ಕಲಾಯೋಗಿ ಆನಂದ ಕುಮಾರಸ್ವಾಮಿ

Author : ಜಿ.ಬಿ. ಹರೀಶ

Pages 201

₹ 250.00




Year of Publication: 2022
Published by: ವಂದೇಮಾತರಂ ಪ್ರಕಾಶನ
Address: ಬೆಂಗಳೂರು

Synopsys

ಲೇಖಕ ಜಿ.ಬಿ. ಹರೀಶ ಅವರ ಕೃತಿ-ಕಲಾಯೋಗಿ ಆನಂದ ಕುಮಾರಸ್ವಾಮಿ. ಭಾರತೀಯ ತತ್ವಶಾಸ್ತ್ರದ ಘನತೆಯನ್ನು ವಿಶ್ವದೆಲ್ಲೆಡೆ ಪರಿಚಯಿಸಿದ ಹಲವರ ಪೈಕಿ ಇವರೂ ಒಬ್ಬರು. ಇವರ ಪೂರ್ಣ ಹೆಸರು- ಆನಂದ ಕೆಂಟಿಷ್ ಕುಮಾರಸ್ವಾಮಿ. ಬ್ರಿಟಿಷ್ ಆಡಳಿತ ವ್ಯಾಪ್ತಿಯಲ್ಲಿದ್ದ ಕೊಲೊಂಬೊದಲ್ಲಿ (1877-1947) ಜನಿಸಿದರು. ಭಾರತೀಯ ಶಿಲ್ಪಕಲೆ, ಶಿಲ್ಪಶಾಸ್ತ್ರ, ಚಿತ್ರಕಲೆ, ಸಂಗೀತ, ನೃತ್ಯ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಭಾರತೀಯ ಸಂಸ್ಕೃತಿಯ ಕಡೆ ಒಲವಿತ್ತು. ಉಡುಗೆ ತೊಡುಗೆಗಳಲ್ಲೂ ಭಾರತೀಯತೆ ಇರಬೇಕು ಎಂಬುದು ಅವರ ನಡೆಯಾಗಿತ್ತು. ವಿದೇಶೀ ಉಡುಗೆ ತೊಟ್ಟರೂ ಹಣೆಯಲ್ಲಿ ಗಂಧದ ಮೇಲೆ ಕುಂಕುಮದ ಬೊಟ್ಟು ಇರುತ್ತಿತ್ತು. ಭಾರತೀಯ ವೇದ, ಉಪನಿಷತ್, ಭಗವದ್ಗೀತೆ, ರಾಮಾಯಣ, ಮಹಾಭಾರತಗಳ ಅಧ್ಯಯನಗಳ ಪರಿಣಾಮ ದಿನೇದಿನೆ ಭಾರತೀಯ ಸಂಸ್ಕೃತಿಯಲ್ಲಿ ಭಕ್ತಿ, ಗೌರವ ಬೆಳೆಸಿಕೊಂಡರು. 

ಖ್ಯಾತ ಕಾದಂಬರಿಕಾರ ಎಸ್.ಎಲ್. ಭೈರಪ್ಪ ಅವರು ಈ ಕೃತಿಗೆ ಸಂಬಂಧಿಸಿದಂತೆ ‘ಈ ವಿಷಯದಲ್ಲಿ ಇಷ್ಟು ಸಮಗ್ರವಾದ ಪರಿಚಯಾತ್ಮಕ ಪುಸ್ತಕವು ನಾನು ತಿಳಿದ ಮಟ್ಟಿಗೆ ಕನ್ನಡದಲ್ಲಿ ಬೇರೊಂದಿಲ್ಲ’ ಎಂದು ಅಭಿಪ್ರಾಯಪಟ್ಟಿದ್ದಾರೆ. ಕಲಾಯೋಗಿ ಆನಂದ ಕುಮಾರಸ್ವಾಮಿ ಅವರ ಬಾಲ್ಯ, ಬೆಳೆದ ಬಗೆ, ಚಿಂತನೆಯ ಗಹನತೆ, ಸಂದೇಶ ಇತ್ಯಾದಿ ಕುರಿತು ವಿವರವಾಗಿ ಬರೆದ ಕೃತಿ ಇದು.

About the Author

ಜಿ.ಬಿ. ಹರೀಶ

ಜಿ.ಬಿ ಹರೀಶ್ ಅವರು ಹೊಸ ತಲೆಮಾರಿನ ಗಂಭೀರ ವಿಮರ್ಶಕರಲ್ಲಿ ಒಬ್ಬರು. ಕನ್ನಡ ಕಾವ್ಯಗಳು, ಜೈನ, ಬೌದ್ಧ ಮತ್ತು ಶಾಸ್ತ್ರ ಸಾಹಿತ್ಯ ವಿಷಯಗಳಲ್ಲಿ ವಿಶೇಷ ಪರಿಣತಿ ಪಡೆದಿದ್ದಾರೆ. ಮೈಸೂರು ವಿ.ವಿ.ಯಿಂದ ಕನ್ನಡ ಸ್ನಾತಕೋತ್ತರ ಪದವಿಯನ್ನು ಪಡೆದು ಕೊಂಡ ಇವರು ದೇವಚಂದ್ರನ ರಾಜಾವಳಿ ಕಥಾಸಾರ: ಜೈನ ಸಾಹಿತ್ಯಕ, ಸಾಂಸ್ಕೃತಿಕ ಮತ್ತು ಐತಿಹಾಸಿಕ ಅಧ್ಯಯನ ಎಂಬ ವಿಷಯದಲ್ಲಿ ಪಿಎಚ್.ಡಿ. ಪದವಿ ಪಡೆದಿದ್ದಾರೆ. ಸಾಹಿತ್ಯ, ಕಲೆ ಮತ್ತು ತತ್ವಶಾಸ್ತ್ರ ಇವರ ಆಸಕ್ತಿಯ ಕ್ಷೇತ್ರಗಳು, ತುಮಕೂರು ವಿ.ವಿ., ಬೆಂಗಳೂರಿನ ಶೇಷಾದ್ರಿಪುರಂ ಸ್ನಾತಕೋತ್ತರ ಕೇಂದ್ರ, ಎಂ.ಇ.ಎಸ್. ಸ್ನಾತಕೋತ್ತರ ಕೇಂದ್ರ, ಬಿ.ಎಂ.ಶ್ರೀ. ಸ್ಮಾರಕ ಪ್ರತಿಷ್ಠಾನ ಸೇರಿದಂತೆ ಹಲವು ...

READ MORE

Related Books