ಚಾಣಕ್ಯ ನೀತಿ

Author : ಮಹಾಬಲ ಸೀತಾಳಭಾವಿ

Pages 160

₹ 120.00




Year of Publication: 2016
Published by: ವಸಂತ ಪ್ರಕಾಶನ
Address: # 360, 10ನೇ ಬಿ;ಮುಖ್ಯರಸ್ತೆ, ಕಾಸ್ಮೊಪಾಲಿಟಿನ್ ಕ್ಲಬ್, ಜಯನಗರ ಪೂರ್ವ, ಜಯನಗರ, ಬೆಂಗಳೂರು-560011,
Phone: 0802244 3996

Synopsys

ಚಾಣಕ್ಯನ ನೀತಿ- ಲೇಖಕ ಮಹಾಬಲ ಸೀತಾಳಭಾವಿ ಅವರ ಕೃತಿ. ಚಾಣಕ್ಯ ನೀತಿ ಎಂದರೆ ಅರ್ಥಶಾಸ್ತ್ರಕ್ಕೆ ಸಂಬಂಧಿಸಿದ್ದು ಮಾತ್ರವಲ್ಲ; ರಾಜ್ಯಾಡಳಿತವೂ ಸೇರುತ್ತದೆ. ಕುಟುಂಬದ ನಿರ್ವಹಣೆಯೂ ಹೊರತಲ್ಲ. ಒಬ್ಬ ವ್ಯಕ್ತಿ ಇಲ್ಲವೇ ವ್ಯವಸ್ಥೆ ಹೇಗಿರಬೇಕು ಎಂಬುದನ್ನು ನಿಯಮಗಳನ್ನು ರೂಪಿಸಿ ಅರಸ ಚಂದ್ರಗುಪ್ತನಿಂದ ಜಾರಿಗೊಳಿಸಲು ಯತ್ನಿಸಿದ ಚಾಣಾಕ್ಷ. ಅರಸನಾದವನಿಗೆ ಇಂತಹ ಚಾಣಾಕ್ಷಗಳಿರಬೇಕು. ಆ ಮೂಲಕವೇ ಜನರನ್ನು ನಿಯಂತ್ರಿಸಬೇಕು. ಶಿಷ್ಟರನ್ನು ಹೇಗೆ ಪ್ರಶಂಸಿಸಬೇಕು ಮತ್ತು ದುಷ್ಟರನ್ನು ಹೇಗೆ ಶಿಕ್ಷಿಸಬೇಕು ಎಂಬ ಬಗ್ಗೆಯೂ ದಂಡನಾಶಾಸ್ತ್ರ ಕುರಿತೂ ಅವರು ನಿಯಮಗಳನ್ನು ಮಾಡಿದ್ದು, ಇಂದಿಗೂ ಆ ಕುರಿತು ಚರ್ಚೆಯಾಗುತ್ತಿದೆ. ಇಂತಹ ಸಂಗತಿಗಳ ಕುರಿತು ಈ ಕೃತಿಯು ಅತ್ಯುತ್ತಮವಾದ ಮಾಹಿತಿಯನ್ನು ನೀಡುತ್ತದೆ.

About the Author

ಮಹಾಬಲ ಸೀತಾಳಭಾವಿ

ಮಹಾಬಲ ಸೀತಾಳಭಾವಿ ಅವರು ಮೂಲತಃ ಲೇಖಕರು ಹಾಗೂ ಅನುವಾದಕರು.  ಕೃತಿಗಳು: ಕಾಳಿದಾಸ ಮಹಾಕವಿಯ ಅಭಿಜ್ಞಾನ ಶಾಕುಂತಲ (ಅನುವಾದಿತ ನಾಟಕ), ಚಾಟು ಕವಿತೆಗೆ ಚುಟುಕು ಕತೆ (ಚಾಟೋಕ್ತಿಗಳ ಸಂಗ್ರಹ ಕೃತಿ), 108 ಹಳೆ ಆಚಾರ ಹೊಸ ವಿಚಾರ, ಆಂಟೆನ ಚೆಕಾಫ್ ಕಥೆಗಳು (ಅನುವಾದ), ಮ್ಯಾನೇಜ್ ಮೆಂಟ್ ಕತೆಗಳು (ಯಶಸ್ವಿಗೆ 150 ಅಡ್ಡದಾರಿಗಳು), ಚಾಣಕ್ಯ ನೀತಿ, ಮ್ಯಾನೇಜ್ ಮೆಂಟ್ ಭಗವದ್ಗೀತೆ, ನಿತ್ಯ ಜೀವನಕ್ಕೆ ಹತ್ತಿರದ ಸುಭಾಷಿತಗಳು, ಈ ತಪ್ಪು ನೀವು ಮಾಡಬೇಡಿ.  ...

READ MORE

Related Books