ಡಿ. ದೇವರಾಜ ಅರಸು

Author : ಚಿ.ಸಿ. ನಿಂಗಣ್ಣ

Pages 112

₹ 90.00




Year of Publication: 2015
Published by: ರೇಣುಕಾ ಪ್ರಕಾಶನ
Address: ಚಿತ್ರದುರ್ಗ

Synopsys

ಚಿ.ಸಿ. ನಿಂಗಣ್ಣ ಅವರು ಬರೆದ ಕೃತಿ-ಸಾಮಾಜಿಕ ಪರಿವರ್ತನೆಯ ಹರಿಕಾರ ಡಿ. ದೇವರಾಜ ಅರಸು. ಕರ್ನಾಟಕದ ಮಾಜಿ ಮುಖ್ಯ ಮಂತ್ರಿಗಳು. ದೀನ ದಲಿತ ಹಿಂದುಳಿದ ವರ್ಗದವರ ಉನ್ನತಿಗಾಗಿ ಹತ್ಯು ಹಲವು ಯೋಜನೆಗಳನ್ನು ರೂಪಿಸಿ ಜಾರಿಗೊಳಿಸಲು ಯತ್ನಿಸಿದ ಧೀಮಂತರು ಎಂಬ ಖ್ಯಾತಿ ಇವರಿಗಿದೆ. ಭೂಸುಧಾರಣಾ ಕಾಯ್ದೆಯನ್ನು ಜಾರಿಗೆ ತಂದರು.ಕರ್ನಾಟಕದ ಆಡಳಿತಾತ್ಮಕ-ರಾಜಕೀಯ ವಲಯದಲ್ಲಿ ಅಚ್ಚಳಿಯದ ಹೆಸರು. ಲೇಖಕರು ಈ ಮಹನೀಯರ ಜೀವನ ಚಿತ್ರಣ ನೀಡಿದ್ದಾರೆ.

About the Author

ಚಿ.ಸಿ. ನಿಂಗಣ್ಣ

ಲೇಖಕ ಡಾ. ಸಿ. ಚಿ. ನಿಂಗಣ್ಣ ಅವರು ಮೂಲತಃ ಕಲಬುರಗಿಯವರು. ಗುಲಬರ್ಗಾ ವಿಶ್ವವಿದ್ಯಾಲಯದಿಂದ ಕನ್ನಡದಲ್ಲಿ ಸ್ನಾತಕೋತ್ತರ ಪದವಿಯನ್ನು ಪ್ರಥಮ ದರ್ಚೆಯಲ್ಲಿ ಪಡೆದರು. “ಕಲಬುರಗಿ ಜಿಲ್ಲೆಯ ಜಾತ್ರೆಗಳು ಒಂದು ಜಾನಪದೀಯ ಅಧ್ಯಯನ” ವಿಷಯವಾಗಿ ಗುಲಬರ್ಗಾ ವಿಶ್ವವಿದ್ಯಾಲಯಕ್ಕೆ ಮಹಾಪ್ರಬಂಧ ಸಲ್ಲಿಸಿ, ಪಿಎಚ್ ಡಿ ಪಡೆದರು. ಸದ್ಯ, ಕಲಬುರಗಿಯ  ಸಂತ ಜೋಸೆಫ್ ಪಿ.ಯು. ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರು. ಕ.ಸಾ.ಪ. ಸಾಹಿತ್ಯ ಸಂಚಾಲಕರಾಗಿದ್ದು, ವಚನಸಾಹಿತ್ಯ, ಜಾನಪದ ಹಾಗೂ ವಿಮರ್ಶೆ ವಲಯದಲ್ಲಿ ವಿಶೇಷ ಆಸಕ್ತಿ. ಕೃತಿಗಳು: ಕಲಬುರಗಿ ಜಿಲ್ಲೆಯ ಜಾತ್ರೆಗಳು ಒಂದು ಜಾನಪದೀಯ ಅಧ್ಯಯನ (ಮಹಾಪ್ರಬಂಧ) ಕನ್ನಡ ವ್ಯಾಕರಣ, ಬಡವರ ಬಂಗಾರ, ಶಿವಾಜಿ, ಹಬ್ಬಗಳು, ಸ್ಪಂದನ, ಬಸವಣ್ಣನವರ ವಚನಗಳಲ್ಲಿ ಸಮಾಜೋಧಾರ್ಮಿಕ ಪ್ರಜ್ಞೆ ...

READ MORE

Related Books