ಅವಿಸ್ಮರಣೀಯ ಮುತ್ಸದ್ಧಿ

Author : ಅಪ್ಪಾರಾವ್ ಅಕ್ಕೋಣಿ

Pages 156

₹ 120.00




Year of Publication: 2015
Published by: ಕನ್ನಡನಾಡು ಲೇಖಕರ ಮತ್ತು ಓದುಗರ ಸಹಕಾರ ಸಂಘ
Address: ಕಲಬುರಗಿ

Synopsys

ಲೇಖಕ ಅಪ್ಪಾರಾವ್ ಅಕ್ಕೋಣಿ ಅವರ ಕೃತಿ-ಅವಿಸ್ಮರಣೀಯ ಮುತ್ಸದ್ಧಿ. ಕರ್ನಾಟಕದ ಮುಖ್ಯಮಂತ್ರಿಯಾಗಿದ್ದ ಧೀಮಂತ ನಾಯಕ, ರಾಜಕೀಯ ಮುತ್ಸದ್ಧಿ ವೀರೇಂದ್ರ ಪಾಟೀಲರ ಜೀವನ ಹಾಗೂ ವ್ಯಕ್ತಿತ್ವವನ್ನು ಕಟ್ಟಿಕೊಡುವ ಕೃತಿ ಇದು. ತುಂಬಾ ಸರಳ ಭಾಷೆಯಲ್ಲಿ ವೀರೇಂದ್ರ ಪಾಟೀಲರ ಗಂಭೀರ ವ್ಯಕ್ತಿತ್ವವನ್ನು ಒಟ್ಟು 14 ಅಧ್ಯಾಯಗಳ ಮೂಲಕ ಪರಿಚಯಿಸಿದ್ದಾರೆ. ಅವರ ಬಾಲ್ಯ ಜೀವನ, ರಾಜಕೀಯ ರಂಗ ಪ್ರವೇಶ, ಪಾಟೀಲರು ಮಂತ್ರಿಯಾದಾಗ, ಕಲಬುರ್ಗಿಯ ಕಂದ ಕರ್ನಾಟಕದ ಮುಖ್ಯಮಂತ್ರಿ, ಬೆಂಗಳೂರಿನಿಂದ ದಿಲ್ಲಿಗೆ,ಮರಳಿ ಕಾಂಗ್ರೆಸ್ಸಿಗೆ -ಕೇಂದ್ರ ಸಚಿವರಾಗಿ, ಅಪರೂಪದ ರಾಜಕಾರಣಿ ಪ್ರತಿಭಾವಂತ ಸಂಸದೀಯ ಪಟು, ಹೀಗೆ ಹತ್ತು ಹಲವು ವಿಷಯಗಳನ್ನು ವೀರೇಂದ್ರರ ಪಾಟೀಲರ ಮುತ್ಸದ್ಧಿತನದ ಎತ್ತರವನ್ನು ಓದುಗರಿಗೆ ತುಂಬಾ ಅಚ್ಚುಕಟ್ಟಾಗಿ ನೀಡುತ್ತವೆ. 

About the Author

ಅಪ್ಪಾರಾವ್ ಅಕ್ಕೋಣಿ

ಲೇಖಕ ಅಪ್ಪಾರಾವ್ ಅಕ್ಕೋಣಿ ಅವರು ಕಲಬುರಗಿ ಜಿಲ್ಲೆಯ ಕಮಲಾಪುರ ತಾಲೂಕಿನ ಡೊಂಗರಗಾoವ್ ಗ್ರಾಮದವರು. ತಾಯಿ ಶರಣಮ್ಮ ತಂದೆ ವೀರಭದ್ರಪ್ಪ ಅಕ್ಕೋಣಿ. ವಾರ್ತಾ ಮತ್ತು ಪ್ರಚಾರ ಇಲಾಖೆಯ ಜಂಟಿ ನಿರ್ದೇಶಕರಾಗಿ ನಿವೃತ್ತರು. ಕನ್ನಡನಾಡು ಲೇಖಕರ ಮತ್ತು ಓದುಗರ ಸಹಕಾರ ಸಂಘದ ಅಧ್ಯಕ್ಷರಾಗಿ,ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಸಭಾಪತಿಗಳಾಗಿ, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಹಿರಿಯ ಉಪಾಧ್ಯಕ್ಷರಾಗಿದ್ದಾರೆ.  ಕೃತಿಗಳು: ಹುತಾತ್ಮ ಧನಶೆಟ್ಟಿ ಮಲ್ಲಪ್ಪ, ಅವಿಸ್ಮರಣೀಯ ಮುತ್ಸದಿ  (ಜೀವನಚಿತ್ರಗಳು) ಇವರಿಗೆ ರಾಜ್ಯ ಮತ್ತು ರಾಷ್ಟ್ರಮಟ್ಟದ ಪ್ರಶಸ್ತಿಗಳು ಲಭಿಸಿವೆ.  ...

READ MORE

Related Books