ಪ್ರೇಮಾಂತರಂಗದ ಸುಂದರ ಕಲ್ಪನಾ ಸ್ವರೂಪ

Author : ಪ್ರಣತಾರ್ತಿಹರನ್

Pages 254

₹ 150.00




Year of Publication: 2009
Published by: ವೈದ್ಯನಾಥೇಶ್ವರ ಪ್ರಕಾಶನ
Address: ಮೈಸೂರು

Synopsys

ಬಾಲ್ಯದಿಂದ ಆಕಾಶವಾಣಿಯಲ್ಲಿ ಕಾರ್ಯಕ್ರಮಗಳನ್ನು ನಡೆಸಿಕೊಟ್ಟು ಜನ ಮೆಚ್ಚುಗೆಗೆ ಗಳಿಸಿದವರು ಪ್ರೇಮಲತಾ ಸುಂದರೇಶನ್. ವಾಯುಸೇನಾ ಅಧಿಕಾರಿಯೊಬ್ಬರ ಪತ್ನಿಯಾಗಿ ದೇಶಾದ್ಯಂತ ಸಂಚರಿಸಿ ವಿವಿಧ ಸಮುದಾಯಗಳೊಡನೆ ಬಾಳಿದವರು. ತಾವು ಎಲ್ಲೇ ಇದ್ದರೂ ಕನ್ನಡ ಸಂಘಗಳನ್ನು ಕಟ್ಟಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿ, ಕನ್ನಡ ಏಳಿಗೆಗಾಗಿ ಶ್ರಮಿಸಿದವರು. ಸುಮಾರು 50ಕ್ಕು ಹೆಚ್ಚು ಕಾದಂಬರಿಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ನೀಡಿದ ಅವರ ಬದುಕು-ಬರಹವನ್ನು ಅಧ್ಯಯನ ಮಾಡಿ ಸಂಗ್ರಹಿಸಿರುವ ಕೃತಿ ‘ಪ್ರೇಮಾಂತರಂಗದ ಸುಂದರ ಕಲ್ಪನಾ ಸ್ವರೂಪ’.

About the Author

ಪ್ರಣತಾರ್ತಿಹರನ್

ಸಾಹಿತ್ಯ ರಂಗದಲ್ಲಿ ನಿರಂತರ ಬರೆಯುವ ಸೃಜನಶೀಲತೆಯನ್ನು ಕಾಪಿಟ್ಟುಕೊಂಡಿರುವ ಪ್ರಣತಾರ್ತಿಹರನ್ ಹಾಸನ ಜಿಲ್ಲೆ ಅರಕಲಗೂಡು ತಾಲ್ಲೂಕಿನ ಬಸವಾಪಟ್ಟಣದವರು. ತೋಟಗಾರಿಕೆಯೇ ಕುಲಕಸುಬಾಗಿದ್ದ, ಹರಿಕಥೆ ಮತ್ತು ಗಮಕ ಕಲೆಯನ್ನು ರೂಢಿಸಿಕೊಂಡ ಪೂರ್ವಿಕರಿದ್ದ ಮನೆತನದಲ್ಲಿ ಹುಟ್ಟಿ, ಪ್ರಖರ ಸಾಂಸ್ಕೃತಿಕ ಮತ್ತು ವಿದ್ವತ್ ಪರಿಸರದ ಸಂಸ್ಕಾರ ಪಡೆದವರು ಪ್ರಣತಾರ್ತಿಹರನ್. ಜಾನಪದ ಮತ್ತು ಭಾರತೀಯ ಸಾಹಿತ್ಯದ ಸ್ನಾತಕೋತ್ತರ ಡಿಪ್ಲೊಮಾ ಪದವಿ ಪಡೆದಿದ್ಧಾರೆ. 2015ನೇ ಸಾಲಿನ ಪ್ರವಾಸ ಸಾಹಿತ್ಯ ಪ್ರಕಾರದ ಅತ್ಯುತ್ತಮ ಕೃತಿಗೆ ಅವರ ‘ಆಸುಪಾಸು’ ಪ್ರವಾಸ ಕಥನ ಆಯ್ಕೆಯಾಗಿದೆ. ...

READ MORE

Related Books