ಎಲ್ಲರ ಅಂಬೇಡ್ಕರ್

Author : ಎಚ್.ಟಿ. ಪೋತೆ

Pages 88

₹ 100.00




Year of Publication: 2023
Published by: ಜನ ಪ್ರಕಾಶನ
Address: ಜನ ಪ್ರಕಾಶನ, 54, ಭೈರಯ್ಯ ನಿವಾಸ, 11ನೇ ಮೈನ್, 14ನೇ ಕ್ರಾಸ್, 5ನೇ ಬ್ಲಾಕ್, ಜಯನಗರ, ಬೆಂಗಳೂರು-560041
Phone: 94483 24727

Synopsys

ಜಾತಿವ್ಯವಸ್ಥೆ ಅಸ್ಪ್ರಶ್ಯತೆಯ ಆಚರಣೆಯಲ್ಲಿ ನೊಂದು-ಬೆಂದು, ಶೋಷಿತರ ಸ್ವಾಭಿಮಾನದ ಧ್ವನಿಯಾದ ಅಂಬೇಡ್ಕರ್ ಅವರ ಜೀವನಗಾಥೆಯನ್ನು ತಿಳಿಸುವ ಕೃತಿ ಎಚ್.ಟಿ. ಪೋತೆ ಅವರ ‘ಎಲ್ಲರ ಅಂಬೇಡ್ಕರ್’ ಬಾಬಾಸಾಹೇಬ್ ಡಾ. ಅಂಬೇಡ್ಕರ್ ಅರಿವಿನ ಕಥನವಾಗಿದೆ. ಜನ ಸಾಮಾನ್ಯರ ಮತ್ತು ವಿದ್ಯಾರ್ಥಿ ಯುವಜನರ ತಿಳುವಳಿಕೆಗಾಗಿಯೇ ಈ ಕೃತಿಯನ್ನು ಡಾ. ಎಚ್‌.ಟಿ. ಪೋತೆ ರಚಿಸಿಕೊಟ್ಟಿದ್ದಾರೆ. ದಲಿತ ಚಳವಳಿಯನ್ನೇ ಉಸಿರಾಗಿಸಿಕೊಂಡಿರುವ, ಎಲ್ಲಾ ಜನಪರ ಚಳವಳಿಗಳ ಒಡನಾಡಿ ದಲಿತ ಸಂಘರ್ಷ ಸಮಿತಿಯ (ಅಂಬೇಡ್ಕರ್‌ವಾದ) ರಾಜ್ಯ ಸಂಚಾಲಕರಾದ ಮಾವಳ್ಳಿ ಶಂಕರ್‌ರವರು ಮತ್ತು ಪ್ರಗತಿಪರ ಆಶಯಗಳನೊತ್ತ, ಕ್ರಿಯಾಶೀಲ ವ್ಯಕ್ತಿತ್ವದ ಕಿಗ್ಗ ರಾಜಶೇಖರ್ ರವರ ಒತ್ತಾಸೆಯಿಂದ ಈ ಕೃತಿ ಹೊರಬಂದಿದೆ.

About the Author

ಎಚ್.ಟಿ. ಪೋತೆ

ಕಥೆಗಾರ, ವಿಮರ್ಶಕ, ಅನುವಾದಕ, ಚಿಂತಕ, ಜಾನಪದ ವಿದ್ವಾಂಸ ಹಾಗೂ ಸಂಶೋಧಕರಾದ ಪ್ರೊ. ಎಚ್.ಟಿ.ಪೋತೆ ಬಿಸಿಲನಾಡಿನ ದಿಟ್ಟಪ್ರತಿಭೆ. ಬುದ್ದ. ಬಸವ, ಅಂಬೇಡ್ಕರ್, ಫುಲೆ, ಪೆರಿಯಾರ್, ಬಿ. ಶ್ಯಾಮಸುಂದರ್ ಚಿಂತನೆಗಳ ನೆಲೆಯಲ್ಲಿ ಸಾಹಿತ್ಯ ಕೃಷಿಗೈದವರು. ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಹಂಜಗಿ ಪೋತೆಯವರ ಜನ್ಮಸ್ಥಳ, ಗುಲ್ಬರ್ಗಾ ವಿವಿಯಿಂದ ಎಂ.ಎ, ಎಂ.ಫಿಲ್, ಪಿಎಚ್ಡಿ. ಅಂಬೇಡ್ಕರ್ ಕುರಿತಾದ ಕನ್ನಡದ ಮೊದಲ ಡಿ.ಲಿಟ್ ಪಡೆದ ಹೆಗ್ಗಳಿಕೆ. ಗುಲ್ಬರ್ಗಾ ವಿವಿಯ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಪ್ರಾಧ್ಯಾಪಕ, ಪ್ರಸಾರಂಗದ ನಿರ್ದೇಶಕ, ಅಂಬೇಡ್ಕರ್‌ ಅಧ್ಯಯನ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕ, ಕರ್ನಾಟಕ ವಿವಿ ಮೌಲ್ಯಮಾಪನ ಕುಲಸಚಿವರಾಗಿ ಅವರದ್ದು ಬಹುರೂಪಿ ಶೈಕ್ಷಣಿಕ ...

READ MORE

Related Books