ರಾಣಿ ರಾಸಮಣಿ

Author : ಸ್ವಾಮಿ ಜಗದಾತ್ಮಾನಂದ

Pages 120

₹ 15.00




Year of Publication: 1976
Published by: ರಾಷ್ಟ್ರೋತ್ಥಾನ ಸಾಹಿತ್ಯ
Address: 93/1, ಕೇಶವಶಿಲ್ಪ, ಕೆಂಪೇಗೌಡ ನಗರ, ಬೆಂಗಳೂರು - 560004, ಉಮಾ ಥಿಯೇಟರ್‍ ಹತ್ತಿರ, ಚಾಮರಾಜಪೇಟೆ

Synopsys

‘ರಾಣಿ ರಾಸಮಣಿ’ ಜೀವನಚರಿತ್ರೆಯ ಈ ಕೃತಿಯನ್ನು ಲೇಖಕ ಸ್ವಾಮಿ ಜಗದಾತ್ಮಾನಂದ ಅವರು ರಚಿಸಿದ್ದಾರೆ. ಬಡ ಕುಟುಂಬದಲ್ಲಿ ಜನಿಸಿ ಶ್ರೀಮಂತನ ಕೈಹಿಡಿದು ವಿಪುಲ ಸಂಪತ್ತಿನ ಒಡತಿಯಾಗಿದ್ದರೂ ದೀನದಲಿತರನ್ನು ಮರೆಯದೆ ದಾನ, ಧರ್ಮ, ಪರೋಪಕಾರದ ಕಾರ್ಯಗಳಲ್ಲಿ ಆಸಕ್ತಳಾಗಿದ್ದು, ದೈವಭಕ್ತಿ, ಕಾರ್ಯದಕ್ಷತೆ ಮತ್ತು ಗಾಂಭೀರ್ಯಗಳನ್ನು ಮೈಗೂಡಿಸಿಕೊಂಡು ಜನಮನದಲ್ಲಿ ಚಿರಸ್ಥಾಯಿಯಾದ ಸ್ಥಾನವನ್ನು ಪಡೆದ ವಂಗದೇಶದ ಮಹಿಳಾಮಣಿ ರಾಣಿ ರಾಸಮಣಿ. ದಕ್ಷಿಣೇಶ್ವರದಲ್ಲಿ ಕಾಳಿಕಾ ದೇವಾಲಯವನ್ನೂ, ಉದ್ಯಾನವನ್ನೂ ನಿರ್ಮಿಸಿ, ಶ್ರೀ ರಾಮಕೃಷ್ಣರ ತಪೋಭೂಮಿಯನ್ನು ಸಿದ್ಧಗೊಳಿಸಿ ಖ್ಯಾತಿ ಪಡೆದಳು ಎಂದು ಕೃತಿಯ ಕುರಿತಾಗಿ ವಿವರಿಸಲಾಗಿದೆ.

 

About the Author

ಸ್ವಾಮಿ ಜಗದಾತ್ಮಾನಂದ - 15 November 2018)

ಮೈಸೂರಿನ ರಾಮಕೃಷ್ಣಾಶ್ರಮ ಶಾರದಾಶ್ರಮದ ಸ್ವಾಮಿ ಜಗದಾತ್ಮಾನಂದರು ತಮ್ಮ ‘ಬದುಕಲು ಕಲಿಯಿರಿ’ ಎಂಬ ಪುಸ್ತಕದಿಂದ ಪ್ರಸಿದ್ಧರು. 1881ರಲ್ಲಿ ಪ್ರಕಟಿತ ಈ ಕೃತಿಯು ಹತ್ತು ಹಲವು ಭಾಷೆಗಳಲ್ಲಿ ಅನುವಾದಗೊಂಡು, 3 ಲಕ್ಷಕ್ಕೂ ಅಧಿಕ ಕೃತಿಗಳು ಮಾರಾಟವಾಗಿ ಕನ್ನಡ ಪುಸ್ತಕ ಪ್ರಕಾಶನದಲ್ಲಿ ದಾಖಲೆ ನಿರ್ಮಿಸಿದೆ. ಬದುಕಲು ಕಲಿಯಿರಿ- ಈ ಪುಸ್ತಕವು  ಏಳು ಸುದೀರ್ಘ ಅಧ್ಯಾಯಗಳನ್ನು ಒಳಗೊಂಡಿದೆ.  2018ರ ನವೆಂಬರ 15 ರಂದು ನಿಧನರಾದರು.  ...

READ MORE

Related Books