ಜೊಹಾನಸ್ ಕೆಪ್ಲರ್

Author : ಸುಮಂಗಲಾ ಎಸ್. ಮುಮ್ಮಿಗಟ್ಟಿ

Pages 48

₹ 30.00




Year of Publication: 2015
Published by: ನವಕರ್ನಾಟಕ ಪ್ರಕಾಶನ
Address: ಎಂಬೆಸಿ ಸೆಂಟರ್, 11, ಕ್ರೆಸೆಂಟ್‌ ರಸ್ತೆ, ಕುಮಾರ ಪಾರ್ಕ್‌ ಪೂರ್ವ, ಬೆಂಗಳೂರು- 560001
Phone: 08022161900

Synopsys

ತಾಯಿಯ ಗರ್ಭದಲ್ಲಿ ಅಂಕುರವಾದ ದಿನವನ್ನು ಕರಾರುವಕ್ಕಾಗಿ ಲೆಕ್ಕ ಹಾಕಿದವರು ಜೊಹಾನಸ್ ಕೆಪ್ಲರ್. ಲೆಕ್ಕಾಚಾರದಂತೆ ಕೆಪ್ಲರನ ತಾಯಿ ಮೇ 16, 1571ರಂದು ಕೆಪ್ಲರನ ಗರ್ಭವನ್ನು ಧರಿಸಿದ್ದಳು. ಅದಾದ 244 ದಿನ ಒಂಬತ್ತು ತಾಸು 33 ನಿಮಿಷದ ತರುವಾಯ, ಅಂದರೆ ಡಿಸೆಂಬರ್ 25, 1571ರಂದು ಕೆಪ್ಲರ್ ಜನ್ಮತಳೆದನು. ಹೀಗೆ ತನ್ನ ಹುಟ್ಟಿನ ಗಣಿತವನ್ನು ಕರಾರುವಾಕ್ಕಾಗಿ ಹೇಳಿದ ವಿಜ್ಞಾನಿ ಕೆಪ್ಲರ್. ಅವರ ಬಾಲ್ಯ-ಜೀವನ-ನಡೆದು ಬಂದ ದಾರಿ-ವಿಜ್ಞಾನ ಕ್ಷೇತ್ರದಲ್ಲಿನ ಸಾಧನೆ ಕುರಿತು ಸಂಕ್ಷಿಪ್ತವಾಗಿ ತೆರೆದಿಡುವ ಕೃತಿ ಇದು. ಕೃತಿಯ ಕರ್ತೃ-ಸುಮಂಗಲಾ ಎಸ್. ಮುಮ್ಮಿಗಟ್ಟಿ. ಸಾಹಿತಿ ನಾ. ಸೋಮೇಶ್ವರ ಅವರು ಸಂಪಾದಿಸಿದ್ದಾರೆ.

About the Author

ಸುಮಂಗಲಾ ಎಸ್. ಮುಮ್ಮಿಗಟ್ಟಿ
(04 November 1964)

ವಿಜ್ಞಾನ ಸಂವಹನಕ್ಕಾಗಿ ರಾಷ್ಟ್ರದ ಅತ್ಯುನ್ನತ ಪ್ರಶಸ್ತಿ ಪುರಸ್ಕೃತರಾದ ಸುಮಂಗಲಾ ಅವರು ಈ ಪರಿಸರ ಮತ್ತು ಪರಿಸರ ಪತ್ರಿಕೋದ್ಯಮ ಪ್ರಶಸ್ತಿಗಳಲ್ಲದೇ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಆಕಾಡಮಿಯಿಂದ ಶ್ರೇಷ್ಠ ವಿಜ್ಞಾನ ಲೇಖಕಿ ಪ್ರಶಸ್ತಿ ಪಡೆದಿದ್ದಾರೆ. ಜೈವಿಕ ವೈವಿಧ್ಯದ ಅತ್ಯುತ್ತಮ ಸಂವಹನಕ್ಕಾಗಿ ಲಂಡನ್ನಿನ ಎನ್ವಿರಾನ್ಮೆಂಟ್ ಎಜುಕೇಶನ್ ಸಂಸ್ಥೆಯ ಮನ್ನಣೆ ಪಡೆದಿದ್ದಾರೆ. ಬೆಂಗಳೂರು ಆಕಾಶವಾಣಿಯಲ್ಲಿ ಕಾರ್ಯಕ್ರಮ ನಿರ್ವಾಹಕರಾಗಿರುವ ಇವರು ವಿಜ್ಞಾನ ಕಾರ್ಯಕ್ರಮಗಳಿಗಾಗಿ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದವರು. ಇವರ ಹಲವು ಪುಸ್ತಕಗಳು ನವಕರ್ನಾಟಕದಿಂದ ಪ್ರಕಟವಾಗಿವೆ. ನವಕರ್ನಾಟಕದ ವಿಜ್ಞಾನ ಸರಳ ಪರಿಚಯ ಮಾಲಿಕೆಯ ಸಂಪಾದಕರಲ್ಲಿ ಒಬ್ಬರು. ಇವರ ಹಲವಾರು ಪುಸ್ತಕ- ಲೇಖನ ...

READ MORE

Related Books