ಅಪ್ಪಟ ಸಮಾಜವಾದಿ ಮಧು ಲಿಮಯೆ

Author : ಮಂಗ್ಳೂರು ವಿಜಯ

Pages 72

₹ 45.00




Year of Publication: 2024
Published by: ಲೋಹಿಯ ಪ್ರಕಾಶನ
Address: ಕ್ಷಿತಿಜ, ಕಪ್ಪಗಲ್ಲು ರಸ್ತೆ, ಗಾಂಧಿನಗರ, ಬಳ್ಳಾರಿ-583103
Phone: 839225741

Synopsys

‘ಅಪ್ಪಟ ಸಮಾಜವಾದಿ ಮಧು ಲಿಮಯೆ’ ಕರ್ಪೂರಿ ಠಾಕೂರ್ ಹಾಗೂ ಮಧು ದಂಡವತೆ ಶತಮಾನೋತ್ಸವ ವರ್ಷ ಮಧು ಲಿಮಯೆ ಸ್ಮರಣೆಯ ಭಾಗವಾಗಿ ಲೋಹಿಯಾ ಪ್ರಕಾಶನ ಪ್ರಕಟಿಸಿದ ಕೃತಿ. ಈ ಕೃತಿಯನ್ನು ಮಂಗ್ಳೂರು ವಿಜಯ ರಚಿಸಿದ್ದಾರೆ. ಮಧು ಲಿಮಯೆ ಅವರು ವಿದ್ಯಾರ್ಥಿ ಆಗಿದ್ದಾಗಲೇ ಭಾರತೀಯ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಧುಮುಕಿದರು; ಬ್ರಿಟಿಷ್ ಆಡಳಿತದಲ್ಲಿ ಜೈಲು ಶಿಕ್ಷೆಯನ್ನು ಅನುಭವಿಸಿದರು. ಸ್ವಾತಂತ್ರ್ಯ ಬಂದ ಬಳಿಕ ಕೂಡ ಅವರು ಶ್ರಮಜೀವಿಗಳ ಪರವಾಗಿ, ಪ್ರಜಾಪ್ರಭುತ್ವವನ್ನು ಅರ್ಥಪೂರ್ಣಗೊಳಿಸುವ ಸಲುವಾಗಿ ನಡೆಸಿದ ಹೋರಾಟಗಳ ಕಾರಣಕ್ಕೆ ಜೈಲು ಶಿಕ್ಷೆಗೆ ಗುರಿಯಾದರು. ತತ್ವಬದ್ಧತೆಯ ಪ್ರತಿರೂಪವಾಗಿ ಬದುಕಿದ ಮಧು ಲಿಮಯ ಶ್ರೇಷ್ಠ ಸಾಮಾಜಿಕ ನ್ಯಾಯ ಪಕ್ಷಪಾತಿ. ಜಾತಿಪದ್ಧತಿಯ ಕಾರಣಕ್ಕೆ ಶತಮಾನಗಳಿಂದ ವಂಚನೆಗೆ ಗುರಿಯಾದ ಸಮುದಾಯಗಳಿಗೆ ನ್ಯಾಯ ದೊರಕುವುದನ್ನು ಎತ್ತಿ ಹಿಡಿಯುತ್ತಲೇ, ಆ ತತ್ವವನ್ನು ರಾಜಕೀಯ ಲಾಭಕ್ಕೆ ಬಳಸಿಕೊಳ್ಳುವುದನ್ನು ಅವರು ಖಡಾಖಂಡಿತವಾಗಿ ವಿರೋಧಿಸಿದರು. ಪಾರದರ್ಶಕ ಬದುಕು, ಸರಳ ಜೀವನ, ಉದಾತ್ತ ಚಿಂತನೆಗೆ ಉದಾಹರಣೆಯಾಗಿದ್ದ ಅವರು ರಾಜ್ಯಸಭೆಗೆ ನಾಮನಿರ್ದೇಶನಗೊಳ್ಳುವುದನ್ನು ತಿರಸ್ಕರಿಸಿದವರು; ಸಂಸತ್ ಸದಸ್ಯರಾಗಿದ್ದ ಕಾರಣಕ್ಕೆ ಸರ್ಕಾರದಿಂದ ದೊರಕುವ ಮಾಸಾಶನವನ್ನು ನಿರಾಕರಿಸಿದವರು. ಪತ್ನಿಯ ವೇತನ ಮತ್ತು ತಾವು ಬರೆಯುತ್ತಿದ್ದ ಪುಸ್ತಕ/ಲೇಖನಗಳಿಗೆ ದೊರೆಯುತ್ತಿದ್ದ ಗೌರವ ಧನದಲ್ಲೇ ಕಡೆಯವರೆಗೂ ಜೀವನ ನಡೆಸಿದವರು. ಮಧು ಲಿಮಯೆ ಅಂಥವರು ನಮ್ಮ ಸಮಾಜದ ಆತ್ಮಸಾಕ್ಷಿಯಾಗಿ ಬದುಕಿದವರು. ಇಂಥ ಸಮಾಜವಾದಿ ಧುರೀಣರ ಸಂಖ್ಯೆ ಅಗಣಿತ. ಅವರೆಲ್ಲರ ಚಿಂತನೆ ಮತ್ತು ಜೀವನ ಇಂದಿಗೂ ಮಾರ್ಗದರ್ಶಿ, ರಾಜಕಾರಣದಲ್ಲಿ ಪ್ರಾಮಾಣಿಕತೆಯ ಪ್ರಾಣವಾಯುವನ್ನು ತುಂಬುವ ಸವಾಲು ನಮ್ಮ ಮುಂದೆ ಇರುವಾಗ, ಮಧು ಲಿಮಯೆ ಅಂಥವರೇ ನಮಗೆ ದಾರಿದೀಪ.

About the Author

ಮಂಗ್ಳೂರು ವಿಜಯ

ಹಿರಿಯ ಲೇಖಕ, ಚಿಂತಕ ಮಂಗ್ಳೂರು ವಿಜಯ ಅವರು ಮೂಲತಃ ಮಂಗಳೂರಿನವರು. ಸಂವಿಧಾನಾತ್ಮಕ ಆಶಯಗಳನ್ನೇ ಬದುಕಾಗಿಸಿಕೊಂಡು, ಹಲವಾರು ಕಾರ್ಯಗಾರ, ಶಿಬಿರ ಶಾಲೆಗಳಲ್ಲಿ ಸಂವಿಧಾನದ ಪ್ರಾಮುಖ್ಯತೆ ಬಗ್ಗೆ ಉಪನ್ಯಾಸ ನೀಡುತ್ತಾ ಜಾಗೃತಿ ಮೂಡಿಸುತ್ತಿದ್ದಾರೆ. ಆಂಧ್ರ ಪ್ರದೇಶ ಮೂಲ ಚಿಂತಕ ‘ಕಾಂಚ ಐಲಯ್ಯ’ ಅವರ ಕೃತಿಯನ್ನು‘ನಾನೇಕೆ ಹಿಂದೂ ಅಲ್ಲ’ ಎನ್ನುವ ಶೀರ್ಷಿಕೆಯಡಿ ಅನುವಾದಿಸಿದ್ಧಾರೆ. ಈ ಕೃತಿಯನ್ನು ಲಡಾಯಿ ಪ್ರಕಾಶನ ಪ್ರಟಿಸಿದೆ.  ...

READ MORE

Related Books