ಮಹಾಮೇಧಾವಿ ಸರ್ ಸಿ.ಆರ್.ರೆಡ್ಡಿ

Author : ಕೆ. ಆರ್‌. ಸಂಧ್ಯಾರೆಡ್ಡಿ

Pages 248

₹ 260.00




Year of Publication: 2021
Published by: ವಿಕಸನ
Address: ವಿಜ್ಞಾತಂ ಭವನ,ಆದಿಚುಂಚನಗಿರಿ ವಿಶ್ವವಿದ್ಯಾನಿಲಯ,ಬಿ.ಜಿ.ನಗರ- 571448, ನಾಗಮಂಗಲ ತಾಲ್ಲೂಕು,ಮಂಡ್ಯ ಜಿಲ್ಲೆ

Synopsys

ಒಕ್ಕಲಿಗ ಸಾಧಕರು ಸರಣಿಯಲ್ಲಿ ಮಹಾಮೇಧಾವಿ ಸರ್ ಸಿ.ಆರ್.ರೆಡ್ಡಿ ಅವರ ಬಗ್ಗೆ ಲೇಖಕಿ ಡಾ.ಕೆ.ಆರ್.ಸಂಧ್ಯಾರೆಡ್ಡಿ ಅವರು ಬರೆದಿರುವ ಪರಿಚಯಾತ್ಮಕ ಕೃತಿ ‘ಮಹಾಮೇಧಾವಿ ಸರ್ ಸಿ.ಆರ್.ರೆಡ್ಡಿ’. ಕೃತಿಯ ಬೆನ್ನುಡಿಯಲ್ಲಿ ಬರೆದಿರುವಂತೆ, ಡಾ. ಸಿ.ಆರ್. ರೆಡ್ಡಿಯವರು ಇಪ್ಪತ್ತನೇ ಶತಮಾನದ ಪೂರ್ವಾರ್ಧದಲ್ಲಿ ದಕ್ಷಿಣ ಭಾರತದ ಅತ್ಯಂತ ಪ್ರಭಾವಶಾಲಿ ಬೋಧಕ, ಆಡಳಿತಗಾರ, ಶಿಕ್ಷಣತಜ್ಞ ರಾಜಕಾರಣಿ, ಸಮಾಜ ಸುಧಾರಕರಾಗಿ ಖ್ಯಾತಿ ಪಡೆದ ಧೀಮಂತ ನಾಯಕರಾಗಿದ್ದರು. ಮೈಸೂರು ಸಂಸ್ಥಾನ, ಆಂಧ್ರಪ್ರದೇಶ ಮತ್ತು ಅವಿಭಜತ ಮದ್ರಾಸ್ ಸ್ಟೇಟ್‌ನಲ್ಲಿ ಇವರು ನಡೆಸಿದ ಹಲವು ಸೇವಾಕಾರಗಳು ಶಿಕ್ಷಣ, ಆಡಳಿತ ಮತ್ತು ರಾಜಕೀಯ ವ್ಯವಸ್ಥೆಯಲ್ಲಿ ಬದಲಾವಣೆಗೆ ಕಾರಣವಾದವು. ಮೈಸೂರು ವಿಶ್ವವಿದ್ಯಾನಿಲಯ ಮತ್ತು ಆಂಧ್ರ ವಿಶ್ವವಿದ್ಯಾಲಯಗಳ ಬೆಳವಣಿಗೆಯಲ್ಲಿ ಇವರ ಕೊಡುಗೆ ಅತ್ಯಂತ ಗಮನಾರ್ಹವಾಗಿದೆ. ಸಾರ್ವಜನಿಕ ಶಿಕ್ಷಣ ರಂಗಕ್ಕೆ ರೆಡ್ಡಿಯವರು ಸಲ್ಲಿಸಿದ ಸೇವೆ ಅನುಪಮ ಮಾತ್ರವಲ್ಲ, ಅಲಕ್ಷಿತ ಸಮುದಾಯಗಳು ಶಿಕ್ಷಣ ಪಡೆದು ಸಾರ್ವಜನಿಕ ಕ್ಷೇತ್ರ ಪ್ರವೇಶಿಸಲು ಕಾರಣವಾಯಿತು. ಬ್ರಾಹ್ಮಣೇತರ ಸಮುದಾಯಗಳು ಜಾಗೃತಿ ಹೊಂದಲು, ಶಿಕ್ಷಣ ಪಡೆಯಲು, ಸರ್ಕಾರಿ ಉದ್ಯೋಗ ಗಳಿಸಲು ಇವರ ಹೋರಾಟ ಪ್ರಮುಖ ಕಾರಣವಾಯಿತು. ಸಂಪ್ರದಾಯ ವಾದಿಗಳು, ಪಟ್ಟಭದ್ರರ ವಿರೋಧದ ನಡುವೆಯೂ ಜನಪರವಾಗಿ ಯೋಚಿಸಿ, ಬಡವರಿಗೆ ಅವಕಾಶಗಳ ಬಾಗಿಲು ತೆರೆದ ರೆಡ್ಡಿಯವರು ನಾಡಿನ ಪ್ರಾತಃಸ್ಮರಣೀಯರಾದ ಮಹಾಪುರುಷರಲ್ಲಿ ನಿಸ್ಸಂದೇಹವಾಗಿ ಒಬ್ಬರಾಗಿದ್ದಾರೆ.ಪ್ರಭಾವಶಾಲಿ ಬೋಧಕ, ಚಿಂತಕ, ಲೇಖಕ, ಭಾಷಣಕಾರ, ಕವಿ- ಹೀಗೆ ಸಾಂಸ್ಕೃತಿಕ ಕ್ಷೇತ್ರದಲ್ಲಿ ಅಚ್ಚಯದ ಮುದ್ರೆಯೊತ್ತಿದ ಸಿ.ಆರ್, ರೆಡ್ಡಿಯವರನ್ನು ಕುಲಿತು ಕವಯಿತ್ರಿ ಡಾ. ಕೆ.ಆರ್. ಸಂಧ್ಯಾರೆಡ್ಡಿಯವರು ಅಪಾರ ಪರಿಶ್ರಮ, ವಿಸ್ತೃತ ಕ್ಷೇತ್ರಕಾರ, ಅಧ್ಯಯನ ನಡೆಸಿ ಜೀವನ ಚಲತ್ರೆ ರಚಿಸಿದ್ದಾರೆ. 'ಮಹಾಮೇಧಾವಿ ಸರ್ ಸಿ.ಆರ್. ರೆಡ್ಡಿ' ಪುಸ್ತಕ ಅತ್ಯಂತ ಗಮನಾರ್ಹವಾದ ಮತ್ತು ಓದಲೇಬೇಕಾದ ಕೃತಿ ಎನ್ನಲಾಗಿದೆ.

