ರಾಜಸೇವಾಸಕ್ತ ಬಿ.ಎಂ.ಶ್ರೀಕಂಠಯ್ಯ

Author : ಆರ್‍ಯಾಂಬ ಪಟ್ಟಾಭಿ

Pages 141

₹ 89.00

Synopsys

ಲೇಖಕಿ ಆರ್‍ಯಾಂಬ ಪಟ್ಟಾಭಿ ಅವರ ಕೃತಿ ರಾಜಸೇವಾಸಕ್ತ ಬಿ.ಎಂ.ಶ್ರೀಕಂಠಯ್ಯ. ಬಿ.ಎಂ.ಶ್ರೀ ಅವರ ಬದುಕು, ಬರಹಗಳನ್ನು ಕುರಿತು ಅವರ ಶಿಷ್ಯರು, ಮಿತ್ರರು, ಬಂಧುಗಳು, ಅಭಿಮಾನಿಗಳು ಲೇಖನಗಳನ್ನು ಬರೆದಿದ್ದಾರೆ, ಗ್ರಂಥಗಳನ್ನು ಪ್ರಕಟಿಸಿದ್ದಾರೆ. ಆದರೆ ಅವರನ್ನು ಕುರಿತು ಎಷ್ಟು ಬರೆದರೂ ಸಾಲದು ಎನ್ನುವ ಸತ್ಯ ಕನ್ನಡಿಗರಿಗೆ ತಿಳಿದಿರುವ ವಿಚಾರ. ಯಾಕೆಂದರೆ ಕನ್ನಡ ಸಾಹಿತ್ಯವನ್ನು ನೂತನ ದಡಕ್ಕೆ ಕೊಂಡೊಯ್ದ ನಾವಿಕರವರು.

ಲೇಖಕಿಯೇ ಕೃತಿಯಲ್ಲಿ ಬರೆದಿರುವಂತೆ, ’ಈ ಕೃತಿ ರಚನೆಗೆ ಹಲವಾರು ಗ್ರಂಥಗಳ, ಬಂಧುಮಿತ್ರರ, ಸಾಹಿತಿಗಳ, ಲೇಖನಗಳ ನೆರವು ಪಡೆದಿದ್ದೇನೆ. ಬಿ.ಎಂ.ಶ್ರೀಯವರ ಮರಿ ಮಗಳು ಶ್ರೀಮತಿ ವಿದ್ಯ ವಿಕ್ರಮ್ ಕೆಲವು ಭಾವಚಿತ್ರಗಳನ್ನು ನೀಡಿ ಸಹಕರಿಸಿದ್ದಾರೆ. ಅವರೆಲ್ಲರಿಗೂ ನಾನು ಕೃತಜ್ಞಳಾಗಿದ್ದೇನೆ’ ಎಂದಿದ್ದಾರೆ.

About the Author

ಆರ್‍ಯಾಂಬ ಪಟ್ಟಾಭಿ
(12 March 1936)

ಕಾದಂಬರಿಗಾರ್ತಿ ಆರ್‍ಯಾಂಬ ಪಟ್ಟಾಭಿ ಸಮಾಜಶಾಸ್ತ್ರದಲ್ಲಿ ಸ್ನಾತಕೋತ್ತರ ಪದವೀಧರೆ. 1936 ಮಾರ್ಚ್‌ 12 ರಂದು ಮಂಡ್ಯದಲ್ಲಿ ಜನಿಸಿದರು. ತಂದೆ ಬಿ. ಎಂ. ಕೃಷ್ಣಸ್ವಾಮಿ, ತಾಯಿ ತಂಗಮ್ಮ. ’ಹೊಂಗನಸು, ಆರಾಧನೆ, ಸವತಿಯ ನೆರಳು, ಕಪ್ಪು-ಬಿಳುಪು, ನನ್ನವಳು’ ಅವರ ಕಥಾಸಂಕಲನಗಳು. ’ಅನುರಾಗ’, ನರಭಿಕ್ಷುಕ ಕಾದಂಬರಿಗಳನ್ನುಹಾಗೂ ಮಕ್ಕಳ ಮತ್ತು ಕ್ರೀಡೆಗೆ ಸಂಬಂಧಿಸಿದ ಕೃತಿಗಳನ್ನು ರಚಿಸಿದ್ದಾರೆ. 'ಟೆನ್ನಿಸ್'’ ಕೃತಿಗೆ ಮಲ್ಲಿಕಾ ಪ್ರಶಸ್ತಿ, ಬಿ. ಸರೋಜದೇವಿ ಶ್ರೀಹರ್ಷ ಪ್ರಶಸ್ತಿ ಸಂದಿವೆ. ...

READ MORE

Related Books