ಒಡಲ ಚಿಗುರು

Author : ಪ್ರವೀಣ ಪೋಲಿಸ ಪಾಟೀಲ



Year of Publication: 2021

Synopsys

ಲೇಖಕ ಪ್ರವೀಣ ಪೊಲೀಸ್ ಪಾಟೀಲ ಅವರ 'ಒಡಲ ಚಿಗುರು' ಕೃತಿಯು ಲೇಖನ ಸಂಕಲನ. ಒಡಲ ಚಿಗುರಿನ ಒಡಲಲ್ಲಿ ಹದಿನಾಲ್ಕು ಲೇಖನಗಳಿವೆ. ಈ ಕೃತಿಗೆ ಬೆನ್ನುಡಿ ಬರೆದಿರುವ ಬಸವರಾಜ ಡೋಣೂರ ಅವರು ಕನ್ನಡ ರಂಗಭೂಮಿ ಚಿಂತನೆಗೆ ಇಲ್ಲಿ ಅಗ್ರ ಸ್ಥಾನ ದೊರಕಿದೆ. ಇಲ್ಲಿ ರಂಗಭೂಮಿಯ ಪ್ರಧಾನ ಧಾರೆಯ ಬಗ್ಗೆ ಲೇಖಕನಿಗೆ ಅಭಿಮಾನವಿದ್ದರೂ ಅಪ್ರಧಾನ, ಅಪ್ರಮುಖ ನಾಟಕ-ರಂಗಭೂಮಿಯ ಚಿಂತನೆಗಳ ಬಗ್ಗೆ ಹೆಚ್ಚಿನ ಒಲವು ಮತ್ತು ಆಸಕ್ತಿಹೊಂದಿದ್ದನು ಕಾಣಬಹುದು. ಜನಪದ ರಂಗಭೂಮಿಯಲ್ಲಿ ಮಹಿಳೆಯರ ಆಗಮನ ತುಂಬಾ ತಡವಾಗಿದ್ದರೂ ರಂಗಭೂಮಿಯ ಅಭಿವೃದ್ಧಿಯಲ್ಲಿ ಅವರು ನಿರ್ವಹಿಸಿದ ಪಾತ್ರ ಅಗಾಧವೂ ವಿಶಿಷ್ಟವೂ ಆಗಿದೆ. ಆ ಎಲ್ಲಾ ವಿಚಾರಗಳು ಇಲ್ಲಿ ಸುಧೀರ್ಘವಾಗಿ ಚರ್ಚೆಗೆ ಒಳಗೊಳ್ಳುತ್ತದೆ. ಶ್ರೀಕೃಷ್ಣ ಪಾರಿಜಾತದಲ್ಲಿ ಮಹಿಳೆಯರೇ ಶ್ರೀಕೃಷ್ಣನ ಪಾತ್ರ ನಿಭಾಯಿಸಿದ ನಿದರ್ಶನವಿದೆ. ಸಮಾಜದ ಕೆಳಸ್ತರಗಳಿಂದ ಬಂದ ಮಹಿಳೆಯರು, ದೇವದಾಸಿಯರು ಜಾನಪದ ರಂಗಭೂಮಿಯ ಶ್ರೀಮಂತಿಕೆಯನ್ನು ಹೆಚ್ಚಿಸಿದವರು ಇಲ್ಲಿ ಲೇಖಕರ ಕಣ್ಣಿಗೆ ಕಂಡಿದ್ದಾರೆ. ಹೀಗೆ ಕನ್ನಡ ನಾಟಕಗಳಲ್ಲಿ ಕಾಣಿಸಿಕೊಂಡ ಸಾಮಾಜಿಕತೆಯ ಸ್ವರೂಪ, ಕೈಲಾಸಂ ಮತ್ತು ಶ್ರೀರಂಗರು ಕನ್ನಡ ನಾಟಕದ ಸಾಧ್ಯತೆಗಳನ್ನು ವಿಸ್ತರಿಸಿದ ಬಗೆ, ಗ್ರಾಮೀಣ ಪರಿಸರದಲ್ಲಿ ವೃತ್ತಿರಂಗಭೂಮಿ ನಿರ್ವಹಿಸಿದ ಪಾತ್ರಗಳನ್ನು ವಿಸ್ತರಿಸಿದ ಬಗ್ಗೆ ಇಲ್ಲಿ ಚರ್ಚಿಸಲಾಗಿದೆ. ಇಲ್ಲಿ ಪ್ರಧಾನ ಚಿಂತನೆ ಹರಳುಗಟ್ಟಿದೆ. ತನಗೆ ಸಿಗುವ ಅವಕಾಶಗಳನ್ನು ಮಹಿಳೆ ಹೇಗೆ ಬಳಸಿಕೊಳ್ಳುತ್ತಾಳೆ, ಆ ಮೂಲಕ ಅವಳು ತನ್ನ ಬದುಕನ್ನು ಕಟ್ಟಿಕೊಂಡು ಸಮಾಜದ ಅಭಿವೃದ್ಧಿ ಹಾಗೂ ಆರೋಗ್ಯ ಹೇಗೆ ಹೆಚ್ಚಿಸುತ್ತಾಳೆ ಎಂಬುದರ ಕುರಿತು ಚಿಂತನೆ ನಡೆದಿದೆ ಎನ್ನುತ್ತಾರೆ. ನಾಟಕ ರಂಗಭೂಮಿಯ ಸ್ಪಷ್ಟ ತಿಳುವಳಿಕೆಯಲ್ಲಿ, ವಿಷಯ ಗ್ರಹಿಕೆ ಮತ್ತು ವಿಷಯ ಮಂಡನೆಯಲ್ಲಿ ಕಾಣುವ ಪ್ರಬುದ್ಧತೆ, ಸರಳವೂ ಸುಲಭವೂ ಆದ ಭಾಷೆ, ಆಪ್ತಶೈಲಿ ’ಒಡಲ ಚಿಗುರು’ ಕೃತಿಯ ಮೌಲಿಕತೆ , ಪ್ರಸ್ತುತತೆ ಹೆಚ್ಚಿಸಿವೆ.

