ಅಶುತೋಷ್ ಮುಖರ್ಜಿ

Author : ಎಂ.ಎಸ್. ನರಸಿಂಹಮೂರ್ತಿ

Pages 120

₹ 15.00




Year of Publication: 1976
Published by: ರಾಷ್ಟ್ರೋತ್ಥಾನ ಸಾಹಿತ್ಯ
Address: ಕೇಶವ ಶಿಲ್ಪ, ಕೆಂಪೇಗೌಡ ನಗರ, ಬೆಂಗಳೂರು-560019.
Phone: 9945036300

Synopsys

`ಅಶುತೋಷ್ ಮುಖರ್ಜಿ‌' ಎಂಬುದು ಜೀವನಚರಿತ್ರೆಯ ಪುಸ್ತಕ. ಲೇಖಕ ಎಂ.ಎಸ್.‌ ನರಸಿಂಹಮೂರ್ತಿ ರಚಿಸಿದ್ದಾರೆ.  ಪ್ರತಿಭಾವಂತ ವಿದ್ಯಾರ್ಥಿ, ದಕ್ಷ ನ್ಯಾಯಾಧೀಶರು, ವಿಶ್ವವಿದ್ಯಾಲಯದಲ್ಲಿ ಅರ್ಪಣ ಭಾವದಿಂದ ದುಡಿದ ಉಪಕುಲಪತಿಗಳು. ಎಲ್ಲ ಸಂದರ್ಭಗಳಲ್ಲಿ ಭಾರತೀಯರ ಆತ್ಮಗೌರವಕ್ಕೆ ಕುಂದಿಲ್ಲದಂತೆ ನಡೆದುಕೊಂಡವರು. ಕಲ್ಕತ್ತ ವಿಶ್ವವಿದ್ಯಾಲಯಕ್ಕೆ ಇವರ ಸೇವೆ ಅಮೂಲ್ಯ ಎಂದು ಅಶುತೋಷ್ ಮುಖರ್ಜಿ‌ ಅವರ ಕುರಿತಾಗಿ ವಿವರಿಸಲಾಗಿದೆ. ಅಶುತೋಷ್ ಮುಖರ್ಜಿ‌ ಅವರ ಬಾಲ್ಯ ಜೀವನ, ನ್ಯಾಯಾಧೀಶರಾಗುವತ್ತ ಶ್ರಮಿಸಿದ ದಿನಗಳು, ಉಪಕುಲಪತಿಯಾಗಿ ಮಾಡಿದ ಸೇವೆ ಹೀಗೆ ಅವರ ಬದುಕಿನ ಮುಖ್ಯ ಘಟ್ಟಗಳನ್ನು ಈ ಪುಸ್ತಕದಲ್ಲಿ ಸರಳ ಕನ್ನಡದಲ್ಲಿ ಚಿತ್ರಿಸಿದ್ದಾರೆ.

About the Author

ಎಂ.ಎಸ್. ನರಸಿಂಹಮೂರ್ತಿ
(20 October 1949)

ಹಾಸ್ಯ ಬರಹಗಾರ, ಬಾಷಣಕಾರ ಎಂ.ಎಸ್.ನರಸಿಂಹಮೂರ್ತಿ ಅವರು ಕೋಲಾರ ಜಿಲ್ಲೆಯ ಮಾಲೂರಿನಲ್ಲಿ 1949 ಅಕ್ಟೋಬರ್ 20 ರಂದು ಜನಿಸಿದರು. ಕಾದಂಬರಿ, ಮಕ್ಕಳಸಾಹಿತ್ಯ, ವಿಚಾರ ಸಾಹಿತ್ಯ, ಹಾಸ್ಯ ಸಂಕಲನ ಸೇರಿದಂತೆ ಹಲವು ಸಾಹಿತ್ಯ ಪ್ರಕಾರಗಳಲ್ಲಿ ಛಾಪು ಮೂಡಿಸಿರುವ ಇವರು ಇದುವರೆಗೆ 50 ಪುಸ್ತಕಗಳನ್ನು ಬರೆದಿದ್ದಾರೆ. 5000 ಕ್ಕೂ ಹೆಚ್ಚು ನಗೆ ಎಪಿಸೋಡ್‌ಗಳನ್ನು ರಚಿಸಿದ ರಾಷ್ಟ್ರೀಯ ದಾಖಲೆ ಅವರದು. 2000ಕ್ಕೂ ಹೆಚ್ಚು ಪ್ರಕಟಿತ ನಗೆ ಲೇಖನಗಳು, 100ಕ್ಕೂ ಹೆಚ್ಚು ಬಾನುಲಿ ನಾಟಕಗಳ ರಚನೆ.  ಸ್ವಯಂ ವಧು, ಶ್ರಮದಾನ, ಬಾಬ್ಬಿ, ಗೂಳಿಕಾಳಗ, ಕಂಡಕ್ಟರ್ ಕರಿಯಲಪ್ಪ, ವೈಕುಂಠಕ್ಕೆ ಬುಲಾವ್, ಕಿವುಡು ಸಾರ್ ಕಿವುಡು ಮತ್ತು ಇತರೆ ...

READ MORE

Related Books