ಮಂತ್ರ ಮಹರ್ಷಿ ಶ್ರೀ ಸದ್ಗುರೂಜಿ

Author : ಎಂ.ಜಿ. ದೇಶಪಾಂಡೆ

Pages 240

₹ 150.00




Year of Publication: 2018
Published by: ಶ್ರೀ ಹರಿ ಪ್ರಕಾಶನ
Address: # 15-3-102, ಲಕ್ಷ್ಮಿನಿಯ, ರಾಂಪೂರೆ ಕಾಲೊನಿ, ಮನ್ನಳ್ಳಿ ರಸ್ತೆ, ಬೀದರ-585403
Phone: 9449645859

Synopsys

ಮಂತ್ರ ಮಹರ್ಷಿ ಶ್ರೀ ಸದ್ಗುರೂಜಿ -ಈ ಕೃತಿಯು ಡಾ. ಎಂ.ಜಿ. ದೇಶಪಾಂಡೆ ರಚಿಸಿದ್ದು, ಶ್ರೀ ಎನ್ .ಬಿ .ರೆಡ್ಡಿ ಸದ್ಗುರೂಜಿಯವರ ಜೀವನದ ಮೇಲೆ ಬೆಳಕು ಚೆಲ್ಲುತ್ತದೆ. ಕೃತಿಯಲ್ಲಿ ಹದಿನೆಂಟು ಅಧ್ಯಾಯಗಳಿದ್ದು ಪ್ರತಿಯೊಂದು ಅಧ್ಯಾಯವು ವಿಶೇಷ ರೀತಿಯಲ್ಲಿ ಅನುಭೂತಿ ನೀಡುತ್ತದೆ. ರೇಕುಳಗಿಯ ಶ್ರೀ ಶಂಭುಲಿಂಗೇಶ್ವರರು ಮತ್ತೆ ಮಾತೆ ಬಸಮ್ಮರವರ ಆರಾಧಕರಾದ ಇವರು, ತಮ್ಮ ಪವಾಡಗಳಿಂದ ರಾಷ್ಟ್ರದ ತುಂಬೆಲ್ಲಾ ಪರಿಚಿತರು. ಅಂತಲೇ ಅವರ ಬಾಲ್ಯ ಜೀವನ ಮತ್ತು ಅವರ ಜೀವನದಲ್ಲಿ ನಡೆದು ಬಂದ ದಾರಿಯಲ್ಲಿನ ಪ್ರಸಂಗಗಳು ಹಾಗೂ ಅವರು ಮಾಡಿದ ತಪಸ್ಸುಗಳು, ಪವಾಡಗಳ ಎಲ್ಲದರ ವಿವರಣೆ ಈ ಗ್ರಂಥವು ಒಳಗೊಂಡಿದೆ. ಆಧ್ಯಾತ್ಮದ ನೆಲೆಯಲ್ಲಿ ಹೆಸರುವಾಸಿಯಾದ ಶ್ರೀ ಎನ್ .ಬಿ .ರೆಡ್ಡಿ ಗುರೂಜಿ ಮಹಾನ್ ವ್ಯಕ್ತಿಗಳು . ದೇಶದ ನೂರಾರು ಕ್ಷೇತ್ರಗಳಲ್ಲಿ ತಪಸ್ಸು ಮಾಡಿದ ಕೀರ್ತಿ ಇವರಿಗಿದೆ. ನಿರಾಡಂಬರಿ ವ್ಯಕ್ತಿತ್ವವುಳ್ಳವರು. ಇವರ ಸಾನ್ನಿಧ್ಯಕ್ಕೆ ರಾಜ್ಯ, ರಾಷ್ಟ್ರಮಟ್ಟದ ಅನೇಕ ರಾಜಕೀಯ ನಾಯಕರು, ಭಕ್ತರಿರುವುದು ಗಮನಾರ್ಹ. ಈ ಕೃತಿಯು ಅಧ್ಯಾತ್ಮಿಕ ಪಾರಾಯಣ ಗ್ರಂಥವೂ ಆಗಿದೆ ಎಂದರೆ ಅತಿಶಯೋಕ್ತಿಯಲ್ಲ ಎಂದು ಲೇಖಕರು ಅಭಿಪ್ರಾಯಪಡುತ್ತಾರೆ. 

About the Author

ಎಂ.ಜಿ. ದೇಶಪಾಂಡೆ
(21 March 1952)

ಲೇಖಕ ಎಂ. ಜಿ. ದೇಶಪಾಂಡೆ (ಮಾಣಿಕರಾವ್ ಗೋವಿಂದರಾವ್ ದೇಶಪಾಂಡೆ) ಮೂಲತಃ  ಬೀದರನವರು. ಎಂ..ಫಿಲ್ ಹಾಗೂ ಪಿಎಚ್ ಡಿ ಪದವೀಧರರು.  ಇವರ ಕಾವ್ಯನಾಮ  ಲಕ್ಷ್ಮೀಸುತ. ಮಾಣಿಕ್ಯ ವಿಠಲ ಎಂಬುದು ಇವರ ವಚನಾಂಕಿತ. ತಂದೆ ಗೋವಿಂದರಾವ್ ದೇಶಪಾಂಡೆ, ತಾಯಿ ಲಕ್ಷ್ಮೀಬಾಯಿ ದೇಶಪಾಂಡೆ, ಸಹಕಾರ ಕೇಂದ್ರ ಬ್ಯಾಂಕಿನ ಅಧಿಕಾರಿಯಾಗಿ ನಿವೃತ್ತರಾಗಿದ್ದಾರೆ.  ಕನ್ನಡಾಂಬೆ ಮತ್ತು ಖ್ಯಾತಿ (1977) ಕನ್ನಡ ವಾರ ಪತ್ರಿಕೆಯ ಸಂಪಾದಕ ರಾಗಿದ್ದರು. ದೇಶಪಾಂಡೆ ಸಾಹಿತ್ಯಕ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನದ ಸಂಸ್ಥಾಪಕ ಅಧ್ಯಕ್ಷರು, ಶಾಂತಿ, ಕನ್ನಡ ಗೆಳೆಯರ ಬಳಗ, ಬೀದರ ಜಿಲ್ಲಾ ಲೇಖಕರ ಬಳಗ, ಜ್ಞಾನ ತರಂಗ ವಿಚಾರ ವೇದಿಕೆ ಮುತ್ತಂಗಿ, ಮಂದಾರ ಕಲಾವಿದರ ವೇದಿಕೆ ಹೀಗೆ ಹಲವಾರು ಸಂಘಸಂಸ್ಥೆಗಳ ರೂವಾರಿಯಾಗಿದ್ದಾರೆ.  ಕೊರೊನಾ ವೈರಸ್ ಪರಿಣಾಮ ಲಾಕ್ ...

READ MORE

Related Books