ಕೃಷ್ಣದೇವರಾಯ

Author : ಚದುರಂಗ (ಎಂ. ಸುಬ್ರಹ್ಮಣ್ಯರಾಜೇ ಅರಸ್)

₹ 55.00




Published by: ನ್ಯಾಶನಲ್ ಬುಕ್ ಟ್ರಸ್ಟ್
Address: ಬಿಡಿಎ. ಕಾಂಪ್ಲೆಕ್ಸ್, 28ನೇ ಅಡ್ಡ ರಸ್ತೆ, ಸಿದ್ದಣ್ಣ ಲೇಔಟ್‌, ಬನಶಂಕರಿ 2ನೇ ಹಂತ, ಬೆಂಗಳೂರು- 560070

Synopsys

ಲೇಖಕ ಚದುರಂಗ ಅವರ ಅನುವಾದ ಕೃತಿ ʻಕೃಷ್ಣದೇವರಾಯʼ. ರಾಮರಾವ್‌ ಅವರು ಮೂಲ ಕೃತಿಯ ಲೇಖಕರಾಗಿದ್ದಾರೆ. ಪುಸ್ತಕವು, ವಿಜಯನಗರ ಸಾಮ್ರಾಜ್ಯವನ್ನು ಆಳಿದ ಪ್ರಮುಖ ಅರಸರಲ್ಲಿ ಒಬ್ಬರಾದ ಕೃಷ್ಣದೇವರಾಯನ ವ್ಯಕ್ತಿತ್ವ ಹಾಗೂ ಸಾಧನೆಯನ್ನು ಪರಿಚಯ ಮಾಡಿಕೊಡುತ್ತದೆ. ಆತನ ಅಧಿಕಾರಾವಧಿಯಲ್ಲಿ ವಿಜಯನಗರ ಸಾಮಾಜ್ಯ ಸುಖ ಸಮೃದ್ಧಿಯ ನೆಲೆವೀಡಾಗಿ ವಿದೇಶಿ ಯಾತ್ರಿಕರಿಂದಲೂ ಹೊಗಳಿಕೆಗೆ ಪಾತ್ರವಾಗಿತ್ತು. ಕೃಷ್ಣದೇವರಾಯನ ಬಹುಮುಖ ಪ್ರತಿಭೆಯ ವ್ಯಕ್ತಿತ್ವವನ್ನೂ ಇಲ್ಲಿ ದಾಖಲಿಸಲಾಗಿದೆ.

About the Author

ಚದುರಂಗ (ಎಂ. ಸುಬ್ರಹ್ಮಣ್ಯರಾಜೇ ಅರಸ್)
(01 January 1916 - 19 October 1998)

ಸಣ್ಣ ಕಥೆಗಾರ, ಕಾದಂಬರಿಕಾರ, ನಾಟಕಕಾರ ಆದ ಚದುರಂಗರು (ಎಂ. ಸುಬ್ರಹ್ಮಣ್ಯರಾಜೇ ಅರಸ್ ಅವರು) ಕನ್ನಡದ ಮಹತ್ವದ ಲೇಖಕರಲ್ಲಿ ಒಬ್ಬರು. ಮೈಸೂರು ಜಿಲ್ಲೆಯ ಹುಣಸೂರು ತಾಲ್ಲೂಕಿನ ಕಲ್ಲಹಳ್ಳಿ ಗ್ರಾಮದಲ್ಲಿ 1916ರ ಜನವರಿ 1ರಂದು ಜನಿಸಿದರು. ತಂದೆ ಮುದ್ದುರಾಜೇ ಅರಸ್ ಮತ್ತು ತಾಯಿ ಮರುದೇವಿ ಅರಸ್. ರಾಜಮನೆತನದ ಒಡನಾಟವಿದ್ದ ಇವರ ವಿದ್ಯಾಭ್ಯಾಸ ಮೈಸೂರಿನಲ್ಲಿ ನಡೆಯಿತು. ಮೈಸೂರಿನ ರಾಯಲ್ ಸ್ಕೂಲ್, ಬೆಂಗಳೂರಿನ ಇಂಟರ್ ಮೀಡಿಯೇಟ್  ಕಾಲೇಜು, ಮೈಸೂರು ಮಹಾರಾಜ ಕಾಲೇಜುಗಳಲ್ಲಿ ವ್ಯಾಸಂಗ ಮಾಡಿ ಬಿ.ಎ. ಪದವಿ ಪಡೆದರು. ಕಾನೂನು ಮತ್ತು ಸ್ನಾತಕೋತ್ತರ ಶಿಕ್ಷಣಕ್ಕಾಗಿ ಪುಣೆಗೆ ಹೋದರು. ಕಾರಣಾಂತರಗಳಿಂದ ಶಿಕ್ಷಣ ಪೂರ್ಣಗೊಳ್ಳಲಿಲ್ಲ. ಗಾಂಧಿ ...

READ MORE

Related Books