ಮುಳುಗದ ಸೂರ್ಯ ಡಾ. ರಾಜ್ ಕುಮಾರ್

Author : ಲಕ್ಷ್ಮೀ ಶ್ರೀನಿವಾಸ್

Pages 128

₹ 140.00




Year of Publication: 2022
Published by: ಅನ್ನಪೂರ್ಣ ಪಬ್ಲಿಷಿಂಗ್ ಹೌಸ್
Address: #176, 12ನೇ ಕ್ರಾಸ್, ಅಗ್ರಹಾರ ದಾಸರಹಳ್ಳಿ, ಮಾಗಡಿ ಮುಖ್ಯ ರಸ್ತೆ, ಬೆಂಗಳೂರು- 560079

Synopsys

`ಮುಳುಗದ ಸೂರ್ಯ ಡಾ. ರಾಜ್ ಕುಮಾರ್ ‘ ಕೃತಿಯು ಜೀವನ ಚಿತ್ರಣವಾಗಿದೆ. ಲಕ್ಷ್ಮೀ ಶ್ರೀನಿವಾಸ್ ಬರೆದಿದ್ದಾರೆ. ಈ ಕೃತಿಯಲ್ಲಿನ ಕೆಲವೊಂದು ವಿಚಾರಗಳು ಹೀಗಿವೆ : ರಾಜಕುಮಾರ್ ಅವರ ಜೀವನದ ಅನೇಕ ಮುಖ್ಯ ಘಟ್ಟಗಳನ್ನು ಕುರಿತು ಹಾಗೂ ರಾಜ್ ಕುಮಾರ್ ಅವರ ಚಿತ್ರಯಾತ್ರೆಯನ್ನು ಕುರಿತು ಅನೇಕ ಮಾಹಿತಿಗಳನ್ನು ಕಲೆ ಹಾಕಿರುವ ಪುಸ್ತಕವಿದು. ರಾಜ್ ಅವರ ವ್ಯಕ್ತಿ ಚಿತ್ರವನ್ನು ಇಲ್ಲಿ ನವಿರಾಗಿ ಕಟ್ಟಕೊಟ್ಟಿದ್ದಾರೆ. ಭಕ್ತ ಕನಕದಾಸ, ಭಕ್ತ ಕುಂಬಾರ, ಬೇಡರ ಕಣ್ಣಪ್ಪ, ಓಹಿಲೇಶ್ವರ, ಕೈವಾರ ಮಹಾತ್ಮೆ, ಭೂ ಕೈಲಾಸ, ಸಂತ ತುಕಾರಾಂ ಮಹಾತ್ಮ ಕಬೀರ, ರಣಧೀರ ಕಂಠೀರವ, ಸತ್ಯ ಹರಿಶ್ಚಂದ್ರ, ಭಕ್ತಪ್ರಹ್ಲಾದ, ಕಸ್ತೂರಿ ನಿವಾಸ, ಸನಾದಿ ಅಪ್ಪಣ್ಣ, ಬಬ್ರುವಾಹನ, ಸಂಪತ್ತಿಗೆ ಸವಾಲ್, ಬಂಗಾರದ ಪಂಜರ, ಒಂದು ಮುತ್ತಿನ ಕತೆ, ಕವಿರತ್ನ ಕಾಳಿದಾಸ, ನಾಂದಿ, ಮಯೂರ, ಚಂದವಳ್ಳಿಯ ತೋಟ, ಮೇಯರ್ ಮುತ್ತಣ್ಣ, ಶ್ರೀ ಕೃಷ್ಣದೇವರಾಯ ಮುಂತಾದ ಚಿತ್ರಗಳು ಇಂದಿಗೂ ಸಿನಿಮಾ ಕ್ಷೇತ್ರದ ದೃಶ್ಯಕಾವ್ಯಗಳೇ ಸರಿ. ರಂಗಭೂಮಿಯ ಹಿನ್ನೆಲೆಯಿಂದ ಬೆಳ್ಳಿತೆರೆಯ ಚಿತ್ರರಂಗಕ್ಕೆ ಬಂದು ರಾಷ್ಟ್ರೀಯ ಮಟ್ಟದ ಉನ್ನತ ನಾಯಕನಾಗಿ ಬೆಳೆದು ನಿಂತರೂ ಸಹ ರಂಗಭೂಮಿಯ ನಂಟನ್ನು ಬಿಟ್ಟುಕೊಡದ ರಾಜ್ ಕುಮಾರ್, ಕನ್ನಡ ಭಾಷೆಯ ಧ್ವನಿ ಸೂಕ್ಷ್ಮತೆಗಳನ್ನು ಅರಿತು ಭಾಷೆಯನ್ನು ತನ್ನೆಲ್ಲಾ ಸೌಂದರ್ಯ ವಿನ್ಯಾಸದಲ್ಲಿ ಬಳಸಿ ತೋರಿದವರು ಎಂದು ಈ ಕೃತಿಯಲ್ಲಿ ವಿಶ್ಲೇಷಿಸಲಾಗಿದೆ.

About the Author

ಲಕ್ಷ್ಮೀ ಶ್ರೀನಿವಾಸ್
(22 July 1961)

ಲಕ್ಷ್ಮೀ ಶ್ರೀನಿವಾಸ್ ಅವರು ಮೂಲತಃ ಬೆಂಗಳೂರಿನವರು. 1961 ಜುಲೈ 22 ರಂದು ಜನನ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಹಲವಾರು ಪತ್ರಿಕೆಗಳಲ್ಲಿ ಇವರ ಬರಹಗಳು ಪ್ರಕಟಗೊಂಡಿರುತ್ತದೆ. ವಾಚಕರ ವಾಣಿಯಲ್ಲಿ ಬರಹಗಳು ಪ್ರಕಟಗೊಂಡಿರುತ್ತದೆ. ಸಿನಿಮಾ ಬಗ್ಗೆ ವಿಮರ್ಶೆ, ಹವ್ಯಾಸಿರಂಗಭೂಮಿಯಲ್ಲಿ ತೊಡಗಿಕೊಂಡಿದ್ದಾರೆ. ಅನೇಕ ಕನ್ನಡ ಸಂಸ್ಥೆಗಳಲ್ಲಿ ಪದಾಧಿಕಾರಿಗಳಾಗಿ ಕಾರ್ಯ ನಿರ್ವಹಿಸಿದ್ದಾರೆ. ಗೋಕಾಕ್ ವರದಿ ಹೋರಾಟದಲ್ಲಿ ಭಾಗಿ, ಸರೋಜಿನಿ ಮಹಿಷಿ ವರದಿ ಜಾರಿಗಾಗಿ ಹೋರಾಟದಲ್ಲಿ ಭಾಗಿ, ಕಾವೇರಿ ಚಳುವಳಿ, ಹೊಗೇನಕಲ್ ಚಳುವಳಿ, ದೂರದರ್ಶನದಲ್ಲಿ ರಾಮಾಯಣ ಧಾರಾವಾಹಿಯನ್ನು ಕನ್ನಡದಲ್ಲಿ ಪ್ರಸಾರ ಮಾಡಲು ವಿರೋಧಿಸಿದರು. ಕನ್ನಡಿಗರಿಗೆ ಮೂರು ಮತ್ತು ನಾಲ್ಕನೇ ದರ್ಜೇ ಹುದ್ದೆ ಕನ್ನಡ ಕಡ್ಡಾಯವಲ್ಲ ...

READ MORE

Related Books