ಬಾಲಲೀಲಾ ಮಹಾಂತ

Author : ಬಿದರಹಳ್ಳಿ ನರಸಿಂಹಮೂರ್ತಿ

Pages 84

₹ 16.00




Year of Publication: 1996
Published by: ಕರ್ನಾಟಕ ಸಾಹಿತ್ಯ ಅಕಾಡೆಮಿ
Address: ನೃಪತುಂಗ ರಸ್ತೆ, ಬೆಂಗಳೂರು- 560002

Synopsys

‘ಬಾಲಲೀಲಾ ಮಹಾಂತ’ ಲೇಖಕ ಬಿದರಹಳ್ಳಿ ನರಸಿಂಹಮೂರ್ತಿ ಅವರು ರಚಿಸಿರುವ ಕೃತಿ. ಈ ಕೃತಿಯಲ್ಲಿ ಶಿವಯೋಗಿಗಳಾದ ಬಾಲಲೀಲ ಮಹಾಂತರ ಜೀವನ ಮತ್ತು ಕಾರ್ಯಗಳ ಮೇಲೆ ಬೆಳಕು ಚೆಲ್ಲಿದ್ದಾರೆ. ಎರಿನಾಳ ವಿರಕ್ತ ಮಠದ ಶ್ರೀಗಳವರ ವಂಶಪರಂಪರೆಯಲ್ಲಿ ಮಹಾಂತ ಶಿವಯೋಗಿಗಳ ಹೆಸರು ಸಿಗುತ್ತದೆ. ಹುಟ್ಟಿದಾಗಲೇ ಇವರನ್ನು ಆ ವಿರಕ್ತಮಠಕ್ಕೆ ಮರಿ ಎಂದು ಕರೆದಿದ್ದರಂತೆ. ಇವರು ಮಸೂತಿ ಎಂಬ ಸ್ಥಳದಲ್ಲಿ ಜನ್ಮ ಪಡೆದರೆಂದು ಹೇಳಲಾಗುತ್ತದೆ. ಇವರ ಜನನಿ ಜನಕರು ಅಯ್ಯಮ್ಮ ಹಾಗೂ ಪರ್ವತಯ್ಯ. ಈ ಹಿನ್ನೆಲೆಯಲ್ಲಿ ಆಲಮಟ್ಟಿಯ ಹಿರಿಯಮಠಕ್ಕೂ ಮಸೂತಿಯ ಜಗದೀಶ್ವರ ಮಠಕ್ಕೂ ಮೊದಲಿನಿಂದಲೂ ಬೀಗತನ ಇದ್ದಿದ್ದು, ತಿಳಿದು ಬರುತ್ತದೆ. ಮಹಾಯೋಗಿಗಳ ಬದುಕು ಮತ್ತು ಸಾಧನೆಗಳ ಕುರಿತಾದ ಕೃತಿ ಬಾಲಲೀಲಾ ಮಹಾಂತ.

About the Author

ಬಿದರಹಳ್ಳಿ ನರಸಿಂಹಮೂರ್ತಿ
(05 February 1950)

ಕವಿ, ಕತೆಗಾರ, ಕಾದಂಬರಿಕಾರ, ನಾಟಕಕಾರ, ವಿಮರ್ಶಕ, ಸಂಪಾದಕ, ಅನುವಾದಕ ಹೀಗೆ ಸಾಹಿತ್ಯ ಕ್ಷೇತ್ರದ ಹಲವು ಪ್ರಕಾರಗಳಲ್ಲಿ ಕೃಷಿ ಮಾಡಿರುವ ಬಿದರಹಳ್ಳಿ ನರಸಿಂಹಮೂರ್ತಿ ಅವರು ಹುಟ್ಟಿದ್ದು ಶಿವಮೊಗ್ಗ ಜಿಲ್ಲೆಯ ಹೊಳೆಹೊನ್ನೂರಿನಲ್ಲಿ. ಇಂಗ್ಲಿಷ್ ಉಪನ್ಯಾಸಕರಾಗಿ ಸರ್ಕಾರಿ ಸೇವೆಗೆ ಸೇರಿ ಪ್ರಿನ್ಸಿಪಲ್ ಆಗಿ ನಿವೃತ್ತರಾಗಿ ಹೊನ್ನಾಳಿಯಲ್ಲೇ ನೆಲೆಸಿದ್ದ ಬಿದರಹಲ್ಳಿಯವರು ಹೆಚ್ಚೂ ಕಡಿಮೆ ಕನ್ನಡ ಸಾಹಿತ್ಯದ ಎಲ್ಲ ಪ್ರಕಾರಗಳಲ್ಲೂ ಕೃಷಿಮಾಡಿದ್ದಾರೆ. ಅವರ ಪ್ರಕಟಿತ ಕೃತಿಗಳು:  ಕಾವ್ಯ: ಕಾಡಿನೊಳಗಿದೆ ಜೀವ(1979), ಸೂರ್ಯದಂಡೆ(1996), ಅಕ್ಕಿಕಾಳು ನಕ್ಕಿತಮ್ಮ(2001),  ಭಾವಕ್ಷೀರ(2006), ಅಕ್ಕನೆಂಬ ಅನುಭಾವಗಂಗೆ(2017) ಕಥಾಸಂಕಲನ: ಶಿಶು ಕಂಡ ಕನಸು(1993, 2005), ಹಂಸೆ ಹಾರಿತ್ತು(2000, 2010), ನೀರಾಳ ಸೊಲ್ಲು(2017), ಸಸಿಯ ...

READ MORE

Related Books