ಭಿನ್ನ ಅಭಿಪ್ರಾಯ

Author : ಎಂ.ಎಸ್. ಶ್ರೀರಾಮ್

Pages 288

₹ 243.00




Year of Publication: 2021
Published by: ಅಕ್ಷರ ಪ್ರಕಾಶನ
Address: ಹೆಗ್ಗೋಡು - 577417, ಸಾಗರ ತಾಲೂಕು, ಶಿವಮೊಗ್ಗ ಜಿಲ್ಲೆ.
Phone: 09480280401

Synopsys

ಲೇಖಕ ಎಂ.ಎಸ್. ಶ್ರೀರಾಮ್ ಅವರು ಆರ್ಥಿಕ ತಜ್ಞ ವೈ.ವಿ. ರೆಡ್ಡಿ ಅವರ ಕುರಿತು ಬರೆದ ಜೀವನ ಚಿತ್ರಣ-ಭಿನ್ನ ಅಭಿಪ್ರಾಯ. ಕೇಂದ್ರೀಯ ಬ್ಯಾಂಕರುಗಳಲ್ಲಿ ಶ್ರೇಷ್ಠರು. ಭಾರತೀಯ ಅರ್ಥ ವ್ಯವಸ್ಥೆ ಕುರಿತು ಆಳವಾಗಿ ಅಧ್ಯಯನ ಮಾಡಿದವರು. ‘ಅಮೆರಿಕದಲ್ಲಿ ವೈ.ವಿ. ರೆಡ್ಡಿಯಂಥವರು ಕೇಂದ್ರೀಯ ಬ್ಯಾಂಕಿನ ಮುಖ್ಯಸ್ಥರಾಗಿದ್ದರೆ, ಅಮೆರಿಕದ ಅರ್ಥವ್ಯವಸ್ಥೆ ಈಗಿನ ದುರ್ಗತಿಯನ್ನು ಕಾಣುತ್ತಿರಲಿಲ್ಲ’ ಎಂದು ನೊಬೆಲ್ ಪ್ರಶಸ್ತಿ (ಅರ್ಥ ಶಾಸ್ತ್ರ) ಪುರಸ್ಕೃತ ಜೋಸೆಫ್ ಸ್ಟಿಗ್ಲ್‌ಟ್ಸ್ ಅಭಿಪ್ರಾಯಪಟ್ಟಿದ್ದಾರೆ. ಇಂತಹ ಆರ್ಥಿಕ ತಜ್ಞರ ಬದುಕು-ಸಾಧನೆ ಕುರಿತು ಬರೆದ ಕೃತಿ ಇದು.

About the Author

ಎಂ.ಎಸ್. ಶ್ರೀರಾಮ್
(16 May 1962)

ಆಂಧ್ರಪ್ರದೇಶದ ನೆಲ್ಲೂರಿನಲ್ಲಿ ಜನಿಸಿದ (1962) ಎಂ.ಎಸ್. ಶ್ರೀರಾಮ್ ಅವರು ಶಿಕ್ಷಣ ಪಡೆದದ್ದು ಉಡುಪಿ, ಬೆಂಗಳೂರು, ಮೈಸೂರು ಮತ್ತು ಆನಂದ್ ದಲ್ಲಿ. ಹೈದರಾಬಾದ್ ನ ಸ್ವಯಂ ಸೇವಾ ಸಂಸ್ಥೆಯೊಂದರಲ್ಲಿ ಎರಡು ವರ್ಷ ಕೆಲಸ ಮಾಡಿದ ಅವರು ನಂತರ ಬೆಂಗಳೂರಿನ ಇಂಡಿಯನ್ ಇನ್ಸ್ ಟಿಟ್ಯೂಟ್ ಆಫ್ ಮ್ಯಾನೇಜ್ ಮೆಂಟ್ ನಿಂದ ಡಾಕ್ಟರೇಟ್ ಪಡೆದರು. ಆಮೇಲೆ ಆನಂದದ ಇನ್ಸ್ ಟಿಟ್ಯೂಟ್ ಆಫ್ ರೂರಲ್ ಮ್ಯಾನೇಜ್ ಮೆಂಟ್ ಸಂಸ್ಥೆಯಲ್ಲಿ ಬೋಧಕರಾಗಿ, ಹೈದರಾಬಾದ್ ನ ಬೇಸಿಕ್ ಸಂಸ್ಥೆಯಲ್ಲಿ ವೈಸ್ ಪ್ರೆಸಿಡೆಂಟ್ ಆಗಿ, ಅಹಮದಾಬಾದಿನ ಇಂಡಿಯನ್ ಇನ್ಸ್ ಟಿಟ್ಯೂಟ್ ಆಫ್ ಮ್ಯಾನೇಜ್ ಮೆಂಟ್ ನಲ್ಲಿ ಪ್ರೊಫೆಸರ್ ...

READ MORE

Related Books