About the Author

ಕೆ. ಆರ್‌. ಸಂಧ್ಯಾರೆಡ್ಡಿ

ಕನ್ನಡ ಸಾಹಿತ್ಯಕ್ಕೆ ಅಪಾರವಾದ ಕೊಡುಗೆ ನೀಡಿರುವ ಕನ್ನಡಿಗರ ನೆಚ್ಚಿನ ಲೇಖಕಿ ಕೆ.ಆರ್.ಸಂಧ್ಯಾರೆಡ್ಡಿ ಅವರು ಜನಿಸಿದ್ದು 1953 ಜೂನ್  22ರಂದು ಚಿತ್ರದುರ್ಗದಲ್ಲಿ. ಎನ್‌ಜಿಇಎಫ್‌ ನಲ್ಲಿ ಉಪ ನಿರ್ವಹಕರಾಗಿ ಸೇವೆ ಸಲ್ಲಿಸಿರುವ ಅವರು ವೃತ್ತಿಯಿಂದ ಸ್ವಯಂ ನಿವೃತ್ತಿ ಪಡೆದರು.  ಇವರ ಅನುವಾದಿತ ಕೃತಿಗಳೆಂದರೆ - ಬರ್ಕ್ ವೈಟ್‌ ಕಂಡ ಭಾರತ, Half way to Freedom, ಆಸನ ಪ್ರಾಣಾಯಾಮ ಮುದ್ರಾಬಂಧ, ನೆಹರೂವಾದದ ಹುಟ್ಟು ಮತ್ತು ಬೆಳವಣಿಗೆ, ಉಗ್ರಾಣ ನಿರ್ವಹಣೆ, ಸೃಜನಶೀಲ ಪ್ರತಿಭೆ, ದೇಹದ ರಚನಾ ವ್ಯವಸ್ಥೆಗಳು, ಹೊಸ ಬಗೆಯ ಶಕ್ತಿ ವ್ಯವಸ್ಥೆಗಳು.  ಸಂಪಾದಿತ ಕೃತಿಗಳು : ಗ್ರಾಮೀಣ ಪಶುಸಾಕಣೆ, ಗ್ರಾಮೀಣ ...

READ MORE

Related Books