ಸಮಕಾಲೀನ ಸಾಹಿತ್ಯ

Author : ದೊಡ್ಡರಂಗೇಗೌಡ

Pages 279

₹ 300.00




Year of Publication: 2023
Published by: ಕಾವ್ಯ ಸ್ಪಂದನ ಪಬ್ಲಿಕೇಷನ್ಸ್
Address: # 53, 5ನೇ ಟೆಂಪಲ್ ರಸ್ತೆ, ಸಿದ್ಧಾಂತಿ ಬ್ಲಾಕ್‌, ಮಲ್ಲೇಶ್ವರಂ, ಬೆಂಗಳೂರು-560003
Phone: 8861495610

Synopsys

ಮತ್ತೆ ಮತ್ತೆ ಸಾಹಿತ್ಯದ ಪುನರ್ ಮೌಲ್ಯಮಾಪನ ಆಗುತ್ತಲೇ ಇರಬೇಕು. ಕಾಲ ಬದಲಾದ ಹಾಗೆ ಕಾವ್ಯವನ್ನು ನೋಡುವ ದೃಷ್ಟಿಕೋನವೂ ರೂಪಾಂತರ ಕಾಣುತ್ತಾ ಹೋಗುತ್ತದೆ. ಹೊಸ ಕಾಲಘಟ್ಟದಲ್ಲಿ ವಾಚಕನ ಹೊಸ ಓದು, ಹೊಸ ರೀತಿಯಲ್ಲಿ ಒರೆ ಹಚ್ಚುವ ರೀತಿ ನೂತನ ನಿಕಷವನ್ನೇ ಅನ್ವಯಿಸುವಂತೆ  ಮಾಡುತ್ತದೆ.  ಇಂದು ವಿಜ್ಞಾನ ಬೆಳೆದಿದೆ; ತಂತ್ರಜ್ಞಾನ ಬೆಳೆದಿದೆ. ಈ ಹಿನ್ನಲೆಯಲ್ಲಿ ಸಾಹಿತ್ಯ ಕೃತಿಗಳಿಗೆ ವಿಮರ್ಶಕರು ಸ್ಪಂದಿಸುವ ವಿನೂತನ ಬಗೆಯಲ್ಲೂ ಶಾಶ್ವತ ಮೌಲ್ಯಗಳ ಸ್ಥಿರೀಕರಣ ಓದುಗನಿಗೆ ಆನಂದ ನೀಡುತ್ತದೆ. ಅಂಥಾ ರಸಾನಂದವನ್ನು ನೀಡುವ ಈ ಕೃತಿ ವಾಚಕ ಮಹನೀಯರಿಗೆ ಇಷ್ಟವಾಗುತ್ತದೆ  ಎಂబ ನಂಬುಗೆ ನಮ್ಮದು ಎಂದು ಪ್ರಕಾಶಕರು ಬೆನ್ನುಡಿಯಲ್ಲಿ ತಿಳಿಸಿದ್ದಾರೆ.

About the Author

ದೊಡ್ಡರಂಗೇಗೌಡ
(07 February 1946)

ಕವಿ, ಸಾಹಿತಿ ಮನುಜ ಕಾವ್ಯನಾಮದ ಮೂಲಕ ಪರಿಚಿತರಾಗಿರುವ ದೊಡ್ಡರಂಗೇಗೌಡ ಅವರು, ತುಮಕೂರು ಜಿಲ್ಲೆ ಕುರುಬರಹಳ್ಳಿಯಲ್ಲಿ 1946 ಫೆಬ್ರುವರಿ 7ರಂದು ಜನಿಸಿದರು. ತಂದೆ ರಂಗೇಗೌಡ, ತಾಯಿ ಅಕ್ಕಮ್ಮ.  ಬೆಂಗಳೂರು ವಿಶ್ವವಿದ್ಯಾಲಯದಿಂದ ಪದವಿ ಹಾಗೂ ಸ್ನಾತಕೋತ್ತರ ಪದವಿ ಪಡೆದ ಇವರು, ‘ಕನ್ನಡ ನವೋದಯ ಕಾವ್ಯ- ಒಂದು ಪುನರ್‌ಮೌಲ್ಯಮಾಪನ ’ ಎಂಬ ಪ್ರಬಂಧ ಮಂಡಿಸಿ ಪಿಎಚ್‌ಡಿ ಪಡೆದರು. ಬೆಂಗಳೂರಿನ ಎಸ್‌.ಎಲ್‌.ಎನ್‌ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸಿದ್ದಾರೆ.  ಕಾಲೇಜು ದಿನಗಳಲ್ಲೇ ಕವನ, ಕತೆ ರಚನೆಯಲ್ಲಿ ತೊಡಗಿಕೊಂಡಿದ್ದ ಇವರು ಸುಮಾರು 500ಕ್ಕೂ ಹೆಚ್ಚು ಚಲನಚಿತ್ರ ಗೀತೆಗಳನ್ನು ಬರೆದಿದ್ದಾರೆ. ಕಾವ್ಯ, ವಿಮರ್ಶಾ ಕೃತಿಗಳು, ಭಾವಗೀತೆ ಹಾಗೂ ...

READ MORE

Related Books