ಎತ್ತಿನಗಾಡಿ ಎಕ್ಸ್ ಪ್ರೆಸ್ ಭಾಗ ಎರಡು

Author : ವಿನಿಶಾ ತಿರ್ಥಹಳ್ಳಿ

₹ 200.00




Year of Publication: 2023
Published by: ಮಂದಾನಿಲ ಪ್ರಕಾಶನ
Address: ಸೀಗಲ್ ನೆಸ್ಟ್, ಮಿಯಾರು ಗ್ರಾಮ, ಕುಂಟಿಬೈಲು, ಕಾರ್ಕಳ ತಾಲೂಕು- ೫೭೪೧೦೭

Synopsys

‘ಎತ್ತಿನಗಾಡಿ ಎಕ್ಸ್ ಪ್ರೆಸ್ ಭಾಗ ಎರಡು’ ಕೃತಿಯು ವಿನಿಶಾ ತೀರ್ಥಹಳ್ಳಿ ಅವರ ಲೇಖನ ಸಂಕಲನವಾಗಿದೆ.ಇಲ್ಲಿ ತೀರ್ತಳ್ಳಿ, ಬೆದ್ರ, ಕಾರ್ಲ, ಬೆಂಗ್ಳೂರ್ ಪ್ರದೇಶದ ಭಾಷೆಗಳು ಮಿಳಿತಗೊಂಡಿವೆ. ಇಲ್ಲಿನ 51 ಲಲಿತಾ ಬರಹಗಳಿಗೆ 'ಲಘು ಬರಹಗಳ ಕಂತೆ' ಎಂಬ, ಒಳಗಿನ ಬರಹಗಳದ್ದೇ ಶೈಲಿಯ ಉಪಶೀರ್ಷಿಕೆ ನೀಡಲಾಗಿದೆ. ಈ 51 ಲೇಖನಗಳನ್ನು ಲೇಖಕಿ ಆತ್ಮಕಥನದ ಶೈಲಿಯಲ್ಲಿ ಬರೆದಿದ್ದಾರೆ. ತಮ್ಮ ದೈನಂದಿನ ಬದುಕಿನಲ್ಲಿ ತಾವು ಕಣ್ಣಾರೆ ಕಂಡ ಹಾಗೂ ಸ್ವತಃ ಅನುಭವಿಸಿದ ವಿಚಾರಗಳನ್ನೇ ಎತ್ತಿಕೊಂಡಿದ್ದಾರೆ. ಸೂಕ್ಷ್ಮ ಕಣ್ಣುಗಳ ಅವರ ತಂಗಿ ಮುದ್ದು ತೀರ್ಥಹಳ್ಳಿ ಅವರ ಎಲ್ಲ ಅನುಭವಗಳಲ್ಲಿ ಸದಾ ಅವರ ಜೊತೆಗೆ ಇರುತ್ತಾರೆ. ಪತಿ ಪ್ರಸಾದ್ ಕೂಡಾ ಇರುತ್ತಾರೆ. ಎದ್ರು ಮನೆಯವರೂ, ಪಕ್ಕದ ಮನೆಯವರು, ಹಿಂದಿನ ಮನೆಯವರು ಊರೂರು ಸುತ್ತುತ್ತಾ ಇದ್ದ ಕುಟುಂಬವಾಗಿದ್ದರಿಂದ ಅವರು ಹಿಂದೆ ಇದ್ದ ಹಳ್ಳಿಯವರು-ಹೀಗೆ ಎಲ್ಲರೂ ಇಲ್ಲಿ ನುಸುಳುತ್ತಾರೆ. ಹೀಗೆ ಹಲವು ಹಳ್ಳಿಗಳ ಸಹಜೀವನದ ಚಿತ್ರಣ ಈ ಲೇಖನಗಳಲ್ಲಿ ಸಿಗುತ್ತದೆ. ಯಾರು ಮುಗ್ಧರು, ಯಾರು ವಂಚಕರು, ಯಾರು ಸ್ವಾರ್ಥಿಗಳು, ಯಾರು ಅವಕಾಶವಾದಿಗಳು ಎಂಬುದನ್ನೂ ಸೂಚ್ಯವಾಗಿ ಅವರು ಸೇರಿಸಿಕೊಳ್ಳುತ್ತಾರೆ. ನವಿರು ಹಾಸ್ಯದ ಜತೆಗೆ ಜನರ ಸ್ವಭಾವ ವೈಚಿತ್ರ್ಯಗಳನ್ನೂ ಲೇಖಕಿ ಬಣ್ಣಿಸುವ ಪರಿಯಲ್ಲಿ ಪ್ರೌಢಿಮೆ ಎದ್ದು ಕಾಣುತ್ತದೆ.‌

About the Author

ವಿನಿಶಾ ತಿರ್ಥಹಳ್ಳಿ

ವಿನಿಶಾ ತಿರ್ಥಹಳ್ಳಿ ಮೂಲತಃ ತೀರ್ಥಹಳ್ಳಿಯವರು. ಸಾಹಿತ್ಯ ಕ್ಷೇತ್ರದಲ್ಲಿ ವಿಶೇಷ ಆಸಕ್ತಿಯನ್ನು ಹೊಂದಿರುವ ಅವರು ಎತ್ತಿನಗಾಡಿ ಎಕ್ಸ್ ಪ್ರೆಸ್ ಭಾಗ ಒಂದು ಹಾಗೂ ಎತ್ತಿನಗಾಡಿ ಎಕ್ಸ್ ಪ್ರೆಸ್ ಭಾಗ ಎರಡು ಕೃತಿಗಳನ್ನು ಹೊರತಂದಿದ್ದಾರೆ. ...

READ MORE

Related Books