ರಾಜೇಂದ್ರ ಪ್ರಸಾದ್

Author : ನೀಲತ್ತಹಳ್ಳಿ ಕಸ್ತೂರಿ

Pages 102

₹ 15.00




Year of Publication: 1973
Published by: ರಾಷ್ಟ್ರೋತ್ಥಾನ ಸಾಹಿತ್ಯ
Address: ಕೇಶವ ಶಿಲ್ಪ, ಕೆಂಪೇಗೌಡ ನಗರ, ಬೆಂಗಳೂರು-560019.

Synopsys

`ರಾಜೇಂದ್ರ ಪ್ರಸಾದ್' ಅವರ ಜೀವನಚರಿತ್ರೆಯ ಪುಸ್ತಕವಿದು. ಲೇಖಕ ನೀಲತ್ತಹಳ್ಳಿ ಕಸ್ತೂರಿ ಅವರು ರಚಿಸಿದ್ದಾರೆ. ಯುಧಿಷ್ಠಿರನಂತೆ ಆಧುನಿಕ ಕಾಲದಲ್ಲಿ ಅಜಾತಶತ್ರು, ದೈವಭಕ್ತ, ತ್ಯಾಗಿ, ಬುದ್ಧಿಶಾಲಿಯಾಗಿ ಬಾಳಿ ಸ್ವತಂತ್ರ ಭಾರತದ ಮೊದಲ ರಾಷ್ಟ್ರಪತಿಯಾದ ಮಹಾನಾಯಕ. ಸರಳ ಜೀವನ ಉನ್ನತ ವಿಚಾರಗಳ ಪ್ರತಿಮೂರ್ತಿ. ಸ್ವಾತಂತ್ರ್ಯ ಹೋರಾಟಗಾರ, ಈ ಯುಗದ ’ರಾಜರ್ಷಿ’ ಎಂದು ರಾಜೇಂದ್ರ ಪ್ರಸಾದ್ ಕುರಿತಾಗಿ ಈ ಕೃತಿಯಲ್ಲಿ ವರ್ಣಿಸಲಾಗಿದೆ. ಅವರ ಜೀವನದ ವಿವಿಧ ಹಂತಗಳು, ಏಳುಬೀಳುಗಳು, ರಾಜಕೀಯ ಜೀವನದ ಘಟ್ಟಗಳನ್ನು ಲೇಖಕರು ಸರಳ ಕನ್ನಡದಲ್ಲಿ ವಿವರಿಸಿದ್ದಾರೆ.

About the Author

ನೀಲತ್ತಹಳ್ಳಿ ಕಸ್ತೂರಿ
(29 September 1931)

ನೀಲತ್ತಹಳ್ಳಿ ಕಸ್ತೂರಿಯವರು ಮಾಗಡಿಯಲ್ಲಿ ಸೆಪ್ಟೆಂಬರ್ 29, 1931ರಂದು ಜನಿಸಿದರು. ತಂದೆ ವೆಂಕಟಾಚಾರ್ಯ, ತಾಯಿ ಸೀತಮ್ಮ. ಅಂಚೆ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದ ಅವರಿಗೆ ಸಾಹಿತ್ಯದಲ್ಲಿ ವಿಶೇಷ ಆಸಕ್ತಿ. ಅವರೊಬ್ಬ ಉತ್ತಮ ಅನುವಾದಕರು. ಚೀನಾ ಜಪಾನ್ ಕತೆಗಳು (ಅನುವಾದ) (ಕಾದಂಬರಿ), ಇದು ಭಾರತದ ದಾರಿ (ನಾಟಕ) ರಾಜೇಂದ್ರ ಪ್ರಸಾದ್, ಡಿ.ವಿ. ಗುಂಡಪ್ಪ ಜೀವನ ಮತ್ತು ಸಾಧನೆ, ಸಿದ್ಧವನಹಳ್ಳಿ ಕೃಷ್ಣಶರ್ಮ - ವ್ಯಕ್ತಿ ಮತ್ತು ಶಕ್ತಿ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಬಹುಮಾನ ಸಂದಿದೆ. ...

READ MORE

Related Books