ಜೈತ್ರಯಾತ್ರೆ

Author : ಕೆ. ಜೈರಾಜ್

Pages 328

₹ 250.00




Published by: ಅಂಕಿತ ಪುಸ್ತಕ
Address: 53, ಶ್ಯಾಮ್‌ಸಿಂಗ್ ಕಾಂಪ್ಲೆಕ್ಸ್, ಗಾಂಧಿಬಜಾರ್ ಮುಖ್ಯರಸ್ತೆ, ಬಸವನಗುಡಿ, ಬೆಂಗಳೂರು - 560 004
Phone: 08026617100

Synopsys

ಲೇಖಕ ಕೆ. ಜೈರಾಜ್ ಅವರ ಆಡಳಿತದ ಅನುಭವಗಳ ಕೃತಿ ಜೈತ್ರಯಾತ್ರೆ. ಈ ಕೃತಿಗೆ ಎಸ್.ಕೆ. ಶೇಷಚಂದ್ರಿಕ ಅವರು ಬೆನ್ನುಡಿಯ ಮಾತುಗಳನ್ನು ಬರೆದಿದ್ದಾರೆ. ಅವರು ಹೇಳುವಂತೆ, "ಆಡಳಿತ ಕ್ಷೇತ್ರದಲ್ಲಿ ಸುಮಾರು 37 ವರುಷಗಳ ನಿಸ್ಪೃಹ ಸೇವೆ ಸಲ್ಲಿಸಿದ ಅನುಭವಿ ಅಧಿಕಾರಿಯೊಬ್ಬರು ತಮ್ಮ ಅಧಿಕಾರಾವಧಿಯ ನೆನಪುಗಳನ್ನು `ಜೈತ್ರಯಾತ್ರೆ'ಯಾಗಿ ದಾಖಲಿಸಿರುವ ಅಪೂರ್ವ ಸಾಹಸ ನಡೆಸಿದ್ದಾರೆ. ರಾಷ್ಟ್ರ ಮತ್ತು ರಾಜ್ಯ ಮಟ್ಟದಲ್ಲಿ ಇದೊಂದು ಆಡಳಿತಾನುಭವದ ಮೈಲಿಗಲ್ಲು. ಏಕೋ, ಏನೋ ತಿಳಿಯದು ಸ್ವಭಾವತಃ ಐ.ಎ.ಎಸ್. ಅಧಿಕಾರಿಗಳು ತಮ್ಮ ಅನಿಸಿಕೆಗಳನ್ನು ಮುಕ್ತವಾಗಿ ತೆರೆದಿಡುವುದು ಅಪರೂಪ. ಅಧಿಕಾರದ ಹಂತ ಏರಿದಂತೆಲ್ಲ ಸಂಕೋಚ ಮತ್ತು ಹಿಂಜರಿಕೆಗೆ ಒಳಗಾಗುವುದು ಅಧಿಕಾರಿಗಳ ಲಕ್ಷಣ. ಆದರೆ ಅಚ್ಚಕನ್ನಡಿಗ ಕೆ. ಜೈರಾಜ್ ಹೀಗಲ್ಲ. ಇವರು ಧೈರ್ಯಶಾಲಿ, ಗಟ್ಟಿಗ, ಸಂವೇದನಾ ಜೀವಿ. ಸ್ವಾತಂತ್ರ್ಯಾನಂತರದ ಭಾರತೀಯ ಆಡಳಿತ ಸೇವಾ ಕ್ಷೇತ್ರದಲ್ಲಿ ತಾವು ಕಂಡ, ಅನುಭವಿಸಿದ ಹಾಗೂ ನಾಡಿನ ಜನತೆಗೆ ನೆರವಾದ ನೂರೆಂಟು ಘಟನೆಗಳನ್ನು ಕೆ. ಜೈರಾಜ್ ಅವರು ಬರೆದಿಟ್ಟ ಮೊದಲಿಗರಾಗಿದ್ದಾರೆ. ಈ ಗ್ರಂಥ `ಜೈತ್ರಯಾತ್ರೆ'ಯು ಇಂದಿನ ಅಧಿಕಾರಿ ಬಳಗಕ್ಕೆ ಮಾರ್ಗಸೂಚಿಯಾಗುವಂತೆಯೇ ಮುಂದೆ ಬರುವ ನಾಳಿನ ಪೀಳಿಗೆಯ ಅಧಿಕಾರಿಗಳಿಗೆ ಮೇಲ್ಪಂಕ್ತಿಯ ಸಂಹಿತೆಯಾಗುವುದರಲ್ಲಿ ಸಂದೇಹವಿಲ್ಲ." ಎಂದಿದ್ದಾರೆ.

About the Author

ಕೆ. ಜೈರಾಜ್

ಲೇಖಕ ಕೆ. ಜೈರಾಜ್ ಅವರು ಭಾರತ ಆಡಳಿತ ಸೇವೆಯ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದು,  ಅವರ ಬರಹಗಳ ಕೇಂದ್ರ ಸಾಮಾಜಿಕ ಕಳಕಳಿ.  ಕೃತಿಗಳು : ರಾಜಮಾರ್ಗ ...

READ MORE

Related Books