ನುಡಿಗೋಲು

Author : ಜಾಣಗೆರೆ ವೆಂಕಟರಾಮಯ್ಯ

Pages 278

₹ 250.00




Year of Publication: 2023
Published by: ಜಾಣಗೆರೆ ಪತ್ರಿಕೆ ಪ್ರಕಾಶನ
Address: ಬೆಂಗಳೂರು

Synopsys

‘ನುಡಿಗೋಲು’ ಜಾಣಗೆರೆ ವೆಂಕಟರಾಮಯ್ಯ ಅವರ ರಚನೆಯ ಕೃತಿಯಾಗಿದೆ. ಕನ್ನಡ ಚಳುವಳಿ ಎಂದರೆ ಕೇವಲ ಬೀದಿಯಲ್ಲಿ ನಿಂತು ಬಾವುಟ ಬೀಸುತ್ತಾ ಘೋಷಣೆ ಕೂಗುವುದು ಮಾತ್ರವಲ್ಲ. ಓದುವುದು ಮತ್ತು ಬರೆಯುವುದು ಕೂಡ ಚಳುವಳಿಯ ಬಹುಮುಖ್ಯ ಭಾಗ ಎಂಬುದನ್ನು ನಮ್ಮ ಕನ್ನಡ ಪರಂಪರೆ ಎಷ್ಟೋ ವರ್ಷಗಳಿಂದ ನಿರೂಪಿಸಿದೆ. ಜಾಣಗೆರೆ ವೆಂಕಟರಾಮಯ್ಯನವರು ಪರಂಪರೆಯ ಮಹತ್ವದ ಕೊಂಡಿಯಾಗಿ, ನಮ್ಮ ಕಾಲದಲ್ಲಿ ನಿರಂತರ ಬರವಣಿಗೆಯಲ್ಲಿ ತೊಡಗಿರುವುದು ನಿಜಕ್ಕೂ ಶ್ಲಾಘನೀಯ. ಅವರು ಕಥೆ ಬರೆಯಲಿ, ಕಾದಂಬರಿ ಬರೆಯಲಿ, ವ್ಯಕ್ತಿ ಚಿತ್ರಣ ಬರೆಯಲಿ, ಅಂಕಣ ಬರೆಯಲಿ, ಏನೇ ಬರೆದರೂ ಆ ಬರವಣಿಗೆಯ ಮನಸ್ಥಿತಿ, ಕೇಂದ್ರ, ವಸ್ತು, ವಿನ್ಯಾಸ ಇತ್ಯಾದಿಗಳು ಕನ್ನಡ ಚಳುವಳಿಯ ತಳಹದಿಯ ಮೇಲೆ ನಿರ್ಮಾಣ ಆಗಿರುತ್ತವೆ. ಏಕೆಂದರೆ ಅವರು ತಮ್ಮ ಜೀವಿತ ಕಾಲದ ಉದ್ದಕ್ಕೂ ಒಬ್ಬ ಪ್ರಾಮಾಣಿಕ ಹೋರಾಟಗಾರರಾಗಿ ಬದುಕಿ ತೋರಿಸಿದ್ದಾರೆ. ಇತರೆ ಕನ್ನಡ ಹೋರಾಟಗಾರರಿಗೆ ಆದರ್ಶವಾಗಿದ್ದಾರೆ. ಎಪ್ಪತ್ತರ ಎತ್ತರದಲ್ಲಿರುವ ಅವರ ಬದುಕಿನ ಅನುಭವದಲ್ಲಿ ಹಲವು ಜನ ಮಹತ್ವದ ವ್ಯಕ್ತಿಗಳು ಬಂದು ಹೋಗಿದ್ದಾರೆ. ಅವರಲ್ಲಿ ಬಹಳ ಮುಖ್ಯವಾದವರ ಸಾಂಗತ್ಯವನ್ನು ಕುರಿತು ಜಾಣಗೆರೆ ಇಲ್ಲೊಂದು ನುಡಿ ದೇಗುಲ ಕಟ್ಟಿಕೊಟ್ಟಿದ್ದಾರೆ. ಮಹಾ ಮಹಿಮ ಕೆಂಪೇಗೌಡರಿಂದ ಮೊದಲ್ಗೊಂಡು ಗುರುಗಳಾದ ಬರಗೂರು ರಾಮಚಂದ್ರಪ್ಪನವರನ್ನು ಒಳಗೊಂಡು, ಗೆಳೆಯರಾದ ಬಿ.ವಿ. ನರಸಿಂಹಯ್ಯ ಹಾಗೂ ಧನಂಜಯರವರೆಗೆ ಬರೆದಿದ್ದಾರೆ. ಧನಂಜಯ ಹೆಚ್ಚು ಓದಿದವರಲ್ಲ. ಕನ್ನಡ ಪುಸ್ತಕಗಳನ್ನು ರೂಪಿಸುವ ಅವರ ಪ್ರತಿಭೆ ನಮ್ಮೆಲ್ಲರಿಗಿಂತ ದೊಡ್ಡದು. ಕಿ.ರಂ. ನಾಗರಾಜ, ಕೆ.ಸಿ. ಶಿವಾರೆಡ್ಡಿ ಮುಂತಾದವರು ಅವರನ್ನು ಹುಡುಕಿ ಹೊರತಂದರು. ತಮ್ಮ ಸಮಕಾಲೀನ ಮಿತ್ರರನ್ನು ಕಂಡರೆ ಒಳಗೊಳಗೇ ಕರುಬುವ, ಕಾಲೆಳೆಯುವ ಈ ದಿನಮಾನದಲ್ಲಿ ವ್ಯಕ್ತಿಯ ಒಳಗಿನ ಸದ್ಗುಣಗಳನ್ನು ಗುರುತಿಸಿ ಬರೆಯುವುದು ಎಂದರೆ ಮಾನವೀಯ ಸಮಾಜವನ್ನು ನಿರ್ಮಾಣ ಮಾಡುವ ಕೆಲಸವೇ ಆಗುತ್ತದೆ. ಒಂದು ದೇಶವನ್ನು ಅರ್ಥ ಮಾಡಿಕೊಳ್ಳುವುದು ಎಂದರೆ ಆ ದೇಶದಲ್ಲಿರುವ ಅಪರೂಪದ ವ್ಯಕ್ತಿತ್ವಗಳನ್ನು ಅರ್ಥ ಮಾಡಿಕೊಳ್ಳುವುದೇ ಅಲ್ಲವೆ? ಜಾಣಗೆರೆಯವರ ಅನೇಕ ಕೃತಿಗಳು ಚಾರಿತ್ರಿಕ ಶಿಲಾ ಶಾಸನದಂತೆ ಮುಂದೊಂದು ದಿನ ಭವಿಷ್ಯದ ಸಂಶೋಧಕರಿಗೆ ಆಕರ ಗ್ರಂಥವಾಗುವುದರಲ್ಲಿ ಸಂಶಯವಿಲ್ಲ. - ಪ್ರೊ. ಎಲ್.ಎನ್. ಮುಕುಂದರಾಜ್

