ಆಲ್‌ ದಿ ಬೆಸ್ಟ್‌

Author : ಯಶವಂತ ಸರದೇಶಪಾಂಡೆ

Pages 88

₹ 54.00




Year of Publication: 2012
Published by: ಸಾಹಿತ್ಯ ಪ್ರಕಾಶನ
Address: ಸಾಹಿತ್ಯ ಪ್ರಕಾಶನ ಕೊಪ್ಪೀಕರ ರಸ್ತೆ ಹುಬ್ಬಳ್ಳಿ : 580020

Synopsys

ಆಲ್‌ ದಿ ಬೆಸ್ಟ್‌ ಯಶವಂತ ಸರದೇಶ ಪಾಂಡೆ ಅವರ ಕೃತಿಯಾಗಿದೆ. ಬೆ೦ಗಳೂರುನಂತಹ ಊರುಗಳು ಪ್ರತಿಭಾವಂತರನ್ನ ಬೆಳೆಸ್ತಾವ, ಶಕ್ತಿವಂತರನ್ನ ಮರಸಾವ, ಕೈಲಾಗದವರನ್ನ ತುಳಿತಾವ, ಇ೦ಥಾ ಊರಿಗೆ ನಾ ಬಂದಾಗ ಗೆಳ್ಯಾರಾದವರು, ಗಿರೀಶ ಮಟ್ಟೆಣ್ಣವರ್, ಇವರು ನಮ್ಮೂರವರ ಆದರೂ ಭೆಟ್ಟಿಯಾಗಿದ್ದ ಬೆಂಗಳೂರಾಗ, ಅವರ ಗೆಲ್ಯಾ ಸುಧೀಂದ್ರ ಕಂಚಿತೋಟ ಈ ಸುಧೀಂದ್ರರ ಸಂಪಾದಕತ್ವದಾಗ ಗರ್ವ ಅನ್ನೋ ಪತ್ರಿಕೆ ಪ್ರಕಾಶಿತ ಆಗತಿತ್ತು ಗಿರೀಶ ಮಟ್ಟೆಣ್ಣನವ‌ ಅವರಿಗೆ ಕೈ ಜೋಡಿಸಿ ನನ್ನಿಂದ ಆಲ್ ದಿ ಬೆಸ್ಟ್! ಅಂಕಣವನ್ನು ಬರೆಯಲಿಕ್ಕೆ ಹಚ್ಚಿದರು, ನಾನು ಎಂದೂ ಅಂಕಣಗಳನ್ನ ಬರದವ ಅಲ್ಲ.... ತಪ್ಪಿಸದ ಹಂಗ ಸತತವಾಗಿ ಬರಿಯೋ ಶಕ್ತಿ ನನಗ ಅದನೋ ಇಲ್ಲೋ ಅಂತ ನನಗ ನಂಬಿಕೆ ಇರಲಿಲ್ಲ.... ಸತತ ಬರಿಯೋ ಗೆಳ್ಯಾರ ನಡುವಿದ್ದರೂ ಯಾಕೋ ಧೈರ್ಯ ಸಾಲಲಿಲ್ಲ. ಆದರ ಮಟ್ಟೆಣ್ಣನವರ ಮತ್ತು ಕಂಚಿತೋಟರ ಆಗ್ರಹದ ಮುಂದ ಇಲ್ಲ ಅನಲಿಕ್ಕಾಗಲಿಲ್ಲ... ಆಲ್ ದಿ ಬೆಸ್ಟ್! ಸುರು ಆತು, ನನ್ನ ಮನಸ್ಸಿಗೆ ಅನಿಸಿದ್ದನ್ನ ನನ್ನ ಪದತಿಯೊಳಗ ಬರಿಲಿಕ್ಕೆ ಸುರು ಮಾಡಿದೆ, ನೋಡ ನೋಡಹದಿನೈದು ವಾರಗಳಾಗಿದ್ದವು. ೧೫ ಲೇಖನಗಳು ಮುದ್ರಿತಗೊಂಡ ಪ್ರಕಾಶಿತವಾದವು. `ಗರ್ವ'ದ ಓದುಗರು ಆಗಾಗ ಪ್ರೋತ್ಸಾಹದ ಮಾತನಾಡಿ ಹುರುದುಂಬಿಸಿದ್ದನ್ನ ಮರಿಲಿಕ್ಕಾಗುದಿಲ್ಲ ಕಾರಣಾಂತರದಿಂದ ಗರ್ವ ಮು೦ದವರಿಯಲಿಲ್ಲ ಹಂಗಾಗಿ ನನ್ನ ರೆಗ್ಯೂಲರ್ ಬರವಣಿಗೆಯದು ಒಂದು ಇಂಟರ್‌ವೆಲ್ ಆತು ಎಂದು ಪುಸ್ತಕದ ಮುನ್ನುಡಿಯಲ್ಲಿ ಯಶವಂತ ಸರದೇಶ ಪಾಂಡೆ ಅವರು ತಿಳಿಸಿದ್ದಾರೆ.

About the Author

ಯಶವಂತ ಸರದೇಶಪಾಂಡೆ
(13 June 1965)

ರಂಗ ಕಲಾವಿದ ಯಶವಂತ ಸರದೇಶಪಾಂಡೆ ಅವರು ಮೂಲತಃ ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ (ಜನನ: 13-06-1965) ಉಕ್ಕಲಿ ಗ್ರಾಮದವರು. ತಂದೆ ಶ್ರೀಧರರಾವ್ ಸೆರದೇಶಪಾಂಡೆ, ತಾಯಿ ಕಲ್ಪನಾದೇವಿ. ಹೆಗ್ಗೋಡಿನ ನಿನಾಸಂ ನಾಟಕ ಸಂಸ್ಥೆಯಿಂದ ಡಿಪ್ಲೊಮಾ ಪದವೀಧರರು. ನ್ಯೂಯಾರ್ಕ್‌ ವಿಶ್ವವಿದ್ಯಾಯದಿಂದ ನಾಟಕ ರಚನೆ, ಚಲನ ಚಿತ್ರ ಸಂಭಾಷಣೆಯ ವಿಶೇಷ ತರಬೇತಿ ಪಡೆದಿದ್ದಾರೆ. ಅಂಧಯುಗ, ಇನ್‌ಸ್ಪೆಕ್ಟರ್‌ ಜನರಲ್, ಮಿಡ್‌ಸಮರ್‌ ನೈಟ್ಸ್‌ಡ್ರೀಮ್, ಬಾಡಿಗೆ ಮನೆ, ಕಿತ್ತೂರು ರಾಣಿ ಚೆನ್ನಮ್ಮ, ಪುಷ್ಪರಾಣಿ, ಗಲಿವರನ ಯಾತ್ರೆ, ಬೆಪ್ಪುತಕ್ಕಡಿ ಬೋಳೇ ಶಂಕರ, ತುಂಟ ಮಕ್ಕಳ ತಂಟೆ, ಮಕ್ಕಳೆರಡೇ ಇರಲಿ, ಕುಂಟಾ ಕುಂಟ ಕುರವತ್ತಿ ಮುಂತಾದ ಅರವತ್ತಕ್ಕೂ ಹೆಚ್ಚು ನಾಟಕಗಳ ...

READ MORE

Related Books