ಧೀಮಂತ ಚೇತನ

Author : ಸಂಯುಕ್ತಾ ಪುಲಿಗಲ್‌

Pages 124

₹ 50.00




Year of Publication: 2013
Published by: ಕೆ.ಎನ್.ಗುರುದತ್ತ
Address: #1072/4, ಸಹಜ ನಿಲಯ, 14ನೇ ಎ ಮೈನ್, ಚಿ.ನ.ಮಂಗಲ ರಸ್ತೆ, ಹನುಮಂತನಗರ, ಬೆಂಗಳೂರು- 560 019

Synopsys

ಲೇಖಕಿ, ಅನುವಾದಕಿ ಸಂಯುಕ್ತ ಪುಲಿಗಲ್ ಅವರ ಕೃತಿ ‘ಧೀಮಂತ ಚೇತನ’. ಸಾರ್ವಜನಿಕ ಶಿಕ್ಷಣ ಇಲಾಖೆಯ ನಿವೃತ್ತ ನಿರ್ದೇಶಕರು, ಪಿ.ಎಸ್. ರವೀಂದ್ರನಾಥ್ ಅವರು ಈ ಕೃತಿಗೆ ಮುನ್ನುಡಿಯ ಮಾತುಗಳನ್ನು ಬರೆದಿದ್ದಾರೆ. ’ಧೀಮಂತ ಚೇತನ’ ಪುಸ್ತಕವು ನಮ್ಮನ್ನು ತನ್ಮಯರನ್ನಾಗಿಸಿಓದಿಸಿಕೊಮಡು ಹೋಗುತ್ತದೆ. ನಾವು ಬಾಳಿದರೆ ಹಾಗೆ ಬಾಳಬೇಕೆಂದು ಪ್ರೇರೇಪಿಸುತ್ತದೆ. ಆದರ್ಶದ ಗುಂಗು ಇರುವವರೆಲ್ಲಾ ಓದಬೇಕಾದ ಹಾಗೂ ಅದರಿಂದ ಕಲಿಯಬೇಕಾದ ಬೇಕಾದಷ್ಟು ವಿಚಾರಗಳು ಪುಸ್ತಕದಲ್ಲಿವೆ ಎಂದು ಮುನ್ನುಡಿಯಲ್ಲಿ ಪಿ.ಎಸ್. ರವೀಂದ್ರನಾಥ್ ಅವರು ಬರೆದುಕೊಮಡಿದ್ದಾರೆ. ಕೃತಿಯ ಪರಿವಿಡಿಯಲ್ಲಿ ಜನರಿಂದ ಜನರಿಗಾಗಿ ಅಣ್ಣಯ್ಯ, ಅಣ್ಣಯ್ಯನ ಯಶಸ್ಸಿನ ಗುಟ್ಟು, ಮನದಾಳದ ಮಾತುಗಳು, ಹೀಗೆ ಮೂರು ವಿಭಾಗಗಳಿದ್ದು, ಪ್ರತಿ ವಿಭಾಗದಲ್ಲೂ ಉಪ ವಿಭಾಗಗಳಿವೆ. ಮೂರನೇ ವಿಭಾಗದಲ್ಲಿ ಬಿ.ವಿ.ಮೋಹನ್, ಜಿ.ವಿ.ಪದ್ಮ, ನೀಲಕಂಠ ಎಂ, ಎಂ.ಎನ್ ಶ್ರೀನಿವಾಸ ಮೂರ್ತಿ ಸೇರಿದಂತೆ ಅನೇಕರು ತಾವು ಕಂಡ ಜಿ.ವಿ. ವೆಂಕಟನಾರಾಯಣ ರಾವ್ ಅವರ ಬಗ್ಗೆ ಲೇಖನಗಳನ್ನು ಹಂಚಿಕೊಂಡಿದ್ದಾರೆ.

About the Author

ಸಂಯುಕ್ತಾ ಪುಲಿಗಲ್‌

ಸಂಯುಕ್ತಾ ಪುಲಿಗಲ್ ಬೆಂಗಳೂರಿನ ನಿವಾಸಿ. ಐಟಿ ಉದ್ಯೋಗಿ. ಕನ್ನಡ ಮತ್ತು ಇಂಗ್ಲಿಷ್ ಸ್ನಾತಕೋತ್ತರ ಪದವಿಗಳನ್ನು ಪಡೆದಿದ್ದಾರೆ. ಓದು - ಬರಹಗಳಲ್ಲಿ ಅಪಾರವಾದ ಆಸಕ್ತಿಯನ್ನು ತಳೆದಿರುವ ಅವರು ‘ಪರ್ವತದಲ್ಲಿ ಪವಾಡ’ ಮತ್ತು ‘ರೆಬೆಲ್ ಸುಲ್ತಾನರು’ ಎಂಬ ಅನುವಾದಿತ ಕೃತಿಗಳನ್ನು ಹಾಗೂ ’ಲ್ಯಾಪ್ ಟಾಪ್ ಪರದೆಯಾಚೆಗೆ’ ಎಂಬ ಅಂಕಣ ಬರಹಗಳ ಪುಸ್ತಕವನ್ನು ಹೊರತಂದಿದ್ದಾರೆ. ಹಲವು ನಿಯತಕಾಲಿಕೆಗಳಲ್ಲಿ ವಿವಿಧ ವಿಷಯಗಳ ಕುರಿತಾದ ಲೇಖನಗಳನ್ನು ಪ್ರಕಟಿಸಿದ್ದಾರೆ. ...

READ MORE

Related Books