ಲಿಂಗಾಯತ ಧರ್ಮ ಸ್ಥಾಪಕ ಬಸವಣ್ಣ

Author : ಎಸ್.ಎಂ. ಹುಣಸ್ಯಾಳ

Pages 54

₹ 40.00




Year of Publication: 2014
Published by: ವಚನ ಅಧ್ಯಯನ ಕೇಂದ್ರ
Address: ನಾಗನೂರು ರುದ್ರಾಕ್ಷಿ ಮಠ, ಶಿವಬಸವ ನಗರ, ಬೆಳಗಾವಿ

Synopsys

‘ಲಿಂಗಾಯತ ಧರ್ಮ ಸ್ಥಾಪಕ ಬಸವಣ್ಣ’ ಕೃತಿಯು ಎಸ್. ಎಂ. ಹುಣಶಾಳ ಅವರ ವಚನ ಆಧಾರಿತ ಸಂಕಲನವಾಗಿದೆ. ಈ ಕೃತಿಯಲ್ಲಿನ ಕೆಲವೊಂದು ವಿಚಾರಗಳು ಹೀಗಿವೆ; ಧರ್ಮ, ದರ್ಶನ ಮತ್ತು ಸಾಹಿತ್ಯದ ಹಿನ್ನೆಲೆಯಲ್ಲಿ ಬಸವಣ್ಣನವರಿಗೆ ಮಹತ್ವದ ಸ್ಥಾನವಿದೆ. ಸರಿ ಸುಮಾರು ಒಂಭತ್ತುನೂರು ವರ್ಷಗಳ ನಂತರವೂ ಕರ್ನಾಟಕ ಅಷ್ಟೇ ಏಕೆ ಇಡೀ ದೇಶದ ವಿಭಿನ್ನ ಕ್ಷೇತ್ರಗಳ ಮೇಲೆ ಅವರು ಬೀರಿದ ಪ್ರಭಾವ ಅಚ್ಚಳಿಯದಂತಹದ್ದು. ಅವರು ಕಂಡ ಅಧ್ಯಾತ್ಮದ ಆದರ್ಶಗಳು, ಜೀವನದರ್ಶನ ಮತ್ತು ತೋರಿದ ದಾರಿ ವಚನಗಳಲ್ಲಿ ಮಡುಗಟ್ಟಿ ನಿಂತಿವೆ. ಬಸವಣ್ಣನವರ ಅಂತರಂಗದ ಪರಿಶುದ್ಧ ಪ್ರೇಮದಿಂದ ಉಕ್ಕಿ ಹರಿಯುವ ಈ ಪ್ರವಾಹದಲ್ಲಿ ಜನಮನದ ಮಾಲಿನ್ಯ ತೊಳೆಯುವ ಅದ್ಭುತ ಶಕ್ತಿ ಇದೆ. ಪೂರ್ಣಜೀವನ ದೃಷ್ಟಿ ಹೊಂದಿದ ಅವರು ತಮ್ಮ ಅನುಭವಗಳಿಂದ, ಸಾಧನೆ ಸಿದ್ಧಿಗಳಿಂದ ವಚನಗಳನ್ನು ಶ್ರೀಮಂತಗೊಳಿಸಿದ್ದಾರೆ. “ಅಂಗಾಯತ ಧರ್ಮಸ್ಥಾಪಕ ಬಸವಣ್ಣ' ಡಾ. ಎಸ್. ಎಂ. ಹುಣಶಾಳ ಅವರ ಎರಡು ಮೌಲಕ ಲೇಖನಗಳ ಸಂಗ್ರಹ ಕೃತಿಯಾಗಿದೆ. ಲಖನೌ ವಿಶ್ವವಿದ್ಯಾಲಯದಿಂದ ಅಂಗಾಯತ ಧರ್ಮ ತತ್ವ ಸಿದ್ಧಾಂತ ಕುರಿತು ಸಂಶೋಧನಾ ಮಹಾಪ್ರಬಂಧ ಮಂಡಿಸಿ, ಪಿಎಚ್.ಡಿ. ಪದವಿ ಪಡೆದ ಡಾ. ಹುಣಶಾಳ, ಶರಣ ಸಾಹಿತ್ಯ ಹಾಗೂ ಬಸವಣ್ಣನವರನ್ನು ಕುರಿತು ಆಳವಾಗಿ ಅಧ್ಯಯನ ಮಾಡಿದ್ದಾರೆ. ಪ್ರಸ್ತುತ ಕೃತಿಯಲ್ಲಿ ಬಸವಣ್ಣನವರನ್ನು ಕುರಿತ ಚಿಂತನೆಗಳನ್ನು ಸಂಗ್ರಹಿಸಿ ಪ್ರಕಟಿಸಲಾಗಿದೆ’ ಎಂದಿದೆ.

About the Author

ಎಸ್.ಎಂ. ಹುಣಸ್ಯಾಳ
(25 March 1916)

ಎಸ್.ಎಂ ಹುಣಸ್ಯಾಳರ ಪೂರ್ಣ ಹೆಸರು ಸೊಲಬಣ್ಣ ಮಹಾಲಿಂಗಪ್ಪ ಹುಣಸ್ಯಾಳ. ಬಾಗಲಕೋಟೆ ಜಿಲ್ಲೆ ಮುಧೋಳ ತಾಲ್ಲೂಕಿನ ಮಹಾಲಿಂಗಪುರದವರು. ತಂದೆ  ಮಹಾಲಿಂಗಪ್ಪ, ತಾಯಿ ಗುರುಲಿಂಗಮ್ಮ. 1 ರಿಂದ 4ನೇ ತರಗತಿಯವರೆಗೂ ಮಹಾಲಿಂಗಪುರ ಮತ್ತು ಬನಹಟ್ಟಿಯಲ್ಲಿ ಶಿಕ್ಷಣ  ಪೂರೈಸಿ, 1930ರಲ್ಲಿ ಬೆಳಗಾವಿಯ ಕರ್ನಾಟಕ ಲಿಂಗಾಯತ ಶಿಕ್ಷಣ ಸಂಸ್ಥೆಯ ‘ಅರಟಾಳ ಗಿಲಗಂಚಿ’ ಮಾಧ್ಯಮಿಕ ಶಾಲೆಯಲ್ಲಿ 5ನೇ ತರಗತಿಯಿಂದ ಶಿಕ್ಷಣ ಹಾಗೂ ಧಾರವಾಡದಲ್ಲಿ ಹೈಸ್ಕೂಲ್ ವಿದ್ಯಾಭ್ಯಾಸ ನಂತರ, ಬಿ.ಇಡಿ ಮತ್ತು ಎಂ.ಎ ಪೂರ್ಣಗೊಳಿಸಿದರು. 1954ರಲ್ಲಿ ಲಖನೌ ವಿಶ್ವವಿದ್ಯಾಲಯದಲ್ಲಿ ‘The VIRASHAIVA PHILOSOPHY’ ವಿಷಯದ ಮೇಲೆ ಪಿಎಚ್.ಡಿ ಪಡೆದರು. ವೀರಶೈವ ಸಾಹಿತ್ಯವನ್ನು ಕನ್ನಡ ಹಾಗೂ ಇಂಗ್ಲಿಷ್ ನಲ್ಲಿ ಹಲವಾರು ಕೃತಿಗಳನ್ನುರಚಿಸಿದ್ದಾರೆ. ಅವುಗಳಲ್ಲಿ Recent ...

READ MORE

Related Books