ಶಿಕ್ಷಣ ಕಥನ

Author : ಪಿ.ವಿ ನಿರಂಜನಾರಾಧ್ಯ

Pages 160

₹ 165.00




Year of Publication: 2023
Published by: ಅಹರ್ನಿಶಿ ಪ್ರಕಾಶನ
Address: ಅಂಚೆ ಕಚೇರಿ ರಸ್ತೆ, ಕೋಟೆ, ಶಿವಮೊಗ್ಗ - 577202
Phone: 9449174662

Synopsys

'ಶಿಕ್ಷಣ ಕಥನ' ಶಿಕ್ಷಣತಜ್ಞ, ಲೇಖಕ ಪ್ರೊ.ನಿರಂಜನಾರಾಧ್ಯ ಅವರ ಕೃತಿ. ತಮ್ಮ ವಿದ್ಯಾರ್ಥಿ ದಿನಗಳಿಂದಲೇ ನಮ್ಮ ಶಿಕ್ಷಣ ವ್ಯವಸ್ಥೆಯ ವಸ್ತುನಿಷ್ಠ ವಿಶ್ಲೇಷಣೆಯನ್ನು ಕೈಗೊಂಡವರಲ್ಲಿ ನಿರಂಜನಾರಾಧ್ಯರು ಒಬ್ಬರು. ಪ್ರಸ್ತುತ, ಅವರು ಕರ್ನಾಟಕದಲ್ಲಿ ಶಿಕ್ಷಣಕ್ಕೆ ಸಂಬಂಧಿಸಿದ ವಿಷಯಗಳನ್ನು ವಿಮರ್ಶಿಸುವ ಪ್ರಧಾನ ವಿಶ್ಲೇಷಕರಾಗಿದ್ದಾರೆ. ವಿವಿಧ ಲೇಖನಗಳ ಈ ಪ್ರಸ್ತುತ ಸಂಗ್ರಹವು ನಮ್ಮ ಶಿಕ್ಷಣ ವ್ಯವಸ್ಥೆಯ ಮೂಲಭೂತ ಸಮಸ್ಯೆಗಳನ್ನು ಅರ್ಥ ಮಾಡಿಕೊಳ್ಳಲು ನಮಗೆ ಸಹಾಯ ಮಾಡುತ್ತದೆ. ಪ್ರಾಥಮಿಕ ಹಂತದಲ್ಲಿ ಬೋಧನಾ ಮಾಧ್ಯಮವು ಮತ್ತೊಂದು ಜ್ವಲಂತ ಸಮಸ್ಯೆಯಾಗಿದೆ. ಕನಿಷ್ಠ, ಶಾಲಾ ಶಿಕ್ಷಣದ ಪ್ರಾಥಮಿಕ ಹಂತದಲ್ಲಿಯಾದರೂ ನಮ್ಮ ವಿದ್ಯಾರ್ಥಿಗಳು ಮಾತೃಭಾಷೆಯಲ್ಲಿ ಕಲಿಯುವುದನ್ನು ಕಡ್ಡಾಯಗೊಳಿಸುವ ಸಂವಿಧಾನದ ತಿದ್ದುಪಡಿಯನ್ನು ಮಾಡಲಾಗಿಲ್ಲ. ಅದರ - ಅಗತ್ಯವನ್ನು ಹಿಂದೆಂದಿಗಿಂತಲೂ ಈಗ ವ್ಯಾಪಕವಾಗಿ ಚರ್ಚಿಸಲಾಗುತ್ತಿದೆ. ಶಿಕ್ಷಣ ವ್ಯವಸ್ಥೆ ಮತ್ತು ಶಾಲೆಗಳ ವಿವಿಧ ಹಂತಗಳಲ್ಲಿ ಸೌಲಭ್ಯಗಳು ಮತ್ತು ಬೋಧನಾ ವಿಧಾನದಲ್ಲಿನ ಗುಣಾತ್ಮಕ ವ್ಯತ್ಯಾಸಕ್ಕೆ ಸಂಬಂಧಿಸಿದಂತೆ ಹಲವಾರು ಗಂಭೀರ ಸಮಸ್ಯೆಗಳವೆ. ಈ ವ್ಯತ್ಯಾಸಗಳು ಎಷ್ಟು ವ್ಯಾಪಕವಾಗಿವೆಯೆಂದರೆ, ಅಸಮಾನತೆ ಮತ್ತು ತಾರತಮ್ಯ ಹತಾಶ ಮಟ್ಟವನ್ನು ತಲುಪಿದೆ. ಈ ಪುಸ್ತಕ ವೈಜ್ಞಾನಿಕ, ಸಂವಿಧಾನಬದ್ಧ, ಮಾನವ ಪ್ರಗತಿಗೆ ಪೂರಕವಾದ ಮತ್ತು ಸೃಜನಶೀಲತೆಯ ನೆಲೆಯಲ್ಲಿ ಕಲಿಕೆಗೆ ಆರೋಗ್ಯಕರ ವಾತಾವರಣದತ್ತ ನಮಗೆ ಮಾರ್ಗದರ್ಶನ ನೀಡುತ್ತದೆ. ಈ ಪುಸ್ತಕ ದೀರ್ಘಾವಧಿಯಲ್ಲಿ ಶಿಕ್ಷಕರಿಗೆ, ನೀತಿ ನಿರೂಪಕರಿಗೆ, ಕಾರ್ಯನಿರ್ವಾಹಕರಿಗೆ ಮತ್ತು ಸಾಮಾಜಿಕ ಕಾರ್ಯಕರ್ತರಿಗೆ ಅಧಿಕೃತ ಮಾರ್ಗದರ್ಶಿ ಹಾಗು ಆಕರ ಗ್ರಂಥವಾಗುತ್ತದೆ.

About the Author

ಪಿ.ವಿ ನಿರಂಜನಾರಾಧ್ಯ

ಶಿಕ್ಷಣ ತಜ್ಞ ಪಿ.ವಿ ನಿರಂಜನಾರಾಧ್ಯ ಅವರು ಲೇಖಕರು ಹೌದು. ಸಾಹಿತ್ಯ ಅವರ ಆಸಕ್ತಿ ಕ್ಷೇತ್ರ. ಕೃತಿಗಳು: ಪಠ್ಯ ಮರು ಪರಿಷ್ಕರಣೆ ಹಿನ್ನೆಲೆ-ಮುನ್ನೆಲೆ ...

READ MORE

Related Books