About the Author

ಜಾಣಗೆರೆ ವೆಂಕಟರಾಮಯ್ಯ
(05 June 1949)

ಹಿರಿಯ ಪತ್ರಕರ್ತ, ಲೇಖಕ ಜಾಣಗೆರೆ ವೆಂಕಟರಾಮಯ್ಯ ತುಮಕೂರು ಜಿಲ್ಲೆ ಕುಣಿಗಲ್ ತಾಲ್ಲೂಕಿನ ಜಾಣಗೆರೆಯವರು. ಓದಿದ್ದು ಬಿ.ಕಾಂ ಆದರೂ ಸಾಹಿತ್ಯ ಹಾಗೂ ಪತ್ರಿಕೋದ್ಯಮ ಅವರ ಆಸಕ್ತಿದಾಯಕ ಕ್ಷೇತ್ರವಾಗಿತ್ತು. ಪತ್ರಕರ್ತರಾಗಿ  ಪ್ರಪಾತ, ನನ್ನ ನಲ್ಲ ನನ್ನ ಜನ, ಕಪ್ಪು ನ್ಯಾಯ, ದಡ, ನೆಲೆ, ಗರ, ಮಹಾನದಿ, ಮಾಯಾನಗರಿಯಲ್ಲಿ ಮಾಯಾಶಿಲ್ಲಿ, ಸುಡುಗುಂಡುಗಳ ನಾಡಲ್ಲಿ ಶಾಂತಿಯ ಕನಸು, ಸವೆಯದ ಹಾದಿ, ಎದೆಯಾಳ, ಬೆಂಕಿ ಮತ್ತು ಬೆಳಕು ಇವರ ಪ್ರಮುಖ ಕೃತಿಗಳು.  ಇವರಿಗೆ ವಿ.ನಾಗರಾಜರಾವ್ ಸಮೂಹ ಮಾಧ್ಯಮ ಪ್ರಶಸ್ತಿ, ಕನ್ನಡ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಎಚ್.ಕೆ. ವೀರಣ್ಣಗೌಡ ಪ್ರಶಸ್ತಿ, ವಿ.ಚಿ. ಸಾಹಿತ್ಯ ಪ್ರತಿಷ್ಠಾನದ ಪ್ರಶಸ್ತಿ, ...

READ MORE

Related Books