ಕ್ಯಾಂಪಸ್ ಕಹಾನಿ

Author : ಯೋಗೇಶ್ ಮಲ್ಲೂರು

Pages 102

₹ 90.00




Year of Publication: 2022
Published by: ಗೋಮಿನಿ ಪ್ರಕಾಶನ
Address: ತುಮಕೂರು 572118

Synopsys

ಕ್ಯಾಂಪಸ್ ಕಹಾನಿ ಯೋಗೇಶ್ ಮಲ್ಲೂರು ಅವರ ಕೃತಿಯಾಗಿದೆ. ಈ ಜಗತ್ತಿನ ಸೃಷ್ಟಿ ಮತ್ತು ಚಲನೆ ಸಾಧ್ಯವಾಗಿರುವುದು ಪ್ರೀತಿಯಿಂದ ಮಾತ್ರ. ಎಲ್ಲಾ ಜೀವಿಗಳಿಗಿಂತ ವಿಭಿನ್ನವಾದದ್ದು ಮಾನವನ ಪ್ರೀತಿ. ಕಾರಣ, ನಿಮಗೆ ಗೊತ್ತಿರುತ್ತದೆ ಅದು ಮಾನವನ ಮನಸ್ಸು! ಪ್ರೌಢಾವಸ್ಥೆಯಿಂದ ಹದಿಹರೆಯಕ್ಕೆ ಕಾಲಿಡುವ ಮನುಜನ ಮನಸ್ಸಿರುತ್ತದೆ ನೋಡಿ, ಅದು ಬಹಳ ಸೂಕ್ಷ. ಎಲ್ಲವನ್ನು ತಿಳಿದುಕೊಳ್ಳಬೇಕು, ಒಳಗೊಳ್ಳಬೇಕು ಎಂಬ ತುಡಿತ ಸದಾ ಮಿಡಿಯುವ ಸಮಯವದು. ಈ ಸಮಯದಲ್ಲಿ ಅಂತರಂಗದ ಮತ್ತು ಬಹಿರಂಗದ ಜಗತ್ತು ಬಹಳ ಸುಂದರವಾಗಿರುತ್ತದೆ. ಜೊತೆಗೆ ತನು-ಮನದಲ್ಲಿ ಪ್ರಕೃತಿ ತನ್ನ ಮೇಲುಗೈಯನ್ನು ಸಾಧಿಸಿರುತ್ತದೆ. ಈ ಹೊತ್ತಿನಲ್ಲಿಯೇ ಕಾಲೇಜಿಗೆ ಕಾಲಿಡುವ ಹದಿಹರೆಯದ ಮನಸ್ಸುಗಳಲ್ಲಿ ಜಗತ್ತು ಸ್ವರ್ಗಸಮಾನವಾಗಿರುತ್ತದೆ. ಜ್ಞಾನಾರ್ಜನೆಯ ಜೊತೆಜೊತೆಗೇ ಹೃದಯದ ಬಡಿತಗಳು ಆಗಾಗ ಏರುಪೇರಾಗುತ್ತಿರುತ್ತವೆ. ಈ ಹೃದಯದ ಬಡಿತಗಳನ್ನು ಬಹುತೇಕ ಹದಿಹರೆಯದ ಮನಸ್ಸುಗಳು ತಮ್ಮ ಹೃದಯದಲ್ಲೇ ಬಚ್ಚಿಟ್ಟುಕೊಂಡರೆ, ಯೋಗೇಶ್ ಮಲ್ಲೂರು ಅವನ್ನು ಇಲ್ಲಿ ಅಕ್ಷರಗಳನ್ನಾಗಿಸಿ ಅಮರವಾಗಿಸಿದ್ದಾರೆ. ಈ ಮೂಲಕ ನಮಗೆ ಅವನ್ನು ಹಂಚಿ ನಮ್ಮ ಹೃದಯದ ಮೆಲುಕುಗಳ ಜಾತ್ರೆಯ ಸಂಭ್ರಮಕ್ಕೆ ಕಾರಣೀಭೂತರಾಗಿದ್ದಾರೆ. ಅವರಿಗೆ ನಿಮ್ಮ ಒಂದು ಹಿಡಿ ಪ್ರೀತಿಯಿರಲಿ ಎಂದು ಗುಬ್ಬಚ್ಚಿ ಸತೀಶ್ ಪುಸ್ತಕದ ಮುನ್ನುಡಿಯಲ್ಲಿ ತಿಳಿಸಿದ್ದಾರೆ.

About the Author

ಯೋಗೇಶ್ ಮಲ್ಲೂರು

ತುಮಕೂರು ಜಿಲ್ಲೆಯ ತುರುವೇಕೆರೆ ತಾಲ್ಲೂಕಿನ ಮಾಯಸಂದ್ರ ಹೋಬಳಿಯ ಮಲ್ಲೂರು ಗ್ರಾಮದಲ್ಲಿ 06 -11- 1997ರಲ್ಲಿ ಜನಿಸಿದ ಇವರು ವೃತ್ತಿಯಲ್ಲಿ ಪತ್ರಕರ್ತರಾಗಿದ್ದಾರೆ. ಉದಯವಾಣಿ, ಪ್ರಜಾಪ್ರಗತಿ, ಬೆವರಹನಿ ಪತ್ರಿಕೆಗಳಲ್ಲಿ ವರದಿಗಾರರಾಗಿ ಕರ್ತವ್ಯ ನಿರ್ವಹಿಸಿದ್ದು, ಪ್ರಸ್ತುತ ಬೆಂಕಿಯ ಬಲೆ ದಿನಪತ್ರಿಕೆ, ಪಬ್ಲಿಕ್ ಆಪ್ ಮತ್ತು ಪಬ್ಲಿಕ್ ವೈಬ್ ಎಂಬ ಡಿಜಿಟಲ್ ನ್ಯೂಸ್ ಆಪ್‌ಗಳಲ್ಲಿ ಜಿಲ್ಲಾ ವರದಿಗಾರರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಚಾರಣ, ಸಿನಿ ಸಾಹಿತ್ಯ, ವಿಮರ್ಶೆ, ಕಥೆ, ಲೇಖನ, ವಿಶ್ಲೇಷಣೆ, ಹಾಡು, ಕ್ರಿಕೆಟ್ ಇವರ ಹವ್ಯಾಸಗಳು. ಬರವಣಿಗೆಯೇ ಇವರ ಮೂಲ ವೃತ್ತಿ. ಇಲ್ಲಿಯವರೆಗೆ ಇವರು ೧೫೦ಕ್ಕೂ ಹೆಚ್ಚು ಲೇಖನಗಳು, ೬೦ಕ್ಕೂ ಹೆಚ್ಚು ಕವಿತೆಗಳು, ...

READ MORE

Related Books