‘ಇಳೆ’ಯೆಂದರೆ ಬರಿ ಮಣ್ಣಲ್ಲ

Author : ಪಿ ಸಂಗೀತ

Pages 288

₹ 250.00




Year of Publication: 2021
Published by: ವಿಹಾ ಪುಸ್ತಕ
Address: #173,7ನೇ ಮುಖ್ಯ ರಸ್ತೆ, 24 ‘ಎ' ಕ್ರಾಸ್, ಗೋವಿಂದರಾಜನಗರ, ನಾಗರಬಾವಿ ಮುಖ್ಯರಸ್ತೆ, , ಬೆಂಗಳೂರು-560079
Phone: 984467351

Synopsys

‘‘ಇಳೆ’ಯೆಂದರೆ ಬರಿ ಮಣ್ಣಲ್ಲ” ಕೃತಿಯು ಪಿ. ಸಂಗೀತ ಅವರ ಲೇಖನಗಳ ಸಂಕಲನವಾಗಿದೆ. ಒಳ ಪುಟದಿಂದ ಆಯ್ದಂತಹ ಕೆಲವೊಂದು ಸಾಲುಗಳನ್ನು ಕೃತಿಯ ಬೆನ್ನುಡಿಯಲ್ಲಿ ಹೀಗೆ ನೀಡಲಾಗಿದೆ; ‘ಮಾಲಿನ್ಯವೆಂದರೆ ಮರೆಯಲ್ಲಿ ಹೊಂಚು ಹಾಕಿ ಕುಳಿತ ಹುಲಿಯಂತೆ. ಯಾವ ಕ್ಷಣದಲ್ಲಾದರೂ ಅದು ನಮ್ಮ ಮೈಮೇಲೆರಗಿ ಸರ್ವನಾಶಕ್ಕೆ ಕಾರಣವಾಗಬಹುದು. ನಮ್ಮ ತಲೆಯ ಮೇಲೆ ತೂಗುತ್ತಿರುವ ಕತ್ತಿ ಅದು. ಇಡೀ ಮಾನವ ಜನಾಂಗವೇ ಮಾಲಿನ್ಯವೆಂಬ ಪಿಸ್ತೂಲನ್ನು ತಲೆಗೆ ಒತ್ತಿ ಹಿಡಿದು ಆತ್ಮಹತ್ಯೆಗೆ ಸಿದ್ಧವಾಗಿ ನಿಂತಂತಿದೆ ಎಂದು. 

