ಮಹಾಮಹೋಪಾಧ್ಯಾಯ ಡಾ.ಆರ್. ಶಾಮಶಾಸ್ತ್ರಿ

Author : ಟಿ.ವಿ. ವೆಂಕಟಾಚಲಶಾಸ್ತ್ರೀ

Pages 64

₹ 10.00




Year of Publication: 2009
Published by: ಭಾರತೀಯ ವಿದ್ಯಾಭವನ
Address: ಹರ್ ಕಿಶೋರ್ ಹಾಗೂ ಶಶಿ ಕೇಜರಿವಾಲ್ ಫೌಂಡೇಶನ್ ಬೆಂಗಳೂರು- 560001

Synopsys

ಭಾರತೀಯ ವಿದ್ಯಾಭವನವು ಕರ್ನಾಟಕದ ಪ್ರಮುಖ ಸಾಹಿತಿಗಳನ್ನು ಗೌರವಿಸುವ ಒಂದು ಕಾರ್ಯಕ್ರಮ ಆಯೋಜಿಸುತ್ತಾ ಬಂದಿದೆ. ಈ ಸರಣಿಯಲ್ಲಿ ಹಿಂದಿನ ತಲೆಮಾರಿನ ಘನವಿದ್ವಾಂಸರೂ ಆಗಿದ್ದ, ಕೀರ್ತಿಶೇಷರಾಗಿರುವ ಮಹಾಮಹೋಪಾಧ್ಯಯ ಡಾ.ಆರ್. ಶಾಮಶಾಸ್ತ್ರಿಯವರ ಬದುಕು-ಬರೆಹವನ್ನು ಪ್ರಕಟಿಸಲಾಗಿದೆ.

ಶಾಮಶಾಸ್ತ್ರಿಗಳು ಸಂಸ್ಕೃತದಲ್ಲಿದ್ದ ಕೌಟಿಲ್ಯನ ಅರ್ಥಶಾಸ್ತ್ರವನ್ನು ಗುರ್ತಿಸಿ, ಪರಿಷ್ಕರಿಸಿ ಸಂಪಾದಿಸಿದರು. ಅನಂತರ ಹಂತಹಂತವಾಗಿ ಇಂಗ್ಲಿಷ್ ಭಾಷೆಗೆ ಅನುವಾದಿಸಿ ಅದನ್ನು ವಿಶ್ವಸಾಹಿತ್ಯಲೋಕಕ್ಕೆ ಪರಿಚಯಿಸಿದರು. ಇತಿಹಾಸ ಪ್ರಸಿದ್ಧ ಆ ಗ್ರಂಥದ ಮೌಲ್ಯವನ್ನೂ ಮಹತ್ವವನ್ನೂ ಆಸಕ್ತರು ಅರಿಯುವಂತೆ ಮಾಡಿದರು. ಇದು ಅವರ ಅರ್ಥಶಾಸ್ತ್ರ ಕೃತಿ ಲೋಕಾರ್ಪಣೆಯಾದ ಶತಮಾನದ ವರ್ಷ. ಮಹಾಮಹೋಪಾಧ್ಯಾಯ ಡಾ. ಶಾಮಶಾಸ್ತ್ರಿಯವರ ಸಂಸ್ಮರಣ ಗೌರವಾರ್ಥವಾಗಿ ಈ ಕೃತಿಯನ್ನು ಪ್ರಕಟಿಸಲಾಗಿದೆ. 

About the Author

ಟಿ.ವಿ. ವೆಂಕಟಾಚಲಶಾಸ್ತ್ರೀ
(26 August 1933)

ಸಂಶೋಧಕ, ಪ್ರಾಧ್ಯಾಪಕ ಟಿ.ವಿ.ವೆಂಕಟಾಚಲ ಶಾಸ್ತ್ರೀ ಅವರು ಕನ್ನಡ ಭಾಷೆಯನ್ನು ಶ್ರೀಮಂತಿಕೆ ಹೆಚ್ಚಿಸಿದವರು. ಶಾಸ್ತ್ರಿಗಳು,1933ರ ಆಗಸ್ಟ್ 26 ರಂದು, ಬೆಂಗಳೂರು ಜಿಲ್ಲೆಯ ಕನಕಪುರ ತಾಲ್ಲೂಕಿನ ಹಾರೋಹಳ್ಳಿಯಲ್ಲಿ ಜನಿಸಿದರು.  ತಂದೆ ವೆಂಕಟಸುಬ್ಬಾಶಾಸ್ತ್ರಿಗಳು. ತಾಯಿ ಸುಬ್ಬಮ್ಮ. ಎಂ.ಎ. ಮತ್ತು ಪಿಎಚ್.ಡಿ. ಪದವಿ ಪಡೆದ ನಂತರ ವೆಂಕಟಾಚಲ ಶಾಸ್ತ್ರಿಗಳು ಮೈಸೂರು ವಿಶ್ವವಿದ್ಯಾಲಯದಲ್ಲಿ ಅಧ್ಯಾಪಕರಾಗಿ, ಪ್ರಾಧ್ಯಾಪಕರಾಗಿ, ವೃತ್ತಿಯನ್ನು ಮಾಡಿ, ನಂತರ, ಮೈಸೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದರು. ಕನ್ನಡ ನಿಘಂಟು ರಚನಾ ಸಮಿತಿಯ ಸಂಪಾದಕ ಸಮಿತಿಯ ಸದಸ್ಯರಾಗಿದ್ದ ಅವರು ನಂತರ ನಿಘಂಟು ಪರಿಷ್ಕರಣ ಸಮಿತಿ ಪ್ರಧಾನ ಸಂಪಾದಕರಾಗಿದ್ದರು. ವ್ಯಾಕರಣ, ಛಂದಸ್ಸು, ...

READ MORE

Related Books