ಮಾಸ್ತಿ

Author : ಮಾವಿನಕೆರೆ ರಂಗನಾಥನ್‌

Pages 116

₹ 125.00




Year of Publication: 2016
Published by: ಸುಭಾಶ್ ಸ್ಟೋರ್ರ್‍ಸ್‍
Address: # ಎಫ್ ಕೆಸಿಸಿಐ ಕಟ್ಟಡ, ಕೆಂಪೇಗೌಡ ರಸ್ತೆ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬಳಿ, ಬೆಂಗಳೂರು-560009
Phone: 0802225 6624

Synopsys

ಲೇಖಕ ಮಾವಿನಕೆರೆ ರಂಗನಾಥನ್ ಅವರು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ಡಾ. ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರ ಬದುಕು-ಸಾಹಿತ್ಯಕ ಸಾಧನೆ ಕುರಿತು ಬರೆದ ಕೃತಿ-ಮಾಸ್ತಿ. ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಮಾಸ್ತಿ ಎಂಬುದು ವೆಂಕಟೇಶ ಅಯ್ಯಂಗಾರ್ ಅವರ ಊರು. ಧಾರ್ಮಿಕ ವ್ಯಕ್ತಿಯಾಗಿದ್ದರೂ ಯಾವುದು ಸರಿ-ಯಾವುದು ತಪ್ಪು ಎಂಬ ಮಾನವೀಯ ಪ್ರಜ್ಞೆಯ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರು, ಅನೇಕ ಸಾಹಿತ್ಯಾಭಾಸಗಳಿಗೆ ಮಾರ್ಗದರ್ಶಕರು. ಕನ್ನಡ ಸಾಹಿತ್ಯ ಚರಿತ್ರೆ, ಕನ್ನಡ ಲಿಪಿಯ ಇತಿಹಾಸ, ಕನ್ನಡ ಅರಸು ಮನೆತನಗಳು, ಕಾವ್ಯ-ಕಥೆ-ಕಾದಂಬರಿ ಇತ್ಯಾದಿ ಸಾಹಿತ್ಯ ಪ್ರಕಾರಗಳ ಆಳ-ಅಗಲವನ್ನು ಅತ್ಯಂತ ಗಂಭೀರವಾಗಿ ಅಧ್ಯಯನ ಮಾಡಿದ ವಿದ್ವಾಂಸರು. ಅವರು ಕನ್ನಡ ಸಾಹಿತ್ಯದ ಸಣ್ಣ ಕಥೆಗಳ ಜನಕ ಎಂದೇ ಪ್ರಸಿದ್ಧರು. ಇಂತಹ ಘನ ವ್ಯಕ್ತಿತ್ವವನ್ನು ಪರಿಚಯಿಸುವ ಉದ್ದೇಶ ಒಳಗೊಂಡ ಕೃತಿ ಇದು.

About the Author

ಮಾವಿನಕೆರೆ ರಂಗನಾಥನ್‌
(21 December 1943)

ಸಾಹಿತಿ, ಪ್ರಕಾಶಕ, ನಿರ್ದೇಶಕ ಮಾವಿನಕೆರೆ ರಂಗನಾಥನ್‌ ಅವರು 1943 ಡಿಸೆಂಬರ್‌ 21ರಂದು ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲ್ಲೂಕಿನ ಮಾವಿನಕೆರೆಯಲ್ಲಿ ಜನಿಸಿದರು. ತಾಯಿ ಸೀತಮ್ಮ. ತಂದೆ ಎಚ್‌.ಆರ್‌. ಶಿಂಗೈಯ್ಯಂಗಾರ್‌. ಬೆಂಗಳೂರಿನ ಸೆಂಟ್ರಲ್‌ ಕಾಲೇಜಿನಲ್ಲಿ ಸ್ನಾತಕೋತ್ತರ ಪದವಿ ಹಾಗೂ ಕಾನೂನು ಪದವಿ ಪಡೆದರು. ಇವರು ಬರೆದ ಹಲವಾರು ಸಣ್ಣ ಕತೆಗಳು ಬೇರೆ ಬೇರೆ ಭಾಷೆಗೆ ಅನುವಾದಗೊಂಡಿವೆ. ಇವರ ರುಕ್ಮಿಣಿ, ಚಂಕ್ರಬಂಧ್ರನ, ಉತ್ತರಾಯಣ, ಪರ್ಜನ್ಯ, ಮಿಥುನ, ಉಳಿದದ್ದು ಆಕಾಶ, ಮಾವಿನ ಕೆರೆ ಆಯ್ದ ಭಾಗ, ಮುಂತಾದ ಕತೆಗಳು ಕಥಾ ಸಂಕಲನದಲ್ಲಿ ಪ್ರಕಟಗೊಂಡಿವೆ. ಏಳು ಸುತ್ತಿನ ಕೋಟೆ, ಜಲತರಂಗ ಇವರು ರಚಿಸಿದ ಕಾದಂಬರಿಗಳು. ಸಂಕ್ಷಿಪ್ತ, ನಮ್ಮ ...

READ MORE

Related Books