ಅಧ್ಯಾಯ-1ರಲ್ಲಿ ನವೋದಯ ಸಂದರ್ಭ, ಬೆಂದ್ರೆ, ಕುವೆಂಪು ಕೃತಿಗಳಲ್ಲಿ ಪರಿಸರದ ಪ್ರಶ್ನೆಗಳು: ಪ್ರವೇಶ, ಪ್ರಕೃತಿ- ಪರಿಸರ ಅರ್ಥವ್ಯಾಪ್ತಿ. ಅಧ್ಯಾಯ-2, ಪರಿಸರ ವಿಮರ್ಶೆ ಅಥವಾ ಹಸಿರು ಅಧ್ಯಯನಗಳು : ಪರಿಸರ ವಿಮರ್ಶೆಯ ಹಿನ್ನೆಲೆ -ಮುನ್ನೆಲೆ, ಪರಿಸರವಾದಿ ವಿಮರ್ಶಕರು, ಇಕೊಕ್ರಿಟಿಸಿಸಂ, ಡೀಪ್ ಇಕಾಲಜಿ ಎಂದರೇನು?, ಡೀಪ್ ಇಕಾಲಜಿಯ ಪರಿಸರ ಕೇಂದ್ರಿತ ಚಿಂತನೆಗೆ ತೊಡಕಾಗಿರುವ ಕೈಗಾರೀಕರಣ ಪ್ರಕ್ರಿಯೆ, ಪ್ರಗತಿ ಪಥದಿಂದ ಡೀಪ್ ಇಕಾಲಜಿಯೆಡೆಗೆ, ಡೀಪ್ ಇಕಾಲಜಿಯ ಧೈಯೋದ್ದೇಶಗಳು, ಪರಿಸರ ವಿಜ್ಞಾನೀಯ ದೃಷ್ಟಿ ಅಥವಾ ಎಲ್ಲವೂ ಚರಾಚರಾ ಜಗತ್ತಿನ ಸಮಗ್ರ ದೃಷ್ಟಿ ಒಂದಕ್ಕೊಂದು ಹೆಣೆದುಕೊಂಡಿರುವ ಚರಾಚರಾ ಜಗತ್ತಿನ ಸಮಗ್ರ ದೃಷ್ಟಿ, ಪರಿಸರ ಸ್ತ್ರೀವಾದ ಮತ್ತು ಇಕೊಲಾಜಿಸಮ್, ಕನ್ನಡ ವಿಮರ್ಶಾ ವಿವೇಕ ಮತ್ತು ಪರಿಸರ ವಿಮರ್ಶೆ. ಅಧ್ಯಾಯ -3 ರಲ್ಲಿ ಬೇಂದ್ರೆ ಕಾವ್ಯ : ಪರಿಸರದಲ್ಲಿ ಪ್ರವೇಶ, ಕೊಳೆಯ ತೊಳೆಯವರು ಇಲ್ಲ ಬಾ, ಇಳೆಯೆಂದರೆ ಬರಿಮಣ್ಣಲ್ಲ, ಅನ್ನ-ಹಸಿವು : ಪರಿಸರ, , ಪರಿಸರ ಧರ್ಮನ: ಯುದ್ಧ ಮತ್ತು ಪರಿಸರ, ವಸಾಹತುಶಾಹಿ ಮತ್ತು ಪರಿಸರ, ಸ್ಥಳೀಯತೆ ಮತ್ತು ಸಖೀಗೀತ, ನಿಸರ್ಗ ದೃಷ್ಠಿ. ಅಧ್ಯಾಯ -4 ರಲ್ಲಿ ಕುವೆಂಪು ಕಾವ್ಯ : ಪರಿಸರ: ಪ್ರವೇಶ, ರೋಮ್ಯಾಂಟಿಸಿಸಂ ಮತ್ತು ಕುವೆಂಪು ಅವರ ಕಾವ್ಯ, ಕಾವ್ಯ ಪರಿಸರ ಅಭಿನ್ನತೆ, ಪರಿಸರದ ಬಹುಮುಖತೆ, ಸ್ಥಳೀಯತೆ, ಪ್ರಕೃತಿ ಸೌಂದರ್‍ಯ ಹಾಗೂ ಸಂಪ್ರದಾಯಿಕ ಜಡ ಮೌಲ್ಯಗಳ ಪ್ರತಿರೋಧ, ಜೀವ ವಿಕಾಸ ಹಾಗೂ ಪರಿಸರ, ನಿಸರ್ಗ ಹಾಗೂ ಜೀವ ಸಂಘರ್ಷ, ಯುದ್ಧ, ಯಂತ್ರ ನಾಗರೀಕತೆ ಮತ್ತು ಪರಿಸರ, ಅತಿಭೋಗ ರೋಗ, ನಗರೀಕರಣ ಮತ್ತು ಪರಿಸರ, ಜನಸಂಖ್ಯಾ ಸ್ಫೋಟ ಮತ್ತು ಪರಿಸರ. ಅಧ್ಯಾಯ-5 ಮಹಾಕಾವ್ಯ ಶ್ರೀರಾಮಾಯಣಂ ದರ್ಶನಂ : ಮಹಾಕವಿ-ಮಹಾಕಾವ್ಯ, ಪೂರ್ಣದೃಷ್ಟಿ : ಪರಿಸರ ವಿಜ್ಞಾನೀಯ ದೃಷ್ಟಿ, ಸ್ಥಳೀಯತೆ, ವನ ಸಂಸ್ಕೃತಿ, ಅರಣ್ಯಯಾನ-ನಿಸರ್ಗಾನುಭವ, ಜೀವ ವೈವಿಧ್ಯತೆ, ನಗರ ಹಾಗೂ ಅರಣ್ಯ ಸಂಸ್ಕೃತಿಯ ಸಂಘರ್ಷ. ಅಧ್ಯಾಯ-6 ನಾಟಕಗಳು : ಪರಿಸರ ಸ್ನೇಹಿ ತತ್ವ, ಯುದ್ಧ ವಿನಾಶ, ಪರಿಸರ ಹೊಂದಾಣಿಕೆ, ಅಹಿಂಸೆ ಹಾಗೂ ಕರುಣೆಯ ತತ್ವ, ಜೀವ ಅಸಮಾನತೆಯ ನೆಲೆ, ಪರಿಸರ ಮತ್ತು ಮನುಷ್ಯನ ಅವಿನಾಭಾವ ಸಂಬಂಧ, ಪರಿಸರ ಸಹೋದರತ್ವ ಮತ್ತು ಮೋಡಣ್ಣನ ತಮ್ಮ. ಅಧ್ಯಾಯ-7 ಕಾದಂಬರಿಗಳು : ಕುವೆಂಪು ಅವರ ಕಥನ ಹಾಗೂ ಸಮಕಾಲೀನ ಸಹ್ಯಾದ್ರಿ ಪರಿಸರ, ಕಾನೂರು ಪರಿಸರ ಸಾಂಕೇತಿಕತೆ, ಜೀವ ಜಗತ್ತಿನ ಮಹದ್ವ್ಯಾಪಾರಗಳು, ವಸಾಹತುಶಾಹಿ ಪ್ರಭುತ್ವ ಹಾಗೂ ಅರಣ್ಯ(ಪರಿಸರ ಕಾಯ್ದೆ), ಎಲ್ಲ ಕ್ಷೇಮ ಭೂಮಿಯಲ್ಲಿ, ಪರಿಸರ ಆಧ್ಯಾತ್ಮ, ಪಾಕೃತಿಕ ಪರಿಸರ, ಬೇಟೆ ಹಾಗೂ ಮಾನವ ಸಮುದಾಯ, ಅರಣ್ಯ ಮತ್ತು ಮನುಷ್ಯ, ಮಲೆಗಳಲ್ಲಿ ಮದುಮಗಳು : ಜೀವ ಸಮಾನತೆಯ ಧೋರಣೆ, ಆಧ್ಯಾತ್ಮ ಮತ್ತು ಪರಿಸರ ದೃಷ್ಟಿ, ಪರಿಸರ ಸ್ತ್ರೀವಾದ. ಅಧ್ಯಾಯ-8, ಮಂತ್ರಮಾಂಗಲ್ಯ ಮತ್ತು ಪರಿಸರ ಚಿಂತನೆ. ಅಧ್ಯಾಯ -9, ಇಡಬೇಕಾದ ಹೆಜ್ಜೆಗಳು, ಅನುಬಂಧಗಳು, ಇಕಾಲಜಿ, ಪರಿಸರ ಅಥವಾ ಪ್ರಕೃತಿ ವ್ಯಾಖ್ಯೆಗಳು, ಆಕರ ಗ್ರಂಥಗಳು, ಪರಾಮರ್ಶನ ಗ್ರಂಥಗಳು, ಪರಾಮರ್ಶನ ಗ್ರಂಥಗಳು (ಇಂಗ್ಲಿಷ್), ಮೌಲ್ಯಮಾಪನ ವರದಿಗಳು, ವಿಷಯ ಸೂಚಿ. ಈ ಕೃತಿಯು ಈ ಎಲ್ಲಾ ವಿಚಾರಗಳನ್ನು ಒಳಗೊಂಡಿರುತ್ತದೆ.

