ಸಿಡಿಲಮರಿ ಹೊನಗಾನಹಳ್ಳಿ ಕೆ.ಪುಟ್ಟಣ್ಣ

Author : ಎಚ್.ಎಸ್. ಮುದ್ದೇಗೌಡ

Pages 164

₹ 200.00




Year of Publication: 2021
Published by: ವಿಕಸನ ಪ್ರಕಾಶನ
Address: ವಿಜ್ಞಾತಂ ಭವನ, ಆದಿಚುಂಚನಗಿರಿ ವಿಶ್ವವಿದ್ಯಾನಿಲಯ, ಬಿ.ಜಿ. ನಗರ- 571448, ನಾಗಮಂಗಲ ತಾಲ್ಲೂಕು, ಮಂಡ್ಯ ಜಿಲ್ಲೆ
Phone: 9481908555

Synopsys

`ಸಿಡಿಲಮರಿ ಹೊನಗಾನಹಳ್ಳಿ ಕೆ.ಪುಟ್ಟಣ್ಣ’ ಕೃತಿಯು ಎಚ್. ಎಸ್. ಮುದ್ದೇಗೌಡ ಅವರ ಒಕ್ಕಲಿಗ ಸಾಧಕರು ಮಾಲಿಕೆಯ ವ್ಯಕ್ತಿ ಪರಿಚಯ ಕೃತಿಯಾಗಿದೆ. ಈ ಕೃತಿಯಲ್ಲಿನ ಕೆಲವೊಂದು ವಿಚಾರಗಳು ಹೀಗಿವೆ : ಮಂಡ್ಯ ಜಿಲ್ಲೆಯ ಪ್ರಾತಃಸ್ಮರಣೀಯ ಸೇವಾದುರೀಣದಲ್ಲಿ ಹೊನಗಾನಹಳ್ಳಿ ಕೆ. ಪುಟ್ಟಣ್ಣನವರೂ ಒಬ್ಬರು ದೇಶಭಕ್ತ, ಪರೋಪಕಾರಿ, ಸಮಾಜಸೇವಕ, ಅಧ್ಯಾಪಕ, ಸ್ವಾತಂತ್ರ್ಯಪ್ರೇಮಿ ಹೀಗೆ ಹಲವು ಮುಖಗಳು ಅವರ ವ್ಯಕ್ತಿತ್ವದಲ್ಲಿ ಬೆರೆತಿವೆ ಮಹಾಸ್ವಾಭಿಮಾನಿ, ಕಠೋರ ಶಿಸ್ತಿನಸಿಪಾಯಿ, ಅನಾಥಮಕ್ಕಳ ಬಂಧುವಾಗಿದ್ದವರು ಅವರು. ಚುಂಚನಕಟ್ಟೆಯ ಶ್ರೀಗುರುರಾಮ ಸೇವಾಶ್ರಮಕ್ಕೆ ಅವರು ಸಲ್ಲಿಸಿದ ಅನುಪಮ ಸೇವೆ ಅನೇಕ ಅನಾಥ ಮಕ್ಕಳ ಬಾನಲ್ಲ. ಬೆಳಕು ಚೆಲ್ಲಿತು. ಪುಟ್ಟಣ್ಣನವರು ಹುಟ್ಟು ಹೋರಾಟಗಾರ ಎಂತಹುದೇ ಪರಿಸ್ಥಿತಿಯಲ್ಲೂ ಎದೆಗುಂದದೆ ಕಾರ್ಯ ಸಾಧಿಸುತ್ತಿದ್ದ ಛಲಗಾರ, ಸವಾಲುಗಳನ್ನು ಅವರು ಎದುರಿಸುತ್ತಿದ್ದ ರೀತಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು. ಅವರ ದೃಢ ನಿರ್ಧಾರ, ಕಠೋರ ಶಿಸ್ತು, ಸವಾಲುಗಳನ್ನು ಯಶಸ್ವಿಯಾಗಿ ಎದುರಿಸುತ್ತಿದ್ದ ರೀತಿ, ತಂತ್ರಗಾರಿಕೆ, ಕಾವ್ಯಸಾಧನೆಯನ್ನು ಮೆಚ್ಚಿಕೊಂಡ ಅವರ ಅಭಿಮಾನಿಗಳು 'ಸಿಡಿಲಮರಿ' ಎಂಬ ಬಿರುದು ನೀಡಿ ಗೌರವಿಸಿದರು. ಅತ್ಯಂತ ಪ್ರಾಮಾಣಿಕ ವ್ಯಕ್ತಿಯಾಗಿದ್ದ ಅವರು ಸಾರ್ವಜನಿಕ ಜೀವನದಲ್ಲಿ ನಿಷ್ಕಳಂಕ ನಡವಳಿಕೆಗೆ ಖ್ಯಾತರಾಗಿದ್ದರು. ಆದಿಚುಂಚನಗಿರಿ ಮಠದ ಸದ್ಭಕ್ತರಾಗಿದ್ದ ಪುಟ್ಟಣ್ಣನವರು, ಮಠದ ಕಷ್ಟ ಕಾಲದಲ್ಲಿ ಅದರ ಬೆಂಬಲಕ್ಕೆ ನಿಂತು ಮಠದ ಭಕ್ತರ ಮೆಚ್ಚುಗೆ ಗಳಿಸಿದವರು. ಇವರ ಜೀವನ ಸಾಧನೆಯನ್ನು ಡಾ. 'ಸಿಡಿಲಮಲ ಹೊನಗಾನಹಳ್ಳಿ ಕೆ. ಪುಟ್ಟಣ್ಣ' ಕೃತಿಯಲ್ಲಿ ಅತ್ಯಂತ ಪ್ರೀತಿಯಿಂದ ದಾಖಲಿಸಿದ್ದಾರೆ ಎಂದಿದೆ.

About the Author

ಎಚ್.ಎಸ್. ಮುದ್ದೇಗೌಡ
(01 January 1956)

ಎಚ್.ಎಸ್. ಮುದ್ದೇಗೌಡ ಅವರು ಮಂಡ್ಯ ತಾಲೂಕಿನ ಹೊಸೂರಿನ ಮುದ್ದನದೊಡ್ಡಿಯವರು.  ಮೈಸೂರಿನ ವಿಶ್ವವಿದ್ಯಾಲಯದಿಂದ ಚಿನ್ನದ ಪದಕದೊಂದಿಗೆ ಕನ್ನಡ ಎಂ.ಎ ಪದವೀಧರರು. ಕೆ.ವಿ. ಶಂಕರಗೌಡರ ಬದುಕು- ಬರಹ ಕುರಿತ ಸಂಶೋಧನಾ ಪ್ರಬಂಧಕ್ಕೆ ಪಿ.ಎಚ್.ಡಿ ಪದವಿ ಪಡೆದಿರುತ್ತಾರೆ. ಕೃತಿಗಳು : ಜೂಲಿಯಸ್ ಸೀಜರ್, ಬಯಲು ಸಿಂಹ, ಕಾಯಕಯೋಗಿ, ಜೀವನಾಡಿ, ಕೆ.ವಿ. ಶಂಕರಗೌಡ, ಎಚ್.ಡಿ. ಚೌಡಯ್ಯ, ಸಿಡಿಲುಮರಿ, ಸಂಗಮ, ಛಲಗಾರ, ಕರ್ಮಯೋಗಿ, ಜೇನುಗೂಡು, ಗ್ರಾಮಚೇತನ. ...

READ MORE

Related Books