 June 1967)

ಬರಹಗಾರ ಡಾ. ಮಲ್ಲಿಕಾರ್ಜುನ ಸಂಗಪ್ಪ ಮೇತ್ರಿ ಅವರು 1967 ಜೂನ್‌ 1ರಂದು ಜನಿಸಿದರು. ವಿಜಯಪುರ ಜಿಲ್ಲೆ ಇಂಡಿ ತಾಲ್ಲೂಕಿನ ಪಡನೂರ ಇವರ ಹುಟ್ಟೂರು. ಇಂಡಿಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಇವರು ಕರ್ನಾಟಕ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ‘ಕರ್ನಾಟಕ ಗಾಂಧಿ ಹರ್ಡೇಕರ ಮಂಜಪ್ಪ ಜೀವನ ಮತ್ತು ಕೃತಿಗಳು’ ವಿಷಯ ಮಂಡನೆಗೆ ಇವರಿಗೆ ಪಿ.ಎಚ್.ಡಿ. ಪದವಿ ದೊರೆತಿದೆ.  ಕನ್ನಡಮ್ಮ ದಿನಪತ್ರಿಕೆಯಲ್ಲಿ ಉಪ ಸಂಪಾದಕರಾಗಿ ವೃತ್ತಿ ಆರಂಭಿಸಿದ ಇವರು ಪ್ರಸ್ತುತ ಇನಾಮದಾರ ಕಲಾ ಮತ್ತು ವಿಜ್ಞಾನ ಮಹಿಳಾ ಮಹಾವಿದ್ಯಾಲಯದಲ್ಲಿ ಕನ್ನಡ ವಿಭಾಗ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.  ಕೃತಿಗಳು: ಕ್ಯಾಂಪಸ್ಸಿನ ಕವಿತೆಗಳು, ಮುದ್ರೆ ...

READ MORE

Related Books