ಚಾರ್ಲಿ ಚಾಪ್ಲಿನ್

Author : ಕಾಶೀನಾಥ ಅಂಬಲಗೆ

Pages 60

₹ 25.00




Year of Publication: 2018
Published by: ಪ್ರಗತಿ ಪ್ರಕಾಶನ
Address: ಜಯನಗರ ವಿಶ್ವವಿದ್ಯಾಲಯ ರಸ್ತೆ, ಕಲಬುರ್ಗಿ- 595105

Synopsys

ಲೇಖಕ ಕಾಶೀನಾಥ ಅಂಬಲಗೆ ಅವರು ಮಕ್ಕಳಿಗಾಗಿ ರಚಿಸಿದ ಕಿರುಹೊತ್ತಿಗೆ- ‘ಚಾರ್ಲಿ ಚಾಪ್ಲಿನ್’ . ಜಗತ್ತೇ ನಕ್ಕು ನಗಿಸಿದ ಶ್ರೇಷ್ಠ ಕಲಾವಿದ ಚಾರ್ಲಿ ಚಾಪ್ಲಿನ್ ಬಗ್ಗೆ ಮಕ್ಕಳಿಗೆ ತಿಳಿಸುವ ಸಲುವಾಗಿ ಅತ್ಯಂತ ಸರಳ ನಿರೂಪಣೆಯಲ್ಲಿ ಈ ಕೃತಿಯನ್ನು ರಚಿಸಲಾಗಿದೆ. ಜೊತೆಗೆ, ಚಾರ್ಲಿ ಚಾಪ್ಲಿನ್ ಅವರ ಕೆಲವು ಸುಂದರ ಚಿತ್ರಗಳೊಂದಿಗೆ ಮಕ್ಕಳನ್ನು ಸೆಳೆವ ರೀತಿ ಈ ಕೃತಿ ರಚಿತವಾಗಿದೆ. ಈ ಕಿರುಹೊತ್ತಿಗೆ ಮಹಾನ್ ಕಲಾವಿದನ ಬದುಕಿನ ಕುರಿತು ತಿಳಿಸುತ್ತದೆ.

About the Author

ಕಾಶೀನಾಥ ಅಂಬಲಗೆ
(10 July 1947)

ಕಾಶೀನಾಥ ಅಂಬಲಗೆ ಅವರು ಹುಟ್ಟಿದ್ದು 10-07-1947 ರಲ್ಲಿ. ಬೀದರ ಜಿಲ್ಲೆಯ, ಬಸವಕಲ್ಯಾಣ ತಾಲೂಕಿನ ಮುಚಳಂಬಿ ಎಂಬ ಗ್ರಾಮದಲ್ಲಿ. ಇವರ ತಂದೆ ರಾಚಪ್ಪ ಅಂಬಲಗೆ, ತಾಯಿ ಗುರಮ್ಮ ಅಂಬಲಗೆ. ಕನ್ನಡದಲ್ಲಿ ಎಂ.ಎ ಪದವಿ ಪಡೆದ ಅಂಬಲಗೆ ಹಿಂದಿ ಭಾಷೆಯಲ್ಲೂ ಎಂ.ಎ ಪದವಿ ಗಳಿಸಿದ್ದಾರೆ. ಬಿ.ಎಡ್ ಜೊತೆಗೆ ಪಿಎಚ್.ಡಿ ಪದವಿಯನ್ನು ಪಡೆದಿದ್ದಾರೆ. ಪಿಎಚ್.ಡಿ ಪದವಿಯನಂತರ ಅಧ್ಯಾಪಕ ವೃತ್ತಿಯನ್ನು ಆಯ್ದುಕೊಂಡ ಅವರು ಮಹಾವಿದ್ಯಾಲಯದಲ್ಲಿ 21ವರ್ಷ, ವಿಶ್ವವಿದ್ಯಾಲಯದಲ್ಲಿ 12 ವರ್ಷ ಹಿಂದಿ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ಜೊತೆಗೆ ಪಿಎಚ್.ಡಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರಾಗಿಯೂ ತೊಡಗಿಸಿಕೊಂಡಿದ್ದಾರೆ.  ಕವಿ, ಲೇಖಕ, ಸಾಹಿತಿ, ಕಾದಂಬರಿಗಾರರಾದ ಅಂಬಲಗೆ ಅನುವಾದಕರಾಗಿಯೂ ಪ್ರಸಿದ್ಧರು. ಜೊತೆಗೆ ...

READ MORE

Related Books