ಶೇಕ್ಸ್ ಪಿಯರನ ಶ್ರೀಮತಿ

Author : ಉದಯ್ ಇಟಗಿ

Pages 67

₹ 80.00




Year of Publication: 2021
Published by: ಸಿದ್ಧಾರ್ಥ ಎಂಟರ್ ಪ್ರೈಸೆಸ್
Address: ಗಣಪತಿ ನಗರ, ಗಾಣಿಗೆರ ಹಳ್ಳಿ, ಬೆಂಗಳೂರು ಉತ್ತರ, ಚಿಕ್ಕಬಾಣಾವರ ಅಂಚೆ-560090
Phone: 9916015005

Synopsys

ಲೇಖಕ ಉದಯ ಇಟಗಿ ಅವರ ಏಕವ್ಯಕ್ತಿ ರಂಗ ಪ್ರಯೋಗ ಕೃತಿ-ಶೇಕ್ಸ್ ಪಿಯರ್ ನ ಶ್ರೀಮತಿ. ಲೇಖಕಿ ಆರ್. ತಾರಿಣಿ ಶುಭದಾಯಿನಿ ಅವರು ಬೆನ್ನುಡಿ ಬರೆದು ‘ಶೇಕ್ಸ್ ಪಿಯರ್ ಎಂಬ ಮಾಂತ್ರಿಕ ಬರಹಗಾರನ ಬದುಕಿನ ಪುರಾವೆಗಳನ್ನು ಹುಡುಕುತ್ತಾ, ಅವನ ಕೃತಿಗಳ ಪ್ರಮಾಣಗಳ ಚುಂಗನ್ನು ಹಿಡಿದುಕೊಂಡು ಅವನ ವ್ಯಕ್ತಿತ್ವ ಕಲ್ಪಿಸಿ ಕೊಡುವ ಪ್ರಯತ್ನಗಳಿಗೆ ತಮ್ಮ ಜೀವಮಾನಗಳನ್ನು ತೆತ್ತುಕೊಂಡ ಸಂಶೋಧಕರು, ಆಸಕ್ತರು ಇರುವುದರಿಂದಲೇ ಅವನ ಬಗೆಗಿನ ಕತೆಗಳು ಕಣ್ಣಮುಂದೆ ಸೃಜನಶೀಲವಾಗಿ ನರ್ತಿಸುತ್ತಾ ಇವೆ. ದೈವದ ಹಂಗಿಲ್ಲದೇ ಮನುಷ್ಯನ ಶಕ್ತಿ ಸಾಮರ್ಥ್ಯಗಳನ್ನು ಕಂಡುಕೊಳ್ಳುವ ಹಂಬಲದಿಂದ ಬರೆಯುತ್ತಾ ಹೋದ. ರಮ್ಯತೆಯ ಅತ್ಯುನ್ನತ ನೆಲೆಯನ್ನು ತನ್ನ ಸಾಹಿತ್ಯದ ಮೂಲಕ ಶೋಧಿಸಿಕೊಂಡ. ಶೇಕ್ಸ್ ಪಿಯರ್ ಜೀವನದಲ್ಲಿ ಬಂದ ಸುರದ್ರೂಪಿ, ಪೋಷಕ ಗೆಳೆಯ, ಮೋಹ ಹುಟ್ಟಿಸುವ ಕಪ್ಪು ಹೆಣ್ಣು, ಬರೆಯುವ ಹಂಬಲವನ್ನು ಅಸೂಯೆಯಿಂದ ಹೆಚ್ಚಿಸಿದ ಶತ್ರು ಕವಿ, ಇವರು ಶೆಕ್ಸ್ ಪಿಯರ್ ನ ಜೀವನವನ್ನು ನಾಟಕೀಯವಾಗಿ ಕಟ್ಟಿಕೊಳ್ಳಲು ಬೇಕಾದ ಪರಿಕರಗಳನ್ನು ಒದಗಿಸಿದರು. ಮಕ್ಕಳ ತಾಯಿಯಾಗಿ ಜೀವನ ಕಳೆದ ಶೇಕ್ಸ್ ಪಿಯರ್ ನ ಹೆಂಡತಿ, ತನ್ನ ಗಂಡನನ್ನು ನೋಡಿದ್ದು ಹೇಗೆ ಎಂಬ ಕುತೂಹಲದಿಂದ ಹೊರಟರೆ, ಶೇಕ್ಸ್ ಪಿಯರ್ ನ ಇನ್ನೊಂದು ಪುಟವೇ ತೆರೆಯಬಹುದು. ಸ್ತ್ರೀವಾದ ಕ್ರಿಯಾಶೀಲವಾಗಿರುವ ಈ ದಿನಗಳಲ್ಲಿ ಹೀಗೆ ಪೊಸಿಷನ್ನುಗಳ ಬದಲಾದ ನೋಟಗಳು  ಪ್ರಸ್ತುತವಾಗುತ್ತಲಿವೆ. ಹೀಗೆ ನೋಡುವ ಅನೇಕ ಪ್ರಯತ್ನಗಳು ಇಂಗ್ಲಿಷಿನಲ್ಲಿ ನಡೆದಿದ್ದು, ಅಂತಹ ಅನೇಕ ಪ್ರಯತ್ನಗಳನ್ನಾಧರಿಸಿ, ಏಕವ್ಯಕ್ತಿ ಪ್ರದರ್ಶನ ನಾಟಕ ರಚಿಸಿರುವ ಉದಯ ಇಟಗಿ ಅವರ ಪ್ರಯತ್ನ ಓದುಗರ ಮುಂದಿದೆ. ಶೇಕ್ಸ್ ಪಿಯರ್ ನ ಅಭಿಮಾನಿಗಳು ಕನ್ನಡದಲ್ಲಿ ಮೂಡಿದ ಶೇಕ್ಸ್ ಪಿಯರ್ ಈ ಹೊಸ ವ್ಯಕ್ತಿತ್ವ ವಿಶ್ಲೇಷಣೆಯನ್ನು ಸವಿದು ತಮ್ಮ ಶೇಕ್ಸ್ ಪಿಯರ್ ನ ಒಲವನ್ನು ಗಟ್ಟಿಗೊಳಿಸಿಕೊಳ್ಳಲಿ’ ಎಂದು ಆಶಿಸಿದ್ದಾರೆ. 

