ಅಮೆರಿಕ ಅಂತರಂಗ

Author : ಗಿರೀಶ್ ಕೋಟೆ

Pages 127

₹ 60.00




Year of Publication: 2002
Published by: ನಮ್ಮ ನಾಡು ಪ್ರಕಾಶನ
Address: ಕೆ.ಎಸ್‌ಆರ್‌ಟಿಸಿ ಬಸ್‌ ನಿಲ್ದಾಣ, ಎನ್‌.ಟಿ.ರಸ್ತೆ, ಜೆ.ಸಿ ನಗರ, ಶಿವಮೊಗ್ಗ
Phone: 2909079621

Synopsys

ಅಮೆರಿಕ ಅಂತರಂಗ ಕೆ.ಗಿರೀಶ್‌ ಅವರ ಕೃತಿಯಾಗಿದೆ. ಅಮೆರಿಕದಲ್ಲಿನ ಸೆಪ್ಟೆಂಬರ್‍ 11ರ ಘಟನೆಗೆ ಸಂಬಂಧಿಸಿ ಹಲವು ಸತ್ಯಗಳನ್ನು ತೆರೆದಿಡುವ ಲೇಖನಗಳ ಸಂಕಲನದ ಇದು. ಅಮೆರಿಕವಾಗಲೀ, ರಷ್ಯ, ಜಪಾನ್, ಜರ್ಮನಿ, ಫ್ರಾನ್ಸ್ ಇಟಲಿ ಮುಂತಾದ ಯಾವುದೇ ಸಾಮ್ರಾಜ್ಯಶಾಹಿಯಾಗಲೀ ಫಿಲಿಕ್ಸ್ ಗ್ರೀನ್ ಹೇಳುವಂತೆ ಸರಳವಾಗಿ ಹೇಳಬೇಕೆಂದರೆ - ಅವು ಜನತೆಯ ಸಾಮಾನ್ಯ ಶತ್ರುಗಳು" ಇಂತಹ ಜನತೆಯ ನಿಜವಾದ ಶತ್ರುಗಳ ಬಗ್ಗೆ ಜನರಲ್ಲಿ ಅರಿವು ಮೂಡಬೇಕಾದ್ದು ಎಲ್ಲ ಜನಪರ ಕಾಳಜಿಯ ಬರಹಗಾರರ ಕರ್ತವ್ಯವಾಗಿದೆ. ''ಶೋಷಣೆ ತೀವ್ರವಾಗಿದ್ದಾಗ ಬುದ್ದಿಜೀವಿಗಳು ಹಾಗೂ ಕಲಾವಿದರ ಪ್ರತಿಕ್ರಿಯೆ ಏನಾಗಿರಬೇ ಕು? ಅವರು ಮೌನವಾಗಿ ಉಳಿದು ತಮ್ಮ ಮೇಲೆ ತಾವೇ ಸ್ವಯಂ ಸೆನ್ಸಾರ್‌ಶಿಪ್' ವಿಧಿಸಿಕೊಳ್ಳಬಹು ದು ಅಥವಾ 'ಪ್ರಭುತ್ವ ಪೂಜಾರಿ'ಗಳ ಪಟ್ಟಿಯಲ್ಲಿ ಸೇರಲೂಬಹುದು. ಆದರೆ ಹಾಗೆ ಮಾಡುವುದರ ಮೂಲಕ ಅವರು ಬುದ್ದಿಜೀವಿಗಳಾಗಿ ಉಳಿಯುವುದಿಲ್ಲ. ಏಕೆಂದರೆ ಬರಹಗಾರರು ಸಮಾಜಕ್ಕೆ ಕನ್ನಡಿ ಇದ್ದ ಹಾಗೆ, ಕನ್ನಡಿ ಸತ್ಯವನ್ನು ಪ್ರತಿಫಲಿಸಬೇಕು - ಸತ್ಯವನ್ನು ಪ್ರತಿಫಲಿಸದಿದ್ದ ಮೇಲೆ ಅದು ಕನ್ನಡಿಯಾಗಿ ಉಳಿಯುವುದಿಲ್ಲ. ಪ್ರಭುತ್ವವು ಮಾತನ್ನು ಹತ್ತಿಕ್ಕಿದಾಗ ಕಲೆ ಮೌನಕ್ಕೆ ಮಾತು ಕೊಡಬೇಕು. ...'' ಇದು ಗೂಗಿಯ ಮಾತು . ಎಂದು ಎಸ್‌ ಸುಂದರ್‌ ಪುಸ್ತಕದ ಮುನ್ನುಡಿಯಲ್ಲಿ ತಿಳಿಸಿದ್ದಾರೆ.

About the Author

ಗಿರೀಶ್ ಕೋಟೆ

ಗಿರೀಶ್ ಕೋಟೆ 18 ವರ್ಷ ಪತ್ರಕರ್ತನಾಗಿ ನಮ್ಮ ನಾಡು, ವಿಜಯ ಕರ್ನಾಟಕ, ವಿಜಯವಾಣಿ ಪತ್ರಿಕೆಗಳಲ್ಲಿ ಮುಖ್ಯ ವರದಿಗಾರನಾಗಿ ಕೆಲಸ ಮಾಡಿದ್ದ ಅನುಭವ ಹೊಂದಿದ್ದಾರೆ. ಇವರ ಸ್ವತಂತ್ರ ಕೃತಿಗಳು : ಅಮೆರಿಕ ಅಂತರಂಗ ಸಂಪಾದಿತ ಕೃತಿಗಳು: ಪ್ರೀತಿಗಾಗಿ, ಸಮರ ಸೇನಾನಿ ...

READ MORE

Related Books