ಪಿ. ಆರ್ ತಿಪ್ಪೇಸ್ವಾಮಿ

Author : ಜೀ.ಶಂ. ಪರಮಶಿವಯ್ಯ

Pages 22

₹ 10.00




Year of Publication: 1994
Published by: ಕರ್ನಾಟಕ ಲಲಿತಕಲಾ ಅಕಾಡೆಮಿ
Address: ಕರ್ನಾಟಕ ಲಲಿತಕಲಾ ಅಕಾಡೆಮಿ 2ನೇ ಮಹಡಿ, ಕನ್ನಡ ಭವನ, ಜೆ.ಸಿ.ರಸ್ತೆ, ಬೆಂಗಳೂರು – 560002

Synopsys

ಜಾನಪದ ಕ್ಷೇತ್ರದಲ್ಲಿ ಸಾಧನೆ ಮಾಡಿ, ಪರಿಚಿತರಾಗಿರುವ ಜೀ. ಶಂ. ಪರಮಶಿವಯ್ಯ ಅವರು ಬರೆದಿರುವ ’ಪಿ. ಆರ್‍. ತಿಪ್ಪೇಸ್ವಾಮಿ’ ಪುಸ್ತಕವು ಕರ್ನಾಟಕ ಲಲಿತಕಲಾ ಅಕಾಡೆಮಿಯ ’ಕರ್ನಾಟಕ ಕಲಾವಿದರ ಮಾಲೆ’ ಸರಣಿಯಲ್ಲಿ ಪ್ರಕಟಗೊಂಡಿದೆ.

ಪಿ. ಆರ್‍. ತಿಪ್ಪೇಸ್ವಾಮಿ ಅವರು ಐದು ದಶಕಗಳ ಕಾಲ ಕಲೆಯ, ಕಲಾವಿದರ ಅಭಿವೃದ್ಧಿಗಾಗಿ, ನಿಸ್ವಾರ್ಥ ಸೇವೆ ಸಲ್ಲಿಸಿದವರು, ಜಾನಪದ ಕ್ಷೇತ್ರದಲ್ಲಿಯೂ ಅವರು ಅಪಾರವಾಗಿ ದುಡಿದವರು.  ಚಿತ್ರಕಲೆಯ ಬಗ್ಗೆ ಗ್ರಂಥವನ್ನು ರಚಿಸಿದವರು. ಕರ್ನಾಟಕದಾದ್ಯಂತ ಸಂಚರಿಸಿ ಕಲಾವಿದರನ್ನು, ಶಿಲ್ಪಿಗಳನ್ನು ಸಂದರ್ಶಿಸಿ ಅವರ ಸಮಸ್ಯೆಗಳ ಪರಿಹಾರಕ್ಕಾಗಿ ಹೋರಾಟ ನಡೆಸಿದವರು.

ಪಿ. ಆರ್‍. ತಿಪ್ಪೇಸ್ವಾಮಿ ನಾಡಿನ ಶ್ರೇಷ್ಠ ಕಲಾವಿದರಾಗಿ, ಅದರಲ್ಲೂ ಜಲವರ್ಣದ ನಿಸರ್ಗ ಚಿತ್ರರಚನೆಯಲ್ಲಿ ತಮ್ಮದೇ ಆದ ವಿಶಿಷ್ಟ ಶೈಲಿಯನ್ನು ರೂಢಿಸಿಕೊಂಡವರು. ಇವರ ಬಗೆಗಿನ ಸಂಪೂರ್ಣ ಕಲಾ ಚಿತ್ರಣ ಮತ್ತು ಜೀವನ ಚಿತ್ರಣವನ್ನು ಈ ಪುಸ್ತಕದ ಮೂಲಕ ತಿಳಿಯಬಹುದು.

About the Author

ಜೀ.ಶಂ. ಪರಮಶಿವಯ್ಯ
(12 November 1933 - 17 June 1995)

ಜೀ.ಶಂ. ಪರಮಶಿವಯ್ಯ 'ಜೀಶಂಪ' ಎಂಬ ಸಂಕ್ಷಿಪ್ರನಾಮದಿಂದಲೇ ಚಿರಪರಿಚಿತರು. ಜೀರಹಳ್ಳಿ ಶಂಕರೇಗೌಡ ಪರಮಶಿವಯ್ಯನವರು ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕಿನ (ಜನನ: 12-11-1933) ಅಂಬಲ ಜೀರಹಳ್ಳಿಯವರು. ಮೈಸೂರಿನಲ್ಲಿ ತಮ್ಮ ಉನ್ನತ ವ್ಯಾಸಂಗವನ್ನು ಮುಗಿಸಿ ಕನ್ನಡ ಎಂ.ಎ. ಪದವಿಯ ಜೊತೆಗೆ ಜಾನಪದದಲ್ಲಿ ಪಿಎಚ್.ಡಿ. ಪಡೆದರು. ಮೈಸೂರಿನ ಜೆ.ಎಸ್.ಎಸ್. ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿ, ಮುಂದೆ ಕನ್ನಡ ಅಧ್ಯಯನ ಸಂಸ್ಥೆಯ ಜಾನಪದ ವಿಭಾಗದಲ್ಲಿ ಅಧ್ಯಾಪಕರಾಗಿ, ರೀಡರ್ ಆಗಿ, ಜಾನಪದ ಪ್ರಾಧ್ಯಾಪಕರಾಗಿ, ಕುಲಪತಿಗಳ ಆಪ್ತ ಕಾರ್ಯದರ್ಶಿ ಯಾಗಿ, ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೆಶಕರಾಗಿದ್ದರು. ಜಾನಪದ ಕ್ಷೇತ್ರದಲ್ಲಿ ಅವರ ಸಾಧನೆ ಅದ್ವಿತೀಯ. ಕರ್ನಾಟಕದಾದ್ಯಂತ ಸಂಚರಿಸಿ ಹೊಸ ಹೊಸ ಜಾನಪದ ...

READ MORE

Related Books