ವ್ಯವಹಾರಿಕ ಕನ್ನಡ

Author : ಬಸವರಾಜ ಸಬರದ

Pages 88

₹ 60.00




Year of Publication: 2010
Published by: ಪಲ್ಲವಿ ಪ್ರಕಾಶನ
Address: ವಿಶ್ವವಿದ್ಯಾಲಯ ಅಂಚೆ, ಗುಲಬರ್ಗಾ- 585106
Phone: 9886619220

Synopsys

‘ವ್ಯವಹಾರಿಕ ಕನ್ನಡ’ ಲೇಖಕ ಬಸವರಾಜ ಸಬರದ ಅವರು ರಚಿಸಿರುವ ಕೃತಿ. ಈ ಕೃತಿಗೆ ಮನು ಬಳಿಗಾರ್ ಅವರ ಬೆನ್ನುಡಿ ಬರಹವಿದೆ. ಕೃತಿಯ ಕುರಿತು ಬರೆಯುತ್ತಾ ಇತ್ತೀಚಿನ ಕನ್ನಡ ಸಾಹಿತ್ಯ ಸಂದರ್ಭದಲ್ಲಿ ಡಾ.ಬಸವರಾಜ್ ಸಬರದ ಒಂದು ಮಹತ್ವದ ಹೆಸರು. ಅಧ್ಯಯನ, ಅಧ್ಯಾಪನ ಎರಡರಲ್ಲೂ ಸಾಕಷ್ಟು ಹೆಸರು ಮಾಡಿರುವ ಮಿತ್ರ ಬಸವರಾಜ್ ಇದೀಗ ವ್ಯವಹಾರಿಕ ಕನ್ನಡ ಎಂಬ ಈ ಪುಟ್ಟ ಗ್ರಂಥ ರಚಿಸಿದ್ದಾರೆ. ಗಾತ್ರ ಚಿಕ್ಕದಾದರೂ ಇದು ವಿದ್ಯಾರ್ಥಿಗಳಿಗೆ, ಕನ್ನಡ ಭಾಷೆ ಬಗ್ಗೆ ತಿಳಿದುಕೊಳ್ಳಬೇಕು ಎನ್ನುವವರಿಗೆ ಹಾಗೆಯೇ ಸರಕಾರಿ ನೌಕರರಿಗೆ ತುಂಬ ಉಪಯುಕ್ತವಾದದ್ದಾಗಿದೆ ಎಂದು ಮೆಚ್ಚುಗೆ ಸೂಚಿಸಿದ್ದಾರೆ.

About the Author

ಬಸವರಾಜ ಸಬರದ
(20 June 1954)

ಬಸವರಾಜ ಸಬರದ ಅವರು ಮೂಲತಃ ಕೊಪ್ಪಳ ಜಿಲ್ಲೆ ಯಲಬುರ್ಗ ತಾಲ್ಲೂಕಿನ ಕುಕನೂರಿನವರು. ಹುಟ್ಟಿದ್ದು 1954 ಜೂನ್‌ 20ರಂದು. ತಾಯಿ ಬಸಮ್ಮ, ತಂದೆ ಬಸಪ್ಪ ಸಬರದ. ಹುಟ್ಟೂರು ಕುಕನೂರಿನಲ್ಲಿಯೇ ಪ್ರಾಥಮಿಕ ಶಿಕ್ಷಣ ಪಡೆದ ಇವರು ಕರ್ನಾಟಕ ವಿಶ್ವವಿದ್ಯಾಲಯದಿಂದ ಕನ್ನಡ ಭಾಷೆಯಲ್ಲಿ ಸ್ನಾತಕೋತ್ತರ ಪದವಿ ಹಾಗೂ ಪಿಎಚ್‌ಡಿ ಪದವಿ ಪಡೆದರು. ಉಪನ್ಯಾಸಕರಾಗಿ ವೃತ್ತಿ ಆರಂಭಿಸಿದ ಇವರು ಹಲವಾರು ಕಾಲೇಜುಗಳಲ್ಲಿ ಸೇವೆ ಸಲ್ಲಿಸಿದ್ದಾರೆ.  ಶೈಕ್ಷಣಿಕವಾಗಿ ಮಾತ್ರವಲ್ಲದೇ ದೇವದಾಸಿ ವಿಮೋಚನಾ ಹೋರಾಟ, ಅಂತರ್ಜಾತಿ ವಿವಾಹಗಳಿಗೆ ಪ್ರೋತ್ಸಾಹ, ಅಸ್ಪೃಶ್ಯತಾ ನಿವಾರಣೆ, ದಲಿತ-ಬಂಡಾಯ ಚಳವಳಿ ಮುಂತಾದ ಸಾಮಾಜಿಕ ಹೋರಾಟಗಳಲ್ಲಿಯೂ ತೊಡಗಿಸಿಕೊಂಡಿದ್ದಾರೆ.   ನನ್ನವರ ಹಾಡು, ಹೋರಾಟ, ...

READ MORE

Related Books