About the Author

ಪ್ರವೀಣ ಪೋಲಿಸ ಪಾಟೀಲ

ಲೇಖಕ ಪ್ರವೀಣ ಪೋಲಿಸ ಪಾಟೀಲ ಅವರು ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ತರಲಕಟ್ಟಿ ಗ್ರಾಮದವರು. ಕೊಪ್ಪಳದ ಶ್ರೀ ಗವಿಸಿದ್ದೇಶ್ವರ ಮಹಾವಿದ್ಯಾಲಯದಲ್ಲಿ ಪದವಿ ಪೂರೈಸಿ, ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ ಕನ್ನಡ ಎಂ.ಎ. ಪದವಿ ಪಡೆದು, ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ 'ಆಧುನಿಕ ಕನ್ನಡ ರಂಗಭೂಮಿ ಮತ್ತು ರಂಗಪ್ರಯೋಗಗಳು' ಎಂಬ ಸಂಶೋಧನಾ ಮಹಾಪ್ರಬಂಧಕ್ಕೆ ಪಿಎಚ್.ಡಿ ಪದವಿ ಪಡೆದಿದ್ದಾರೆ. ಇವರು, ರಂಗಕಲಾವಿದರೂ ಹೌದು. ಕ್ರೈಸ್ಟ್ ಕಾಲೇಜಿನ ಬೇಂದ್ರೆ ಕಾವ್ಯ ಪುರಸ್ಕಾರ ಹಾಗೂ ಅ.ನ.ಕೃ. ಕಥಾ ಪುರಸ್ಕಾರಗಳನ್ನು ಪಡೆದಿದ್ದಾರೆ. ಅವರ 'ನಿರ್ದೇಶಕಿಯಾದ ನನ್ನವ್ವ' ಕಥೆಯು, ಬಳ್ಳಾರಿಯ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಬಿ.ಕಾಂ. ಪದವಿಯ ಎರಡನೆಯ ಸೆಮಿಸ್ಟರ್ ಗೆ 2016 ರಿಂದ ...

READ MORE

Related Books