ಕೋಟೆ ನಾಡಿನ ಒಂಟಿ ಸಲಗ

Author : ಕೆ. ಎಸ್. ಪರಮೇಶ್ವರ

Pages 186

₹ 200.00




Year of Publication: 2021
Published by: ಭಾವಸಿಂಚನಾ ಪ್ರಕಾಶನ
Address: ಕುಣಿಗಲ್, ಜಿಲ್ಲೆ: ತುಮಕೂರು.
Phone: 9036402083

Synopsys

ಖ್ಯಾತ ಲೇಖಕ ಬಿ.ಎಲ್. ವೇಣು ಅವರ ಜೀವನ ಚರಿತ್ರೆಯನ್ನು ಲೇಖಕ ಕೆ.ಎಸ್. ಪರಮೇಶ್ವರ ಅವರು ನಿರೂಪಿಸಿದ ಕೃತಿ-ಕೋಟೆ ನಾಡಿನ ಒಂಟಿ ಸಲಗ. ಕಥೆಗಾರ ಬಿ.ಎಸ್. ವೇಣು ಅವರು ತಮ್ಮ ಕಥೆ-ಕಾದಂಬರಿ ಸೇರಿದಂತೆ ಇತರೆ ಪ್ರಕಾರದ ಸಾಹಿತ್ಯ ರಚನೆ ಮೂಲಕ ಓದುಗರಿಗೆ ಪರಿಚಿತರು ಮಾತ್ರವಲ್ಲ; ಸಾಹಿತ್ಯಕ ವಲಯದಲ್ಲಿ ತಮ್ಮದೇ ಛಾಪು ಮೂಡಿಸಿದವರು. ಬಿ.ಎಸ್. ವೇಣು ಅವರ ಬದುಕು, ಸಾಹಿತ್ಯಕ ಸಾಧನೆ, ಸಾಹಿತ್ಯದೆಡೆಗಿನ ದೃಷ್ಟಿಕೋನ, ಸಾಮಾಜಿಕ ಸೇವೆಯ ಆಯಾಮಗಳು ಕೃತಿಯಲ್ಲಿ ನಿರೂಪಿತಗೊಂಡಿವೆ. ಕಥೆಗಾರರೊಬ್ಬರನ್ನು ಅವರ ಸಾಹಿತ್ಯಕ ಸಾಧನೆ ಮೂಲಕ ವೇಣು ಅವರ ವ್ಯಕ್ತಿತ್ವದ ಸ್ವರೂಪ-ಸ್ವಭಾವವನ್ನು ಕಟ್ಟಿಕೊಡುವ ವಿಶಿಷ್ಟ ಕೃತಿ.

About the Author

ಕೆ. ಎಸ್. ಪರಮೇಶ್ವರ

ಕೆ.ಎಸ್. ಪರಮೇಶ್ವರ ಅವರು ಮೂಲತಃ ಬೆಂಗಳೂರಿನವರು. ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿ ಎಂ.ಕಾಂ ಪದವಿ ಪಡೆದಿದ್ದಾರೆ. ರಂಗಭೂಮಿಯ ಹಿನ್ನೆಲೆ ಇರುವ ಪರಮೇಶ್ವರ್ ಸುಮಾರು 12 ವರ್ಷಗಳಿಂದ ನಟನೆ, ನಿರ್ದೇಶನ, ಬೆಳಕಿನ ವಿನ್ಯಾಸ, ರಂಗಸಜ್ಜಿಕೆ, ವಸ್ತ್ರವಿನ್ಯಾಸ, ಸಂಘಟನೆ ಹೀಗೆ ರಂಗಭೂಮಿಯ ಹಲವಾರು ವಿಭಾಗಗಳಲ್ಲಿ ಕಾರ್ಯ ನಿರ್ವಹಿಸಿದ್ದಾರೆ. 2010-2011ನೇ ಸಾಲಿನಲ್ಲಿ ರಾಷ್ಟ್ರೀಯ ನಾಟಕ ಶಾಲೆ(National School of Drama) ಬೆಂಗಳೂರು ಅಧ್ಯಾಯದಿಂದ ರಂಗಭೂಮಿ ಕುರಿತು ಅಧ್ಯಯನ ಮಾಡಿದ್ದಾರೆ. ಕಾನೂರು ಹೆಗ್ಗಡತಿ, ಸಿರಿಸಂಪಿಗೆ, ಕಥನ, ಮಿಸ್.ಸದಾರಮೆ, ಕಥೆ ಹೇಳ್ತೀವಿ, ಶಾಂಡಿಲ್ಯ ಪ್ರಹಸನ, ಚೆರಿ ಆರ್ಚರ್ಡ್, ಉತ್ತರರಾಮ ಚರಿತೆ, ಪ್ರಮೀಳಾರ್ಜುನೀಯಂ, ನಾಯಿಕಥೆ, ಸೇವಂತಿ ಪ್ರಸಂಗ, ಚಿರಕುಮಾರ ...

READ MORE

Related Books