About the Author

ಉದಯ್ ಇಟಗಿ

ಉದಯ ಇಟಗಿ ಅವರು ಮೂಲತಃ ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಮುಧೋಳದವರು. ಲಿಬಿಯಾ ದೇಶದ ಸೆಭಾ ವಿಶ್ವ ವಿದ್ಯಾನಿಲಯದಲ್ಲಿ ಎಂಟು ವರ್ಷ ಕಾಲ ಇಂಗ್ಲೀಷ್ ಅಧ್ಯಾಪಕರಾಗಿ, ಸದ್ಯ ಸ್ವದೇಶದಲ್ಲಿ ನೆಲೆಸಿದ್ದಾರೆ. ಪ್ರವೃತ್ತಿಯಿಂದ ಬರಹಗಾರರು. ಬಾಲ್ಯದಿಂದಲೇ ಹೊಳೆಸಾಲ ಸಂವೇದನೆಗಳೊಂದಿಗೆ ಬೆಳೆದ ಇವರಿಗೆ ಸಹಜವಾಗಿ ಸಾಹಿತ್ಯದತ್ತ ಆಕರ್ಷಣೆ. ವಿದ್ಯಾರ್ಥಿ ದೆಸೆಯಿಂದಲೇ ಬರವಣಿಗೆಯ ಗೀಳನ್ನು ಅಂಟಿಸಿಕೊಂಡು, ಅನುವಾದ ಸಾಹಿತ್ಡಯ ಸೃಷ್ಟಿಯಲ್ಲಿ ಒಲವು ಬೆಳೆಸಿಕೊಂಡವರು. ಬೇರೆ ಬೇರೆ ಭಾಷೆಯ ಕವಿತೆಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಇವರ ಕೆಲವು ಕವಿತೆ, ಲೇಖನಗಳು ‘ಕೆಂಡಸಂಪಿಗೆ’ ಸೇರಿದಂತೆ ಬೇರೆ ಬೇರೆ ಆನ್‍ಲೈನ್ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಕೆಲವು ಅನುವಾದಿತ ಕಥೆಗಳು ‘ಉದಯವಾಣಿ’ಯಲ್ಲಿ ...

READ MORE

Related Books