ರಾಮಮನೋಹರ ಲೋಹಿಯ

Author : ಖಾದ್ರಿ ಶಾಮಣ್ಣ

Pages 102

₹ 15.00




Year of Publication: 1975
Published by: ರಾಷ್ಟ್ರೋತ್ಥಾನ ಸಾಹಿತ್ಯ
Address: ಕೇಶವ ಶಿಲ್ಪ, ಕೆಂಪೇಗೌಡ ನಗರ, ಬೆಂಗಳೂರು-560019
Phone: 9945036300

Synopsys

`ರಾಮಮನೋಹರ ಲೋಹಿಯಾ’ ಅವರ ಜೀವನಚರಿತ್ರೆಯ ಪುಸ್ತಕವಿದು. ಲೇಖಕ ಖಾದ್ರಿ ಶಾಮಣ್ಣ ಅವರು ರಚಿಸಿದ್ದಾರೆ. ಸಮಾಜವಾದಿ, ಸಿಡಿಲಿನ ವ್ಯಕ್ತಿತ್ವದ ದಿಟ್ಟ ನಾಯಕರು. ಭಾರತಕ್ಕೆ ಸ್ವಾತಂತ್ರ್ಯ ಬರುವ ಮುನ್ನವೂ ಬಂದ ನಂತರವೂ ಸೆರೆಮನೆಯನ್ನು ಕಂಡ ಹೋರಾಟಗಾರರು. ಬೆರಗುಗೊಳಿಸುವ ವಿದ್ವತ್ತು, ಸ್ವತಂತ್ರ ವಿಚಾರಧಾರೆ, ಬಡವರಿಗೆ, ಹಿಂದುಳಿದವರಿಗೆ, ಸ್ತ್ರೀಯರಿಗೆ ನಿಜವಾದ ನ್ಯಾಯ ದೊರಕಿಸಿ ಕೊಡುವ ಸಮಾಜದ ಸೃಷ್ಟಿಗಾಗಿ ದುಡಿದರು ಎಂದು ರಾಮಮನೋಹರ ಲೋಹಿಯಾ ಅವರ ಕುರಿತು ಈ ಕೃತಿಯಲ್ಲಿ ಬಣ್ಣಿಸಲಾಗಿದೆ. ರಾಮಮನೋಹರ ಲೋಹಿಯ ಅವರ ಬಾಲ್ಯ ಜೀವನ, ಹೋರಾಟದ ಪರಿ, ಸೆರೆಮನೆಯ ದಿನಗಳು ಹೀಗೆ ವಿವಿಧ ಆಯಾಮಗಳಲ್ಲಿ ಲೇಖಕರು ನವಿರಾಗಿ ಚಿತ್ರಿಸಿದ್ದಾರೆ.

About the Author

ಖಾದ್ರಿ ಶಾಮಣ್ಣ
(06 June 1925 - 11 May 1990)

ಖಾದ್ರಿ ಶಾಮಣ್ಣ ಅವರ ಜನನ 6 ಜೂನ್, 1925 - ಮೇಲುಕೋಟೆಯ ವೈದಿಕ ಪರಿವಾರದಲ್ಲಿ, ಆರಂಭದ ಶಿಕ್ಷಣ ಊರಿನಲ್ಲಿ, ಆನಂತರ ಮೈಸೂರಿಗೆ ಹೆಚ್ಚಿನ ಶಿಕ್ಷಣಕ್ಕಾಗಿ, ಸೀನಿಯರ್ ಇಂಟರ್‌ಗೆ ಬರುವ ವೇಳೆಗೆ ರಾಮಕೃಷ್ಣ - ಸ್ವಾಮಿ ವಿವೇಕಾನಂದರ ಪ್ರಭಾವದ ತೆಕ್ಕೆಯಲ್ಲಿ ಎಳೆಯ ಖಾದ್ರಿ, ರಾಷ್ಟ್ರೀಯ ಸಂಗ್ರಾಮ ಕೈಬೀಸಿ ಕರೆಯಿತು. 1942 ರ ಚಲೇಜಾವ್ ಚಳವಳಿಯಲ್ಲಿ ಸಕ್ರಿಯ ವಿದ್ಯಾರ್ಥಿಯಾಗಿದ್ದರು. ಹೋರಾಟದ ಕಲಿಗಳನೇಕರ ನಿಕಟ ಸಂಪರ್ಕವಿದ್ದ ಖಾದ್ರಿಯವರು ಸ್ವಾತಂತ್ರ್ಯ ಸಮರದ ಕಾಲದಲ್ಲಿ ಎರಡುಸಲ ಜೈಲಿಗೆ ಹೋಗಿದ್ದರು. ಸ್ವರಾಜ್ಯ ಬಂದಮೇಲೂ ಈ ಪರಂಪರೆ ನಿಲ್ಲಲಿಲ್ಲ, 3 ಬಾರಿ ಮತ್ತೆ ಸೆರೆವಾಸ, ಪ್ರಸಿದ್ಧ ಕಾಗೋಡು ...

READ MORE

Related Books