ಕನ್ನಡ ಅಸ್ಮಿತೆ ಶಾಂತಿ ಮತ್ತು ಸಾಮರಸ್ಯ

Author : ವಿವಿಧ ಲೇಖಕರು

Pages 224

₹ 280.00




Year of Publication: 2023
Published by: ವಿಘ್ನೇಶ್ವರ ಪ್ರಕಾಶನ

Synopsys

“ಕನ್ನಡ ಅಸ್ಮಿತೆ: ಶಾಂತಿ ಮತ್ತು ಸಾಮರಸ್ಯ” ಎಂಬ ಗ್ರಂಥವು ಜಾನಪದ, ಶಾಸನ ಹಾಗೂ ಹಳಗನ್ನಡ-ನಡುಗನ್ನಡ ಸಾಹಿತ್ಯವನ್ನು ಶಾಂತಿ ಮತ್ತು ಸಾಮರಸ್ಯದ ಹಿನ್ನೆಲೆಯಲ್ಲಿ ಶೋಧಿಸಲ್ಪಟ್ಟ ಪ್ರಬಂಧಗಳಿಂದ ಸಂಪನ್ನಗೊಂಡಿದೆ. ಕನ್ನಡ ಅಸ್ಮಿತೆಯಾಗಿ ಅರಳಿ ನಾಡು-ನುಡಿ-ನಾಡವರೊಳಗೆ ಅಂತರ್ಗತವಾಗಿರುವ ಶಾಂತಿ ಮತ್ತು ಸಾಮರಸ್ಯದ ತಾತ್ವಿಕ ನೆಲೆಯ ಅನುಸಂಧಾನ, ಕರ್ನಾಟಕ ಸಾಹಿತ್ಯಕ ಹಾಗೂ ಸಾಂಸ್ಕೃತಿಕ ಪರಂಪರೆಯಲ್ಲಿನ ಸಾಮರಸ್ಯ ಮತ್ತು ಸೌಹಾರ್ದತೆಯ ಗುರುತುಗಳು, ಮಾನವೀಯ ಮೌಲ್ಯಗಳು, ಮೈಮನ ಮೈತ್ರಿಯ ಯೋಗಾಚಾರ, ಜಾನಪದ ಜೀವನ-ಕಾವ್ಯಯಾನದಲ್ಲಿ ಜೀವತಂತುವಾಗಿ ಮೂಡಿಬಂದಿರುವ ಶಾಂತಿ ಮತ್ತು ಸಾಮರಸ್ಯದ ಅಭಿವ್ಯಕ್ತಿ, ಪಂಪನ ಆದಿಪುರಾಣದ ಪಾತ್ರವೊಂದರ ಮನಃಶಾಂತಿಯ ಶೋಧ, ಕನ್ನಡ ಶಾಸನಗಳಲ್ಲಿ ಶಾಂತಿ ಮತ್ತು ಸಾಮರಸ್ಯದ ವಿವೇಚನೆ, ಬೌದ್ಧಧರ್ಮದ ತಳಹದಿಯಾಗಿರುವ ಶಾಂತಿ ಮತ್ತು ಸಾಮರಸ್ಯ, ಕರ್ನಾಟಕದ ಸೌಹಾರ್ದತೆಯ ನೆಲೆಗಳಲ್ಲಿ ಬುದ್ಧತ್ವದ ಅನಾವರಣ, ಚಿನ್ನದ ನಾಡಿನೊಳಗಣ ಶಾಂತಿ ಮತ್ತು ಸಾಮರಸ್ಯದ ಮಾದರಿ ಕಲಾಗ್ರಾಮವಾಗಿ ಅರಳಿರುವ ಶಿವಾರಪಟ್ಟಣ - ಹೀಗೆ ಕನ್ನಡದೊಳಗಣ ಶಾಂತಿ-ಸಾಮರಸ್ಯ ನೆಲೆಗಳನ್ನು ಸಾಹಿತ್ಯಕವಾಗಿ, ಸಾಂಸ್ಕೃತಿಕವಾಗಿ ಹಾಗೂ ಭೌಗೋಳಿಕವಾಗಿ ಬಹುನೋಟದಲ್ಲಿ ಅನುಸಂಧಾನ ಮಾಡಿರುವ ಬಗೆಯು ಸಂಶೋಧಕರೆಲ್ಲ ಸೂಕ್ಷö್ಮಸಂವೇದನಾಶೀಲತೆಗೆ ಸಾಕ್ಷಿಯಾಗಿದೆ.

About the Author

ವಿವಿಧ ಲೇಖಕರು

. ...

READ MORE

Related Books