 

About the Author

ಪಿ ಸಂಗೀತ

ಲೇಖಕಿ ಪಿ ಸಂಗೀತ ಅವರು ಮೂಲತಃ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆಯ ರೈತಾಪಿ ಕುಟುಂಬದವರು. ಹೊಸಕೋಟೆಯ ಬ್ರೈಟ್ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ, ಬೆಂಗಳೂರಿನ ವಿಜಯಾ ಪ್ರೌಢಶಾಲೆಯಲ್ಲಿ ಪ್ರೌಢ ಶಿಕ್ಷಣ, ಕ್ರೈಸ್ಟ್ ಕಾಲೇಜಿನಲ್ಲಿ ಪಿಯುಸಿ ಹಾಗೂ ಪದವಿ ಶಿಕ್ಷಣ, ಬೆಂಗಳೂರು ವಿ.ವಿ.ಯಿಂದ ಕನ್ನಡ ಎಂ.ಎ  ಹಾಗೂ ನವದೆಹಲಿಯ ಸಿಕ್ಪಕಿಂ ಮಣಿಪಾಲ್ ವಿ.ವಿ.ಯಲ್ಲಿ ಎಕಾಲಜಿ ಪದವಿ  ಪಡೆದಿದ್ದಾರೆ. ಕನ್ನಡ ಎಂ.ಎ ಪದವಿಯಲ್ಲಿ ಕುವೆಂಪು ಚಿನ್ನದ ಪದಕ ಮತ್ತು ಜಿ.ಎಸ್. ಶಿವರುದ್ರಪ್ಪ ಚಿನ್ನದ ಪದಕಗಳನ್ನು ಪಡೆದಿದ್ದಾರೆ. ಕನ್ನಡ ವಿಶ್ವವಿದ್ಯಾಲಯದ ದೂರಶಿಕ್ಷಣ ಕೇಂದ್ರದಿಂದ ಭಾಷಾಂತರ ಅಧ್ಯಯನ ಹಾಗೂ ಪುರಾತತ್ವ ಮತ್ತು ಪ್ರವಾಸೋದ್ಯಮ ಡಿಪ್ಲೊಮಾಗಳನ್ನು, ಎಂ.ಫಿಲ್ ಮತ್ತು ಪಿ.ಎಚ್.ಡಿ ...

READ MORE

Related Books